ChatGPT Image Oct 3, 2026, 08_41_04 PM-modified
GREATER BENGALURU NEWS 9
BMTC

ಬೆಂಗಳೂರು: ನಗರದ ಬಿಎಂಟಿಸಿ ಪ್ರಯಾಣಿಕರಿಗೆ ಮಹತ್ವದ ಮಾಹಿತಿ ಎನ್ನುವಂತೆ ಇಂದಿನಿಂದ ಜನವರಿ.30ರವರೆಗೆ “ನಮ್ಮ ಬಿಎಂಟಿಸಿ” ಮೊಬೈಲ್ ಅಪ್ಲಿಕೇಶನ್ನ ತಾತ್ಕಾಲಿಕ ಅಲಭ್ಯವಾಗಲಿದೆ.

ಈ ಬಗ್ಗೆ ಬಿಎಂಟಿಸಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, 2025 ರ ಜನವರಿ 15 ರಿಂದ 30 ರವರೆಗೆ “ನಮ್ಮ ಬಿಎಂಟಿಸಿ” ಮೊಬೈಲ್ ಅಪ್ಲಿಕೇಶನ್ ತಾತ್ಕಾಲಿಕವಾಗಿ ಲಭ್ಯವಿರುವುದಿಲ್ಲ ಎಂದು ಸಾರ್ವಜನಿಕರಿಗೆ ತಿಳಿಯಪಡಿಸುತ್ತಿರುವುದಾಗಿ ಹೇಳಿದೆ.

ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರಕ್ಕೆ (Karnataka State Data Centre -KSDC) ಮೈಗ್ರೆಂಟ್ ಕೆಲಸ ನಡೆಯುತ್ತಿದೆ. ಈ ಕಾರಣದಿಂದ ಸಮಸ್ಯೆ ಎದುರಾಗಿದೆ. ಬೆಂಗಳೂರು ಮಹಾನಗರ ಸಾರಿಗೆ ನಿಗಮ ( Bangalore Metropolitan Transport Corporation -BMTC) ಈ ಅವಧಿಯಲ್ಲಿ ಉಂಟಾದ ಯಾವುದೇ ಅನಾನುಕೂಲತೆಗೆ ಪ್ರಾಮಾಣಿಕವಾಗಿ ವಿಷಾದಿಸುತ್ತದೆ. ಪ್ರಯಾಣಿಕರ ತಿಳಿಯ ಪಡಿಸಲು ಬಯಸುತ್ತಿದ್ದೇವೆ ಎಂಬುದಾಗಿ ತಿಳಿಸಿದೆ.

ನಮ್ಮ ಬಿಎಂಟಿಸಿ ಅಪ್ಲಿಕೇಷನ್ ತಾತ್ಕಾಲಿಕವಾಗಿ ಸ್ಥಗಿತದಿಂದ ಏನೆಲ್ಲ ಅಲಭ್ಯತೆ.?

1. ಲೈವ್ ಬಸ್ ಟ್ರ್ಯಾಕಿಂಗ್ ಲಭ್ಯವಿರಲ್ಲ

2. ಜರ್ನಿ ಪ್ಲ್ಯಾನರ್ ಸಿಗಲ್ಲ

3. ಶುಲ್ಕ ಕ್ಯಾಲ್ಕುಲೇಟರ್ ಮಾಡೋಕೆ ಆಗಲ್ಲ.

4. ವೇಳಾಪಟ್ಟಿ ಮಾಹಿತಿ ಸಿಗೋದಿಲ್ಲ.

5. ಮಾರ್ಗ ಟ್ರ್ಯಾಕಿಂಗ್ ಪ್ರಯಾಣಿಕರಿಗೆ ಅಲಭ್ಯ

ಸಾರ್ವಜನಿಕರಿಗೆ ಉತ್ತಮ ಸೇವೆಗಳನ್ನು ಒದಗಿಸಲು ಬಿಎಂಟಿಸಿ ತನ್ನ ಡಿಜಿಟಲ್ ಮೂಲಸೌಕರ್ಯವನ್ನು ಹೆಚ್ಚಿಸಲು ಬದ್ಧವಾಗಿದೆ. ಈ ಸಮಸ್ಯೆಯು ಕೆಲ ತಾಂತ್ರಿಕ ಸಮಸ್ಯೆ ಸರಿಪಡಿಸುವುದಕ್ಕಾಗಿ ಆಗಿದೆ. ಸಾರ್ವಜನಿಕರು, ಪ್ರಯಾಣಿಕರು ಸಹಕರಿಸುವಂತೆ ಬಿಎಂಟಿಸಿ ಮನವಿ ಮಾಡಿದೆ.

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಗಳ ಪ್ರಕಟ: ಯಾರಿಗೆ ಯಾವ ಪ್ರಶಸ್ತಿ? ಇಲ್ಲಿದೆ ಪಟ್ಟಿ..

Leave a Reply

Your email address will not be published. Required fields are marked *