BBMP
Loading ...

Hebbal Flyover

ಬೆಂಗಳೂರು:- ನಗರದ ಪ್ರತಿಷ್ಠಿತ ಫ್ಲೈ ಓವರ್ ಗಳಲ್ಲಿ ಒಂದಾದ ಹೆಬ್ಬಾಳ ಫ್ಲೈಓವರ್ ರಾತ್ರಿ ಸಂಚಾರ ನಿಷೇಧ ಮಾಡಲಾಗಿದೆ. ಬಿಬಿಎಂಪಿಯು ದುರಸ್ತಿ ಮತ್ತು ಡಾಂಬರೀಕರಣ ಕಾಮಗಾರಿ ಕೈಗೊಳ್ಳುವ ಕಾರಣ ಹೆಬ್ಬಾಳ ಮೇಲ್ಸೇತುವೆಯ ಒಂದು ಭಾಗದಲ್ಲಿ ಶನಿವಾರ ವರೆಗೆ ರಾತ್ರಿ ಸಂಚಾರ ನಿಷೇಧಿಸಲಾಗಿದೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬೆಂಗಳೂರು ನಗರವನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಇದ್ದಾಗಿದ್ದು, ಶನಿವಾರ ವರೆಗೆ ಈ ನಿಷೇಧ ಜಾರಿಯಲ್ಲಿರಲಿದೆ. ಕಾಮಗಾರಿ ವೇಳಾಪಟ್ಟಿ ಮಳೆಗಾಲದ ಪರಿಸ್ಥಿತಿಗಳಿಗೆ ಒಳಪಟ್ಟಿರುತ್ತದೆ. ಈ ಅವಧಿಯದಲ್ಲಿ, ನಗರದ ಕಡೆಗೆ ಫ್ಲೈಓವರ್ ರ‍್ಯಾಂಪ್ ಅನ್ನು ಮುಚ್ಚಲಾಗುತ್ತದೆ. ಬಿಬಿಎಂಪಿ ಮೊದಲು ಬೆಂಗಳೂರು ಕಡೆಗೆ ಸಂಚರಿಸುವ ಲೇನ್‌ನಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಿದ್ದು, ಮುಂದಿನ ಎರಡು ದಿನಗಳಲ್ಲಿ ಅದನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ ಎಂದು ಬೆಂಗಳೂರು ಉತ್ತರ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪರ್ಯಾಯ ಮಾರ್ಗ ಇಲ್ಲಿದೆ:
ಸಂಚಾರ ನಿಷೇಧದ ಅವಧಿಯಲ್ಲಿ ಯಲಹಂಕ ಮತ್ತು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬರುವ ಜನರು ಫ್ಲೈಓವರ್‌ನ ಕೆಳಗಿನ ಸರ್ವಿಸ್ ರಸ್ತೆಯನ್ನು ಬಳಸಿಕೊಂಡು, ಹೆಬ್ಬಾಳ ಜಂಕ್ಷನ್‌ನಲ್ಲಿ ಭದ್ರಪ್ಪ ಲೇಔಟ್ ಕಡೆಗೆ ಬಲಕ್ಕೆ ತಿರುಗಿ, ನ್ಯೂ ಬಿಇಎಲ್ ರಸ್ತೆ ಮತ್ತು ಮೆಖ್ರಿ ವೃತ್ತದ ಮೂಲಕ ನಗರವನ್ನು ತಲುಪಬಹುದು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಕೆಂಪೇಗೌಡ ಏರ್ ಪೋರ್ಟ್’ಗೆ ವಾರದಲ್ಲೇ ಎರಡನೇ ಬಾಂಬ್ ಬೆದರಿಕೆ ಮೇಲ್..!

Leave a Reply

Your email address will not be published. Required fields are marked *