BBMP
Loading ...

Drink Water

ಬೆಂಗಳೂರು : ಬೆಂಗಳೂರಿನ ಜನತೆಗೆ ರಾಜ್ಯ ಸರ್ಕಾರ ಶಾಕ್‌ ನೀಡಿದ್ದು, ಬೆಂಗಳೂರಿನಲ್ಲಿ ನೀರಿನ ದರ ಹೆಚ್ಚಳ ಮಾಡಲಾಗುವುದು ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ನೀರಿನ ದರ ಪರಿಷ್ಕರಣೆ ಸಂಬಂಧ ಸಾರ್ವಜನಿಕ ಆಕ್ಷೇಪಣೆಗೆ ಈ ಬಾರಿ ಅವಕಾಶ ನೀಡಲಾಗಿತ್ತು. ಗೃಹ, ಗೃಹೇತರರ ನೀರಿನ ಬಳಕೆದಾರರು, ಹೋಟೆಲ್, ಅಪಾರ್ಟ್ಮೆಂಟ್ ಅಸೋಸಿಯೇಷನ್ ಜೊತೆ ಸಭೆ ನಡೆಸಲಾಗಿದ್ದು ಎಲ್ಲರ ಅಭಿಪ್ರಾಯ ಸಂಗ್ರಹಿಸಿ ನೀರಿನ ದರ ಪರಿಷ್ಕರಣೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕಳೆದ 10 ವರ್ಷಗಳಲ್ಲಿ ವಿದ್ಯುತ್‌ ದರ ಪರಿಷ್ಕರಣೆ ಮಾಡಲಾಗಿದ್ದು, ನೀರಿನ ದರ ಮಾತ್ರ ಪರಿಷ್ಕರಣೆ ಮಾಡಿಲ್ಲ ಹೀಗಾಗಿ ಬೆಂಗಳೂರಿನಲ್ಲಿ ನೀರಿನ ದರ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ. ಜಲಮಂಡಳಿಯ ಅದಾಯಕ್ಕಿಂತಲೂ ವೆಚ್ಚ ಹೆಚ್ಚಾಗಿದೆ. ಗೃಹ ಬಳಕೆ ನೀರಿನ ದರವನ್ನು ಶೇ. 30 ರಿಂದ 40 ಹಾಗೂ ವಾಣಿಜ್ಯ ಬಳಕೆಗೆ ಶೇ. 45 ರಷ್ಟು ದರ ಹೆಚ್ಚಳಕ್ಕೆ ಜಲಮಂಡಳಿ ಪ್ರಸ್ತಾವನೆ ಸಲ್ಲಿಸಿದೆ ಎಂದು ಹೇಳಲಾಗಿದೆ.

2014 ರ ನವೆಂಬರ್‌-2024 ರ ಮಾರ್ಚ್ ನಡುವೆ ವಿದ್ಯುತ್‌ ವೆಚ್ಚ ಶೇ.107.3ರಷ್ಟು ಹೆಚ್ಚಾಗಿದೆ. ಶೇ.122.5 ನಿರ್ವಹಣಾ ವೆಚ್ಚ ಮತ್ತು ಶೇ.61.3 ವೇತನ ಮತ್ತು ಪಿಂಚಣಿ ವೆಚ್ಚ ಹೆಚ್ಚಳವಾಗಿದೆ. ಜಲಮಂಡಳಿಯ ಪ್ರತಿ ತಿಂಗಳ ವೆಚ್ಚ 170 ಕೋಟಿ ರೂ. ಆಗಿದ್ದರೆ, ಸಂಗ್ರಹಣೆಯಾಗುತ್ತಿರುವ ಪ್ರತಿ ತಿಂಗಳ ಆದಾಯ ಕೇವಲ 129 ಕೋಟಿ ರೂ. ಮಾತ್ರ ಬರುತ್ತಿದೆ.

ಯಲಹಂಕದಲ್ಲಿ 13,000 ರೂ. ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಬಿಲ್ ಕಲೆಕ್ಟರ್!

Leave a Reply

Your email address will not be published. Required fields are marked *