BBMP
Loading ...

BMTC

ಬೆಂಗಳೂರು: ನಗರದಲ್ಲಿ ಬಿಎಂಟಿಸಿ (BMTC) ಬಸ್‍ಗೆ (Bus) ಮತ್ತೊಂದು ಬಲಿಯಾಗಿದೆ. ಬಿಎಂಟಿಸಿ ಬಸ್‌ ಹಾಗೂ ದ್ವಿಚಕ್ರ ವಾಹನಗಳ ನಡುವಿನ ಅಪಘಾತದಲ್ಲಿ ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೈಸೂರು ರಸ್ತೆ ಹಳೇ ಗುಡ್ಡದಹಳ್ಳಿ ಬಳಿ ಘಟನೆ ನಡೆದಿದೆ. ಬಿಎಂಟಿಸಿ ಬಸ್‌ ಹಿಂಬದಿಯಿಂದ ಬಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರನ ತಲೆಗೆ ಪೆಟ್ಟಾಗಿ ತೀವ್ರ ರಕ್ತಸ್ರಾವವಾಗಿದೆ. ಇದರಿಂದಾಗಿ ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಸಂಬಂಧ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಕಳೆದ ಒಂದು ವಾರದ ಹಿಂದೆಯಷ್ಟೇ ಬಿಎಂಟಿಸಿ ಬಸ್‌ ಅಪಘಾತಕ್ಕೆ (BMTC Bus Accident) ವಿಶೇಷ ಚೇತನ ಬಲಿಯಾದ ಘಟನೆ ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ನಡೆದಿತ್ತು.

ಏನಿದು ಅಡಾಸ್ ಸಿಸ್ಟಮ್‌ ಎಲ್ಲಿ ಹೋಯ್ತು?
ಸಿಲಿಕಾನ್ ಸಿಟಿಯಲ್ಲಿ ಬಿಎಂಟಿಸಿ (BMTC) ಬಸ್ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ಎಚ್ಚೆತ್ತುಕೊಂಡ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದರು. ಅಪಘಾತ (Bus Accident) ತಡೆಯಲು ಕೆಲ ಬಸ್‌ಗಳಲ್ಲಿ ಅಡಾಸ್ (ADAS) ಸಿಸ್ಟಮ್‌, ಅಂದ್ರೆ ಅಡ್ವಾನ್ಸ್ ಡ್ರೈವರ್‌ ಅಸಿಸ್ಟೆನ್ಸ್ ಸಿಸ್ಟಮ್ ಅಳವಡಿಕೆ ಮಾಡಿತ್ತು.

ಏನಿದು ಅಡಾಸ್‌ ಸಿಸ್ಟಮ್‌?
ಅತ್ಯಾಧುನಿಕ ಟೆಕ್ನಾಲಜಿ ಒಳಗೊಂಡಿರುವ ಈ ಡಿವೈಸ್ ಮುಂಭಾಗದಲ್ಲಿ ಬರುವ ವಾಹನಗಳ ಅಲರ್ಟ್ ಮಾಡುವ ಜೊತೆಗೆ, ಡ್ರೈವರ್ ಅನ್ನು ಸಹ ಮಾನಿಟರ್ ಮಾಡುತ್ತೆ. ಡ್ರೈವರ್ ವಿಭಾಗದಲ್ಲಿ ಅಳವಡಿಸಲಾಗಿರುವ ಐ ವಾಚ್ ಇತರೇ ವಾಹನಗಳ ನಡುವೆ ಅಂತರ ಎಷ್ಟಿದೆ ಎಂಬುದನ್ನ ರೆಡ್ ಸಿಗ್ನಲ್ ಮೂಲಕ ಅಳವಡಿಕೆ ಮಾಡಿದ್ರೆ, ಡ್ರೈವರ್ ಮಾನಿಟರಿಂಗ್ ಸಿಸ್ಟಮ್ ಚಾಲಕ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರೆ ಅಥವಾ ನಿದ್ರೆಗೆ ಜಾರಿದರೆ ತಕ್ಷಣವೇ ಸಿಗ್ನಲ್‌ ಮೂಲಕ ಎಚ್ಚರಿಕೆ ನೀಡುತ್ತದೆ. ಇದೀಗ ಮತ್ತೆ ಬಿಎಂಟಿಸಿ ಬಸ್‌ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಆಧುನಿಕ ತಂತ್ರಾಜ್ಞಾನ ಎಲ್ಲಿ ಹೋಯ್ತು ಎಂದು ಪ್ರಶ್ನೆ ಮಾಡಿದ್ದಾರೆ.

ಸರ್ಕಾರಿ ಕಾರು, ಕಚೇರಿ, ಗೋಡೌನಲ್ಲೂ ಮುನಿರತ್ನ ನನ್ನ ಬಿಡಲಿಲ್ಲ: ಶಾಕಿಂಗ್‌ ವಿಚಾರ ಬಿಚ್ಚಿಟ್ಟ ಸಂತ್ರಸ್ತೆ

Leave a Reply

Your email address will not be published. Required fields are marked *