ಆ್ಯಂಕರ್ ಅನುಶ್ರೀ ಅವರಿಗೆ ಇಂದು (ಆಗಸ್ಟ್ 28) ವಿವಾಹ ನೆರವೇರುತ್ತಿದೆ. ಅನೇಕ ಬಾರಿ ಅನುಶ್ರೀ (Anushree) ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಳು ಹರಿದಾಡಿದ್ದವು. ಆದರೆ, ಬಹುತೇಕ ಬಾರಿ ಇದು ಫೇಕ್ ಸುದ್ದಿಗಳೇ ಆಗಿದ್ದವು. ಆದರೆ, ಈಗ ಅವರು ನಿಜವಾಗಲೂ ಮದುವೆ ಆಗುತ್ತಿದ್ದಾರೆ. ಬೆಂಗಳೂರಿನ ಹೊರ ವಲಯ ಅನುಶ್ರೀ ವಿವಾಹಕ್ಕೆ ಸಜ್ಜಾಗಿದೆ. ರೋಷನ್ ಜೊತೆ ಅನುಶ್ರೀ ಹಸೆಮಣೆ ಏರಲಿದ್ದಾರೆ.
ಈವರೆಗೆ ಅನುಶ್ರೀ ಅವರು ತಮ್ಮ ಮದುವೆ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ, ಅವರ ಆಮಂತ್ರಣ ಪತ್ರಿಕೆ ವೈರಲ್ ಆಗಿದ್ದು, ಇದರಲ್ಲಿ ರೋಷನ್ ಹೆಸರು ಇದೆ. ರೋಷನ್ ಕೊಡಗು ಮೂಲದ ಉದ್ಯಮಿ ಎನ್ನಲಾಗಿದೆ. ಅನುಶ್ರೀ ಹಾಗೂ ರೋಷನ್ ಅವರದ್ದು ಲವ್ ಮ್ಯಾರೇಜ್. ಈಗ ಅವರು ಪ್ರೀತಿಗೆ ಹೊಸ ಅರ್ಥ ನೀಡುತ್ತಿದ್ದಾರೆ.
ಇಂದು (ಆಗಸ್ಟ್ 28) ಬೆಳಿಗ್ಗೆ 10.56ಕ್ಕೆ ಅನುಶ್ರಿ ಹಾಗೂ ರೋಷನ್ ವಿವಾಹ ನೆರವೇರುತ್ತಿದೆ. ಬೆಂಗಳೂರಿನ ಕಗ್ಗಲಿಪುರ ಬಳಿಯ ರೆಸಾರ್ಟ್ ಒಂದರಲ್ಲಿ ಮದುವೆ ನಡೆಯುತ್ತಿದೆ. ಕಿರುತೆರೆ ಕಲಾವಿದರು ಮತ್ತು ಚಿತ್ರೋದ್ಯಮದ ಗಣ್ಯರಿಗೆ ಅನುಶ್ರಿ ಆಹ್ವಾನ ನೀಡಿದ್ದಾರೆ. ಅನೇಕ ಸೆಲೆಬ್ರಿಟಿಗಳು ಮದುವೆಗೆ ಹಾಜರಾಗುವ ನಿರೀಕ್ಷೆ ಇದೆ. ಹೀಗಾಗಿ, ಹೆಚ್ಚಿನ ಭದ್ರತೆ ಒದಗಿಸಲಾಗುತ್ತಿದೆ.


