ಬೆಂಗಳೂರು: ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳು ಮತ್ತೆ ಜೈಲು ಸೇರಿದ್ದಾರೆ. ಇನ್ನೂ 6106 ಈ ನಂಬರ್ ದರ್ಶನ್ ಅಭಿಮಾನಿಗಳಂತು ಮರೆಯೋದೆ ಇಲ್ಲ. ಯಾಕಂದ್ರೆ ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ದ ದರ್ಶನ್ ಜೈಲಿನಲ್ಲಿ ನೀಡಿದ್ದ ಕೈದಿ ನಂಬರ್ 6106 ಈ ನಂಬರ್ ನ ಅದಷ್ಟೋ ಅಭಿಮಾನಿಗಳಿ ತಮ್ಮ ವಾಹನಗಳ ಮೇಲೆ ಸ್ಟಿಕ್ಕರ್ ಮಾಡಿ ಅಂಟಿಸಿಕೊಂಡಿದ್ರು.
ಇನ್ನೂ ಕೆಲವರು ಟ್ಯಾಟು ಹಾಕಿಸಿಕೊಂಡಿದ್ರು. ಸದ್ಯ ದರ್ಶನ್ ಕೈದಿ ನಂಬರ್ ಬದಲಾಗಿದೆ 7314 ಇದು ದರ್ಶನ್ ಹೊಸ ಕೈದಿ ನಂಬರ್, ದರ್ಶನ್ ಮತ್ತೆ ಜೈಲಿನಿಂದ ಹೊರ ಬರೋವರೆಗೂ ದರ್ಶನ್ ಕೈದಿ ನಂಬರ್ 7314 ಆಗಿರಲಿದೆ. ಸದ್ಯ ಈ ಕೈದಿ ನಂವರ್ ಟ್ರೆಂಡ್ ಆಗುತ್ತಾ, ಅಭಿಮಾನಿಗಳು ಈ ನಂಬರ್ ಸಹ ವಾಹನಗಳ ಮೇಲೆ ಸ್ಟಿಕ್ಕರ್ ಹಾಕಿಸ್ತಾರ, ಮೈಮೇಲೆ ಟ್ಯಾಟು ಹಾಕಿಸಿಕೊಳ್ತಾರ ಅಂತ ಕಾದು ನೋಡಬೇಕಿದೆ.
ನಟ ದರ್ಶನ್ ಗೆ ವಿಚಾರಣಾಧೀನಾ ನಂಬರ್ ನೀಡಿದ ಜೈಲಾಧಿಕಾರಿಗಳು..
- 7313 ಪವಿತ್ರಾಗೌಡ
- 7314 ದರ್ಶನ್
- 7315 ನಾಗರಾಜ್
- 7316 ಲಕ್ಷ್ಮಣ್
- 7317 ಪ್ರದೂಶ್


