BBMP
Loading ...

Actor Darshan

Greater Bengaluru News9 : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ನಟ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ನೀನೇ ಅವರ 49ನೇ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಅಭಿಮಾನಿಗಳು ಭರ್ಜರಿ ಹುಟ್ಟು ಹಬ್ಬ ಆಚರಣೆ ಮಾಡಿದ್ದರು, ಇದೀಗ ಖ್ಯಾತ ಜ್ಯೋತಿಷಿ ಒಬ್ಬರು ಜೂನ್ ನಲ್ಲಿ ನಟ ದರ್ಶನ್ ಅವರು ಜೈಲಿನಿಂದ ಬಿಡುಗಡೆಯಾಗುತ್ತಾರೆ ಎಂದು ಪ್ರಶಾಂತ್ ಕಿಣಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.

ಇದೇ ಜ್ಯೋತಿಷಿಯು ರಾಜಕಾರಣಿಯೊಬ್ಬರು ಸಾವಿಗೀಡಾಗುತ್ತಾರೆ ಎಂದು ಭವಿಷ್ಯ ನುಡಿದ ಬೆನ್ನಲ್ಲೆ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಮೃತಪಟ್ಟಿದ್ದರು. ಆ ಸಂದರ್ಭದಲ್ಲಿ ಜ್ಯೋತಿಷಿ ಹೇಳಿದ್ದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದವು. ಸದ್ಯ ನಟ ದರ್ಶನ್‌ ಜಾಮೀನಿನ ಬಗ್ಗೆಗೂ ಹೇಳಿರುವುದು ವೈರಲ್‌ ಆಗಿದೆ.

ಪ್ರಶಾಂತ್ ಕಿಣಿ ರಾಜಕೀಯ, ಸಿನಿಮಾ, ಕ್ರಿಕೆಟ್‌ ಹಾಗೂ ಹಲವು ಪ್ರಚಲಿತ ವಿದ್ಯಮಾನಗಳ ಕುರಿತು ಟ್ವೀಟ್‌ ಮಾಡಿ ಭವಿಷ್ಯ ಹೇಳುತ್ತಾರೆ. ಸದ್ಯ ನಟ ದರ್ಶನ್‌ ಬಗ್ಗೆ ಟ್ವೀಟ್‌ ಮಾಡಿರುವ ಪ್ರಶಾಂತ್ ಕಿಣಿ, ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಜೂನ್ 2026 ರ ಒಳಗೆ ಜಾಮೀನು ಸಿಗಲಿದೆ. ಇದು ನೂರಕ್ಕೆ ನೂರು ಸತ್ಯ ಎಂದಿದ್ದಾರೆ.

Leave a Reply

Your email address will not be published. Required fields are marked *