BBMP
Loading ...

Greater Bengaluru News9 : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಅಮೆರಿಕ, ಇಸ್ರೇಲ್ ಹಾಗೂ ಇರಾನ್ ಯುದ್ಧದ ಪರಿಣಾಮ ಬೀರುತ್ತಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಆಟೋ ಚಾಲಕರ ಹೊಟ್ಟೆ ಮೇಲೆ ಹೊಡೆಯುತ್ತಿದೆ.

ಬೆಂಗಳೂರಿನಲ್ಲಿ ಆಟೋ ಎಲ್‌ಪಿಜಿ ಕೊರತೆ ತೀವ್ರಗೊಂಡಿದ್ದು, ದಿನದ ದುಡಿಮೆಯನ್ನೇ ನಂಬಿ ಜೀವನ ನಡೆಸುತ್ತಿರುವ ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬೆಂಗಳೂರಿನ ಸೇಂಟ್ ಮಾರ್ಕ್ಸ್ ರಸ್ತೆ, ಹೆಬ್ಬಾಳದ ಗುಡ್ಡದಹಳ್ಳಿ ವೃತ್ತ ಮತ್ತು ನವರಂಗ್ ಸೇರಿದಂತೆ ವಿವಿಧ ಎಲ್‌ಪಿಜಿ ಬಂಕ್‌ಗಳಲ್ಲಿ ಕಿಲೋಮೀಟರ್‌ಗಟ್ಟಲೇ ಆಟೋಗಳು ಕ್ಯೂ ನಿಂತಿರುವ ದೃಶ್ಯಗಳು ಕಂಡುಬರುತ್ತಿವೆ. ಬೆಳಗ್ಗಿನ ಜಾವ 4-6 ಗಂಟೆಗಳಿಂದಲೇ ಚಾಲಕರು ಗ್ಯಾಸ್‌ಗಾಗಿ ಕಾಯುತ್ತಿದ್ದಾರೆ.

ನೆಟ್ಟಿಗರೊಬ್ಬರು ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿ ಆಟೋಗಳು ಕ್ಯೂ ನಿಂತಿರುವುದನ್ನು ವಿಡಿಯೋ ಮಾಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಅನೇಕ ಗ್ಯಾಸ್ ಏಜೆನ್ಸಿಗಳು ಸ್ಟಾಕ್ ಇಲ್ಲ ಎನ್ನುತ್ತಿದ್ದರೆ ಲಭ್ಯವಿರುವ ಕೆಲವು ಬಂಕ್‌ಗಳಲ್ಲೂ, ಪೂರ್ಣ ಟ್ಯಾಂಕ್ ಬದಲಾಗಿ ಪ್ರತಿ ಆಟೋಗೆ 400 ರೂ. ಮೌಲ್ಯದ ಸೀಮಿತ ಪ್ರಮಾಣದ ಗ್ಯಾಸ್ ಮಾತ್ರ ತುಂಬಲಾಗುತ್ತಿದೆ. ಒಂದು ವಾರದ ಸ್ಟಾಕ್ ಕೇವಲ ಒಂದು ದಿನದಲ್ಲಿ ಖಾಲಿಯಾಗುತ್ತಿದೆ ಎಂದು ಬಂಕ್ ಮಾಲೀಕರು ಹೇಳಿದ್ದಾರೆ.

Leave a Reply

Your email address will not be published. Required fields are marked *