ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ವಿದ್ಯುತ್ ಪೂರೈಕೆಯಲ್ಲಿ ಜುಲೈ 12ರಂದು ವ್ಯತ್ಯಯ ಉಂಟಾಗಲಿದೆ. ಬೆಂಗಳೂರು ನಗರದ ಈ ಏರಿಯಾಗಳಲ್ಲಿ ಬೆಸ್ಕಾಂ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಮಾಹಿತಿ ನೀಡಿದೆ.
ವಿಜಯನಗರ ಮುಸ್‌ನಲ್ಲಿ ಕೆಪಿಟಿಸಿಎಲ್ ನಿರ್ವಹಣೆಯ ಕಾರಣ ಜುಲೈ 12ರ ಶುಕ್ರವಾರದಂದು ವಿದ್ಯುತ್ ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ ವ್ಯತ್ಯಯ?
ಬಸವೇಶ್ವರನಗರ, ವಿಜಯನಗರ, ಗೋವಿಂದರಾಜನಗರ, ಕಾಮಾಕ್ಷಿಪಾಳ್ಯ, ಆರ್ಪಿಸಿ ಲೇಔಟ್, ಬಿನ್ನಿ ಲೇಔಟ್, ಪ್ರಶಾಂತನಗರ, ಎಂ.ಸಿ.ಲೇಔಟ್, ಮಾರೇನಹಳ್ಳಿ, ಹೊಸಹಳ್ಳಿ, ತಿಮ್ಮೇನಹಳ್ಳಿ, ವಿನಾಯಕ ಲೇಔಟ್, ಕಾವೇರಿಪುರ, ರಂಗನಾಥಪುರ, ಸಿಂಡಿಕೇಟ್ ಬ್ಯಾಂಕ್ ಕಾಲನಿ, ನಾಗರಬಾವಿ, ಸಿದ್ದಯ್ಯ -ಪುರಾಣಿಕ್ ರೋಡ್, ಕೆ.ಹೆಚ್.ಬಿ. ಕಾಲನಿ, ಮಾಗಡಿ ಮೈನ್ ರೋಡ್, ಹೆಚ್.ವಿ.ಆರ್.ಲೇಔಟ್, ಅಗ್ರಹಾರ ದಾಸರಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಅನಾನುಕೂಲತೆಗಾಗಿ ಕ್ಷಮಿಸಿ, ದಯವಿಟ್ಟು ಸಹಕರಿಸಿ ಎಂದು ಬೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ವಿದ್ಯುತ್ ಸಮಸ್ಯೆ ಏನಾದರೂ ದೂರುಗಳಿದ್ದರೆ 1912 ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಲು ಕೋರಲಾಗಿದೆ.

ಬೆಂಗಳೂರು ದಕ್ಷಿಣ ಜಿಲ್ಲೆ ರಚಿಸಿದರೆ ರಾಮನಗರವೇ ಜಿಲ್ಲಾ ಕೇಂದ್ರ: ಡಿಕೆ ಶಿವಕುಮಾರ್ ಹೇಳಿಕೆ


