ಬೆಂಗಳೂರು: ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳವಾಗಲಿದೆ. ನಿವಾಸಿಗಳಿಗೆ ಬಿಬಿಎಂಪಿ ಟ್ಯಾಕ್ಸ್ ಶಾಕ್ ನೀಡಿದೆ ಎಂದೆಲ್ಲ ವರದಿ ಆಗಿವೆ. ಆದರೆ ಇದ್ಯಾವುದೇ ನಿಜವಲ್ಲ, ಯಾರೂ ನಂಬಬಾರದು ಎಂದು ಖುದ್ದು ಬಿಬಿಎಂಪಿ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ.
ಹೌದು ಆಸ್ತಿ ತೆರಿಗೆ ಹೆಚ್ಚಳ ಕುರಿತು ಸ್ಪಷ್ಟಿಕರಣ ನೀಡಿರುವ ಬಿಬಿಎಂಪಿಯು, ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ಸಂಬಂಧ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆಸ್ತಿ ತೆರಿಗೆ ಹೆಚ್ಚಳ ಸಂಬಂಧ ಯಾವುದೇ ಪ್ರಸ್ತಾವನೆ ಆಗಲಿ, ಚಿಂತನೆ ಆಗಲಿ ಸರ್ಕಾರದ ಮುಂದೆ ಇಲ್ಲ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತ ಮನೀಷ್ ಮೌದ್ಗಿಲ್ ತಿಳಿಸಿದ್ದಾರೆ. ಬೆಂಗಳೂರು ನಿವಾಸಿಗಳು ಗಮನಿಸಬೇಕು, ನಮ್ಮ (ಪಾಲಿಕೆ) ವ್ಯಾಪ್ತಿಯಲ್ಲಿ ಆಸ್ತಿ, ಕಟ್ಟಡಗಳ ತೆರಿಗೆ ಏರಿಕೆ ಪ್ರಸ್ತಾವನೆ ಇಲ್ಲ. ಇದೆಲ್ಲ ಊಹಾಪೋಹವಾಗಿದ್ದು, ಜನರು ವದಂತಿಗಳನ್ನು ನಂಬಬಾರದು ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇನ್ನು ಕರ್ನಾಟಕದ ನಗರ ಸ್ಥಳೀಯ ಸಂಸ್ಥೆಗಳಲ್ಲಿ 2024-25ನೇ ಸಾಲಿನ ಆಸ್ತಿ ತೆರಿಗೆ ಪಾವತಿಗೆ ಏಪ್ರಿಲ್ ತಿಂಗಳಿನಲ್ಲಿ ಶೇ.5% ರಿಯಾಯಿತಿ 2024 ಜುಲೈ 31ರವರೆಗೆ ವಿಸ್ತರಿಸಲು ಪೌರಾಡಳಿತ ನಿರ್ದೇಶನಾಲಯ ಸರ್ಕಾರ ಮುಂದೆ ಪ್ರಸ್ತಾವನೆ ಇಟ್ಟಿದೆ. ಈ ಮನವಿಯನ್ನು ಪುರಸ್ಕರಿಸಿರುವ ರಾಜ್ಯ ಸರ್ಕಾರ, ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಪಾವತಿಯನ್ನು ಹೆಚ್ಚಿಸಲು ಮತ್ತು ಸ್ವಯಂ ತೆರಿಗೆ ಪಾವತಿ ಉತ್ತೇಜಿಸುವ ಸಲುವಾಗಿ ಆರ್ಥಿಕ ವರ್ಷದ ಪ್ರಾರಂಭದ 30 ದಿನಗಳಲ್ಲಿ ಪೂರ್ಣ ಪ್ರಮಾಣದ ಆಸ್ತಿ ತೆರಿಗೆ ಪಾವತಿಗೆ, ಶೇಕಡಾ 5% ರಿಯಾಯಿತಿ ನೀಡುವ ಅವಕಾಶವನ್ನು ಜುಲೈ 31ರವರೆಗೆ ವಿಸ್ತರಿಸಿ ಆದೇಶಿಸಿದೆ.
OTS ಮೂಲಕ ಆಸ್ತಿ ತೆರಿಗೆ ಪಾವಿತಿಸಿದರೆ ಬಡ್ಡಿ ಮನ್ನ: ಸದ್ಯ ಬಿಬಿಎಂಪಿಯು ಆ ಆಸ್ತಿ ಮಾಲೀಕರಿಗೆ OTS ಗೆ ಅವಕಾಶ ಕಲ್ಪಿಸಿದೆ. ಯಾರೆಲ್ಲ ತೆರಿಗೆ ಬಾಕಿ ಉಳಿಸಿಕೊಂಡಿದ್ದೀರೋ ಅವರೆಲ್ಲ ‘ಒನ್ ಟೈಮ್ ಸೆಟಲ್‌ಮೆಂಟ್’ (OTS) ಗೆ ಅವಕಾಶ ನೀಡಲಾಗುತ್ತದೆ. ಈ ಒಟಿಎಸ್ ಯೋಜನೆ ಇದೇ ವರ್ಷ ಫೆಬ್ರವರಿಯಿಂದ ಜಾರಿಗೆ ಬಂದಿದೆ. ಇದರಡಿ ತೆರಿಗೆ ಪಾವತಿಸಿದರೆ, ಬಡ್ಡಿ ಮನ್ನಾ ಆಗಲಿದೆ. ಆದ್ದರಿಂದ ಯಾರೆಲ್ಲ ನೋಟಿಸ್ ಪಡೆದಿದ್ದೀರಾ ಅವರೆಲ್ಲ, ಇದೇ ಜುಲೈ 15ರೊಳಗೆ ಬಾಕಿ ತೆರಿಗೆ ಕಟ್ಟುವಂತೆ ಬಿಬಿಎಂಪ ಸೂಚನೆ ನೀಡಿದೆ.
100ಕ್ಕೂ ಕಟ್ಟಡ ಮಾಲೀಕರಿಗೆ ನೋಟಿಸ್: ಇದಷ್ಟೇ ಅಲ್ಲದೇ ಬೆಂಗಳೂರಿನಲ್ಲಿ ವಿವಿಧ ಕಟ್ಟಡಗಳ ಆಸ್ತಿ ತೆರಿಗೆ ಪಾವತಿಯಲ್ಲಿ ವ್ಯತ್ಯಾಗಳು ಕಂಡು ಬಂದ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಖದ್ದು ಸರ್ವೇ ನಡೆಸಿದರು. ಈ ವೇಳೆ 100ಕ್ಕೂ ಹೆಚ್ಚು ಕಟ್ಟಡಗಳ ತೆರಿಗೆ ಪಾವತಿಯಲ್ಲಿ ಅಕ್ರಮ ಕಂಡು ಬಂದಿದೆ. ಅಂಥಹ ಆಸ್ತಿ ಮಾಲೀಕರಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ.
ಶೇ.25 ಬಾಕಿ ಮೊತ್ತ ಬಿಡುಗಡೆ ಡಿಸಿಎಂ ಒಪ್ಪಿಗೆ: ಪ್ರತಿಭಟನೆ ಹಿಂಪಡೆದ ಬಿಬಿಎಂಪಿ ಗುತ್ತಿಗೆದಾರರ ಸಂಘ


