BBMP
Loading ...

ಬೆಂಗಳೂರು: ಇಂದು (ಜುಲೈ 07) ನಡೆದ ನಗರದ ಪ್ರತಿಷ್ಠಿತ ʼಪ್ರೆಸ್‌ ಕ್ಲಬ್‌ ಆಫ್‌ ಬೆಂಗಳೂರುʼ ಚುನಾವಣೆಯಲ್ಲಿ ಪತ್ರಕರ್ತರಾದ ಆರ್. ಶ್ರೀಧರ್ ಅವರು ಅಧ್ಯಕ್ಷರಾಗಿ ಆಯ್ಕೆಯಾದರೆ, ಮೋಹನ್​ ಕುಮಾರ್​ ಅವರು ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.

ಕ್ಲಬ್​ನ ಅಧ್ಯಕ್ಷ ಸ್ಥಾನಕ್ಕಾಗಿ ಮೂವರು ಪತ್ರಕರ್ತರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಧ್ಯಾನ್‌ ಪೂಣಚ್ಚ, ಆರ್. ಶ್ರೀಧರ ಹಾಗೂ ಸುಭಾಷ್‌ ಹೂಗಾರ್‌ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಅಂತಿಮವಾಗಿ ಚುನಾವಣ ಫಲಿತಾಂಶದಲ್ಲಿ ಅತಿ ಹೆಚ್ಚು ಮತಗಳೊಂದಿಗೆ ಆರ್​. ಶ್ರೀಧರ್​ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕೆ ಮಹಾಂತೇಶ್‌ ಹೀರೇಮಠ್‌, ಬಿ.ಎನ್.ಮೋಹನ್‌ ಕುಮಾರ್‌ ಹಾಗೂ ವಿಶ್ವನಾಥ್‌ ಭಾಗವತ್‌ ಕಣದಲ್ಲಿದ್ದರು. ಅಂತಿಮವಾಗಿ ಮೋಹನ್​ ಕುಮಾರ್​ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅದೇ ರೀತಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ದೊಡ್ಡ ಬೊಮ್ಮಯ್ಯ, ಟಿ. ಮಂಜುನಾಥ್‌, ಎಂ.ಡಿ ಶಿವಕುಮಾರ್‌ ಬೆಳ್ಳಿತಟ್ಟೆ, ಹಾಗೂ ವೈ.ಎಸ್.ಎಲ್.‌ ಸ್ವಾಮಿ ನಡುವೆ ಪೈಪೋಟಿ ನಡೆದಿತ್ತು. ಅಂತಿಮವಾಗಿ ಶಿವಕುಮಾರ್​ ಬೆಳ್ಳಿತಟ್ಟೆಯವರು ಆಯ್ಕೆಯಾಗಿದ್ದಾರೆ.

ಬೆಂಗಳೂರು ಪ್ರೆಸ್ ಕ್ಲಬ್​ನ 2024-25ನೇ ಸಾಲಿಗೆ ಚುನಾಯಿತರಾದವರ ಸಂಪೂರ್ಣ ಪಟ್ಟಿ ಈ ಕೆಳಕಂಡಂತಿದೆ…
* ಆರ್. ಶ್ರೀಧರ್- ಅಧ್ಯಕ್ಷರು
* ಮೋಹನ್ ಕುಮಾರ್- ಉಪಾಧ್ಯಕ್ಷರು
* ಶಿವಕುಮಾರ್ ಬೆಳ್ಳಿ ತಟ್ಟೆ- ಪ್ರಧಾನ ಕಾರ್ಯದರ್ಶಿ
* ಮಂಜುನಾಥ್ ಜಿ.ವೈ – ಕಾರ್ಯದರ್ಶಿ
* ಧರಣೀಶ್ ಬಿ.ಎನ್ – ಜಂಟಿ ಕಾರ್ಯದರ್ಶಿ
* ಗಣೇಶ್ ಜಿ – ಖಜಾಂಚಿ

ಕಾರ್ಯಕಾರಿ ಸಮಿತಿ
* ಶಿವಣ್ಣ
* ಯಾಸಿರ್ ಮುಸ್ತಾಕ್
* ಶರಣಬಸಪ್ಪ ಎ.ಎಚ್.
* ಮಮ್ತಾಜ್ ಅಲಿಮ್
* ರೋಹಿಣಿ ವಿ. ಅಡಿಗ
* ಸಿ.ಆರ್.ಮಂಜುನಾಥ್.
ಮಹಿಳಾ ಮೀಸಲು ಕ್ಷೇತ್ರ
* ಮಿನಿ ತೇಜಸ್ವಿನಿ.

ಬೆಸ್ಕಾಂ ಬೊಕ್ಕಸ ತುಂಬಿಸಿದ ಗೃಹ ಜ್ಯೋತಿ ಯೋಜನೆ; 10 ವರ್ಷಗಳಲ್ಲಿ ಆದಾಯ 3 ಪಟ್ಟು ಏರಿಕೆ

Leave a Reply

Your email address will not be published. Required fields are marked *