BBMP
Loading ...

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿಯಾಗಿರುವ ನಟ ದರ್ಶನ್‌ ಸೆರೆವಾಸ ಇಂದು ಹತ್ತನೇ ದಿನಕ್ಕೆ ಕಾಲಿಟ್ಟಿದೆ. ಇಷ್ಟು ದಿನವೂ ದರ್ಶನ್‌ ಅವರ ಅಮ್ಮ ಹಾಗೂ ತಮ್ಮ ಮಗನ ಭೇಟಿಗೆ ಸೆರೆಮನೆಯತ್ತ ಕಾಲಿಟ್ಟಿರಲಿಲ್ಲ. ಇದೀಗ ದರ್ಶನ್‌ ತಾಯಿ, ತಮ್ಮ, ಪತ್ನಿ , ಮಗ ಭೇಟಿ ಮಾಡಿದ್ದಾರೆ. ಆದರೀಗ ಖಾಸಗಿ ವಾಹನದಲ್ಲಿಯೇ ನಟ ದರ್ಶನ್ ಕುಟುಂಬ ಜೈಲಿಗೆ ಎಂಟ್ರಿ ಕೊಟ್ಟಿರುವುದು ತಿಳಿದು ಬಂದಿದೆ. ಹೀಗಾಗಿ ಸಾಮಾನ್ಯರಿಗೊಂದು ಕಾನೂನು ನಟ ದರ್ಶನ್ ಕುಟುಂಬಕ್ಕೆ ಒಂದು ಕಾನೂನು ಎನ್ನುವಂತಾಗಿದೆ.

ಖಾಸಗಿ ವಾಹನದಲ್ಲಿಯೇ ನಟ ದರ್ಶನ್ ಕುಟುಂಬ ಜೈಲಿಗೆ ಎಂಟ್ರಿ ಕೊಟ್ಟಿದ್ದು, ಬಂಧಿಖಾನೆ ಇಲಾಖೆ ಕಾನೂನನ್ನು ಗಾಳಿಗೆ ತೂರಿ ರಾಜಾತಿಥ್ಯ ನೀಡಿದೆ. ಸಾಮಾನ್ಯರು ಜೈಲಿಗೆ ಎಂಟ್ರಿ‌ ಕೊಡಬೇಕಾದರೆ ಹತ್ತಾರು ರೂಲ್ಸ್‌ ಹೇಳುತ್ತಾರೆ. ಅದೇ ನಟ ದರ್ಶನ್ ಕುಟುಂಬಕ್ಕೆ ಮಾತ್ರ ಕಂಡಿಷನ್ ಇಲ್ಲವೆಂಬಂತಾಗಿದೆ.

ರಾಜಾರೋಷವಾಗಿ ನಟ ದರ್ಶನ್ ಕುಟುಂಬದವರಿಗೆ ಜೈಲು ಎಂಟ್ರಿ ನೀಡಲಾಗಿದೆ. ಮಾಧ್ಯಮಗಳ ಕಣ್ತಪ್ಪಿಸಿ ನಟ ದರ್ಶನ್ ಅವರನ್ನು ಕುಟುಂಬ ಭೇಟಿ ಮಾಡಿದೆ. ಪರಪ್ಪನ ಅಗ್ರಹಾರ ಜೈಲಿಗೆ ನಟ ದರ್ಶನ್ ತಾಯಿ, ತಮ್ಮ ಪತ್ನಿ ಮಗ ಎಂಟ್ರಿ ಕೊಟ್ಟರು.

ಹತ್ತು ಗಂಟೆ ಸುಮಾರಿಗೆ ಕುಟುಂಬ ಜೈಲಿಗೆ ಬಂದಿತ್ತು. ಪರಪ್ಪನ ಅಗ್ರಹಾರ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಉದಯ್ ದರ್ಶನ್ ಭೇಟಿಗೆ ಕರೆದೊಯ್ದರು. ಉದಯ್‌ ಅವರು ಕಳೆದ ಸೋಮವಾರ ಸಹ ಮಾಧ್ಯಮಗಳ ಕಣ್ತಪ್ಪಿಸಿ ಪತ್ನಿ ಮಗನನ್ನು ಕರೆದೊಯ್ದಿದ್ದರು. ಇಂದು ಕೂಡ ಖಾಸಗಿ ಕಾರಿನಲ್ಲಿ ಉದಯ್‌ ಕುಟುಂಬವನ್ನು ಕರೆದೊಯ್ದಿದ್ದಾರೆ.

ರದ್ದಾದ ಕಾಮಗಾರಿಗಳಿಗೂ ಬಿಲ್ ಮೊತ್ತ ಬಿಡುಗಡೆ ಮಾಡಲು ಮುಂದಾದ ಬಿಬಿಎಂಪಿ! ಬಿಬಿಎಂಪಿ ಆಯುಕ್ತರು ಹೇಳುವುದೇನು?

Leave a Reply

Your email address will not be published. Required fields are marked *