BBMP
Loading ...

ಬೆಂಗಳೂರು:-ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ತನಿಖೆ ಚುರುಕು ಮಾಡಿರುವ ಪೊಲೀಸರು ದರ್ಶನ್ ಗ್ಯಾಂಗ್ ವಿಚಾರಣೆ ಮುಂದುವರಿಸಿದ್ದಾರೆ. ರೇಣುಕಾಸ್ವಾಮಿ ಕೊಲೆಯಾಗಿದ್ದು ಎಷ್ಟೊತ್ತಿಗೆ? ಹೇಗೆಲ್ಲಾ ಹಲ್ಲೆ ಮಾಡಿ ಕೊಂದಿದ್ದಾರೆ? ಯಾರು ಇದಕ್ಕೆ ಸಾಥ್‌ ನೀಡಿದ್ದರು ಎಂಬ ಇಂಚಿಂಚು ಮಾಹಿತಿಯನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದ ಮಾಹಿತಿಗಳು ಡಿ-ಗ್ಯಾಂಗ್ ಕ್ರೌರ್ಯವನ್ನು ಅನಾವರಣ ಮಾಡಿವೆ.

ರೇಣುಕಾಸ್ವಾಮಿಯ ತಲೆಯನ್ನು ಲಾರಿಗೆ ಜಜ್ಜಿದ ರೀತಿಗೆ ಸಂಜೆಯೇ ಸತ್ತು ಹೋಗಿದ್ದ. ಜೂ.8ರಂದು ಸಂಜೆ 6ರಿಂದ 6:30ರ ಒಳಗೆ ಪ್ರಾಣ ಹೋಗಿತ್ತು. ಹಲ್ಲೆಯ ತೀವ್ರತೆಗೆ 6 ಗಂಟೆಗೆಲ್ಲಾ ರೇಣುಕಾಸ್ವಾಮಿ ಕುಸಿದು ಬಿದ್ದಿದ್ದ. ರೇಣುಕಾಸ್ವಾಮಿ ನೀರು ಕುಡಿಸಿ ಎಬ್ಬಿಸೋದಕ್ಕೆ ನೋಡಿದ್ವಿ.. ಎದ್ದೇಳಲಿಲ್ಲ. ದರ್ಶನ್‌ಗೆ ಫೋನ್ ಮಾಡಿದಾಗ ಡಾಕ್ಟರ್‌ನ ಕರೆಸಿ ಅಂತ ಹೇಳಿದ್ರು, ಗಡಿಬಿಡಿಯಲ್ಲಿ ಇಷ್ಟೆಲ್ಲಾ ಮಾಡೋ ಹೊತ್ತಿಗೆ ಸ್ವಾಮಿ ಪ್ರಾಣ ಹೋಗಿತ್ತು. ರಾತ್ರಿ 8 ಗಂಟೆ ತನಕ ಏನ್ ಮಾಡೋದು ಅಂತಾನೇ ಗೊತ್ತಾಗಲಿಲ್ಲ. ಚಿತ್ರದುರ್ಗದಿಂದ ಬಂದಿದ್ದ ರವಿಗೆ ಹೆಣ ಬಿಸಾಡೋದಕ್ಕೆ ಹೇಳಿದ್ವಿ, ಆದರೆ, ರವಿ ಭಯ ಬಿದ್ದು, ನಾನು ಹಾಗೇ ಮಾಡೋಲ್ಲ ಅಂದ. ವಿನಯ್, ಪ್ರದೋಷ್ ಅಣ್ಣ ಸ್ವಲ್ಪ ಹೊತ್ತು ಹೊರಗೆ ಹೋಗಿದ್ದರು. ಆಮೇಲೆ ಕಾರ್ತಿಕ್ ಟೀಮನ್ನು ಪ್ರದೋಷ್‌ ಅಣ್ಣ ರೆಡಿ ಮಾಡಿದ್ರು. ರೇಣುಕಾಸ್ವಾಮಿ ಶವವನ್ನು ಕಾರ್ತೀಕ್ ಟೀಂ ತಗೊಂಡು ಹೋಯ್ತು ಅಂತಾ ಹೇಳಿದ್ದಾನೆ.

ಡಿ-ಗ್ಯಾಂಗ್‌ನ ದೀಪಕ್ ಹೇಳಿದ್ದೇನು?
ಪಟ್ಟಣಗೆರೆ ಶೆಡ್‌ಗೆ ಬಿರಿಯಾನಿ ತರಿಸಿದ್ವಿ, ರೇಣುಕಾಸ್ವಾಮಿಗೆ ತಿನ್ನೋಕೆ ಬಿರಿಯಾನಿ ನೀಡಿದ್ವಿ. ಆದ್ರೆ, ನಾನು ಸಸ್ಯಹಾರಿ, ತಿನ್ನಲ್ಲ ಎಂದು ಸ್ವಾಮಿ ಹೇಳಿದ. ಆದರೂ, ಸ್ವಾಮಿಗೆ ಬಲವಂತವಾಗಿ ಬಿರಿಯಾನಿ ತಿನ್ನಿಸಿದ್ವಿ. ಸ್ವಾಮಿ ಬಿರಿಯಾನಿಯನ್ನು ತಿನ್ನದೇ ನೆಲಕ್ಕೆ ಉಗುಳಿದ್ದ, ಇದರಿಂದ ಸಿಟ್ಟಗೆದ್ದು ರೇಣುಕಾಸ್ವಾಮಿಯನ್ನು ಥಳಿಸಿದ್ವಿ, ಬಾಸ್ ಬರ್ತಾರೆ, ಒದೆ ತಿನ್ನೋಕೆ ರೆಡಿಯಾಗು ಅಂತಾನೂ ಹೇಳಿದ್ವಿ. ಬಿರಿಯಾನಿ ತಿಂದ್ರೆ ಶಕ್ತಿ ಬರುತ್ತೆ ಅಂತಾ ಹೇಳಿದ್ವಿ ಎಂದು ಇಂಚಿಂಚು ಮಾಹಿತಿಯನ್ನು ಬಾಯ್ಬಿಟ್ಟಿದ್ದಾರೆ

ರೇಣುಕಾಸ್ವಾಮಿಯನ್ನ ಅಪಹರಿಸಿದ್ದು ಹೇಗೆ?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಿತ್ಯ ಹೊಸ-ಹೊಸ ವಿಚಾರಗಳು ಬೆಳಕಿಗೆ ಬರ್ತಿವೆ. ರೇಣುಕಾಸ್ವಾಮಿಯನ್ನು ರಘು ಗ್ಯಾಂಗ್ ಜೂನ್ 8ರಂದು ಚಿತ್ರದುರ್ಗದಲ್ಲಿ ಪುಸಲಾಯಿಸಿ ಕಿಡ್ನಾಪ್ ಮಾಡಿತ್ತು. ಇದಕ್ಕೆ ಇಂದು ದೃಶ್ಯ ಸಾಕ್ಷ್ಯವೂ ಸಿಕ್ಕಿದೆ. ಜೂ.8ರಂದು ಬೆಳಗ್ಗೆ 9:56ಕ್ಕೆ ಕುಂಚಿಗನಾಳ್ ಬಳಿ ಸಿನಿಮೀಯ ರೀತಿಯಲ್ಲಿ ರೇಣುಕಸ್ವಾಮಿಯನ್ನು ರಘು ಗ್ಯಾಂಗ್ ಅಪಹರಿಸುತ್ತದೆ. ಆಟೋದಿಂದ ರೇಣುಕಸ್ವಾಮಿಯನ್ನು ಕಾರಿಗೆ ಶಿಫ್ಟ್ ಮಾಡಿಕೊಂಡು ಬೆಂಗಳೂರಿಗೆ ಕರೆತರಲಾಗುತ್ತದೆ. ಕುಂಚಿಗನಾಳ್ ಬಳಿಯ ಪೆಟ್ರೋಲ್ ಬಂಕ್ ಬಳಿ ಪ್ರಕರಣದ 7ನೇ ಆರೋಪಿ ಜಗ್ಗನ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಮುಚ್ಚಿ ಹೋಗ್ತಿದ್ದ ದರ್ಶನ್​ ಕೇಸ್​ ಬಯಲಿಗೆಳದಿದ್ದು ಈ ಇಬ್ಬರು ಖಡಕ್ ಅಧಿಕಾರಿಗಳು! ಇವರೇ ರಿಯಲ್ ಹೀರೋಸ್​

Leave a Reply

Your email address will not be published. Required fields are marked *