BBMP
Loading ...

JCB

ಬೆಂಗಳೂರು: ಎರಡು ಹಂತಗಳಲ್ಲಿ ಕರ್ನಾಟಕದಲ್ಲಿ ನಡೆದಿದ್ದಂತ ಲೋಕಸಭಾ ಚುನಾವಣೆಯ ಚುನಾವಣೋತ್ತರ ಸಮೀಕ್ಷೆ ವರದಿ ಬಹಿರಂಗಗೊಂಡಿದೆ. ಎನ್ ಡಿಎ 20 ಸ್ಥಾನಗಳನ್ನು ಗೆದ್ದು ಕೊಂಡರೇ, ಇಂಡಿಯಾ ಮೈತ್ರಿಕೂಟ 08 ಸ್ಥಾನ ಗೆಲ್ಲಲಿದೆ ಎಂಬುದಾಗಿ ಟಿವಿ9 ಪೋಲ್​ಸ್ಟ್ರಾಟ್ ಮತಗಟ್ಟೆ ಸಮೀಕ್ಷೆ ತಿಳಿಸಿದೆ.

ಈ ಕುರಿತಂತೆ ಮಾಹಿತಿ ಬಿಡುಗಡೆ ಮಾಡಿರುವಂತ ಟಿವಿ9, ಪೋಲ್ ಸ್ಟ್ರಾಟ್ ಮತಗಟ್ಟೆ ಸಮೀಕ್ಷೆಯ ಪ್ರಕಾರ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಯಿಂದ 18 ಸ್ಥಾನ ಹಾಗೂ ಜೆಡಿಎಸ್ ಪಕ್ಷದಿಂದ 2 ಸ್ಥಾನಗಳಿಗೆ ಸ್ಪರ್ಧೆ ನಡೆಸಲಾಗಿತ್ತು. ಕಾಂಗ್ರೆಸ್ ಪಕ್ಷದಿಂದ 28 ಸ್ಥಾನಗಳಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು ಎಂದಿದೆ.

ಕರ್ನಾಟಕ ಲೋಕಸಭಾ ಚುನಾವಣೆ ಎಕ್ಸಿಟ್ ಪೋಲ್ ನ ಪೋಲ್ ಸ್ಟ್ರಾಟ್ ಮತಗಟ್ಟೆ ಸಮೀಕ್ಷೆಯ ಪ್ರಕಾರ ಎನ್ ಡಿಎ ಮೈತ್ರಿ ಕೂಟವು 20 ಸ್ಥಾನಗಳನ್ನು ಗೆಲ್ಲಲಿದೆ. ಇಂಡಿಯಾ ಮೈತ್ರಿಕೂಟವಾದಂತ ಕಾಂಗ್ರೆಸ್ 08 ಸ್ಥಾನಗಳಿಗೆ ತೃಪ್ತಿಗೊಳ್ಳಬೇಕಾಗಿದೆ ಎಂಬುದಾಗಿ ತಿಳಿಸಿದೆ.

ಇಂಡಿಯಾ ಟಿವಿ-ಸಿಎನ್ಎಕ್ಸ್ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಬಿಜೆಪಿ 18-22, ಕಾಂಗ್ರೆಸ್ 4-8 ಮತ್ತು ಜೆಡಿಎಸ್ 1-3 ಸ್ಥಾನಗಳನ್ನು ಗೆಲ್ಲಲಿದೆ.

Leave a Reply

Your email address will not be published. Required fields are marked *