ಬೆಂಗಳೂರು: ವಿಧಾನಪರಿಷತ್ ಮೂರು ಶಿಕ್ಷಕರ ಕ್ಷೇತ್ರ ಹಾಗೂ 3 ಪದವೀಧರರ ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಗೆ ಬೆಂಗಳೂರು ಪದವೀಧರ ಕ್ಷೇತ್ರದಿಂದ ನೀಲಕಂಠ ಆರ್. ಗೌಡ (ಬಿಇ) ಅವರು ಕಣಕ್ಕಿಳಿದಿದ್ದಾರೆ.
ನೀಲಕಂಠ ಗೌಡ ಅವರು ಮೇ 14ರಂದು ಶಾಂತಿ ನಗರದ ಬಿಎಂಟಿಸಿ ಬಸ್ ನಿಲ್ದಾಣ ಸ್ಥಳದಲ್ಲಿ ಬೆಳಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಈ ವೇಳೆ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೆಂಬಲಿಸಬೇಕೆಂದು ನೀಲಕಂಠ ಅವರು ಮನವಿ ಮಾಡಿದ್ದಾರೆ.
ನಿಮ್ಮ ಮತಗಳಿಗೆ ಕಾಯಾ ವಾಚಾ ಮನಸ್ಸ ಬದ್ಧನಾಗಿರುತ್ತೇನೆಂದು ಭರವಸೆ ನೀಡಿರುವ ನೀಲಕಂಠ ಅವರು ಐದು ಗ್ಯಾರಂಟಿಗಳನ್ನು ಸಹ ಘೋಷಣೆ ಮಾಡಿದ್ದಾರೆ. ಆ ಐದು ಗ್ಯಾರಂಟಿಗಳು ಯಾವುವು ಅಂದರೆ, ಮೊದಲನೆಯದಾಗಿ ಭ್ರಷ್ಟಾಚಾರ ಮಾಡುವುದಿಲ್ಲ. ಎರಡನೆಯದು ಅಧಿಕಾರ ದುರಪಯೋಗ ಮಾಡುವುದಿಲ್ಲ. ಮೂರನೆಯದು ಸ್ವಾರ್ಥ ರಾಜಕಾರಣ ಮಾಡುವುದಿಲ್ಲ. ನಾಲ್ಕನೆಯದು ಧ್ವನಿ ಇಲ್ಲದವರ ವಿಶೇಷವಾಗಿ ಪದವೀಧರರ, ಶಿಕ್ಷಕರ, ರೈತರ, ಹಿಂದುಳಿದವರ ಧ್ವನಿಯಾಗಿ ಕಾರ್ಯ ನಿರ್ವಹಣೆ. ಐದನೆಯದು ಶಿಕ್ಷಣ ಕ್ಷೇತ್ರದಲ್ಲಿನ ತಾರತಮ್ಯದ ವಿರುದ್ಧ ಹೋರಾಟ.
ನಿಮ್ಮ ಅಮೂಲ್ಯ ಮತಗಳನ್ನು ನೀಡಿದರೆ ಈ ಪಂಚ ಗ್ಯಾರಂಟಿಗಳ ಅನುಗುಣವಾಗಿ ಕಾರ್ಯನಿರ್ವಹಿಸುವುದಾಗಿ ನೀಲಕಂಠ ಆರ್. ಗೌಡ ಭರವಸೆ ನೀಡಿದ್ದಾರೆ.


