ಬೆಂಗಳೂರು: ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರನ್ನ ಕಿಡ್ನಾಪ್ ಮಾಡಿದ ಆರೋಪ ಕೇಸ್‌ನಲ್ಲಿ ಬಂಧನವಾಗಿದ್ದ ಮಾಜಿ ಸಚಿವ ಎಚ್ಡಿ ರೇವಣ್ಣ ಅವರ ಜಾಮೀನು ವಿಚಾರಣೆಯ ತೀರ್ಪು ಹೊರಬಿದ್ದಿದೆ. ಜನಪ್ರತಿನಿಧಿಗಳ ನ್ಯಾಯಾಲಯ ರೇವಣ್ಣರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಜಾಮೀನು ಕೋರಿ ಶಾಸಕ ಎಚ್.ಡಿ.ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನ ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ರೇವಣ್ಣ ಪರ ವಿಸಿ ನಾಗೇಶ್ ಹಾಗೂ ಎಸ್ಐಟಿ ಪರ ಜಾಯ್ನಾ ಕೊಠಾರಿ ವಾದ ಮಂಡಿಸಿದರು.
ಎಸ್ಐಟಿ ಪರ ವಕೀಲರ ವಾದವೇನು?
ಎಸ್ಐಟಿ ಪರ ವಾದ ಮಂಡಿಸಿದ ಕೊಠಾರಿ, ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಜಾಮೀನು ನೀಡಿದರೆ ಸಾಕ್ಷ್ಯ ನಾಶಪಡಿಸಬಹುದು. ಆರೋಪಿ ಪ್ರಭಾವಿ ಎಂದು ಅಂಶವನ್ನ ನ್ಯಾಯಾಲಯ ಪರಿಗಣಿಸಬೇಕು. ಮಹಿಳೆಯನ್ನ ಅಪಹರಿಸಿ ಬೆದರಿಕೆ ಹಾಕಿದ ಪ್ರಕರಣವಲ್ಲ. ಅಪಹರಣವಾದ ಮಹಿಳೆ ದೌರ್ಜನ್ಯಕ್ಕೆ ಒಳಗಾದ ಪ್ರಕರಣ ಸಂತ್ರಸ್ತೆಯಾಗಿದ್ದು, ದೂರು ನೀಡದಂತೆ ತಡೆಯಲು ಮಾಡಿರುವ ಯತ್ನವಿದು.
ಅಲ್ಲದೆ ಇತರೆ ಮಹಿಳೆ ದೂರು ನೀಡಿದರೆ ತಮಗೆ ಸಮಸ್ಯೆಯಾಗಬಹುದು ಎಂದು ಅಪಹರಿಸಲಾಗಿತ್ತು. ಸಾಕ್ಷಿಗಳ ಹೇಳಿಕೆ ಇನ್ನೂ ದಾಖಲಿಸಿಕೊಳ್ಳಬೇಕು. ಇತರೆ ಮಹಿಳೆಯರು ದೂರು ಕೊಡಬೇಕಾದರೆ ರೇವಣ್ಣಗೆ ಜಾಮೀನು ನೀಡಬಾರದು ಎಂದು ಕೋರ್ಟ್ಗೆ ಮನವಿ ಮಾಡಿದ್ದರು.
ರೇವಣ್ಣ ಪರ ವಕೀಲ ಪ್ರತಿವಾದ ಮಂಡಿಸಿದ ಸಿ. ವಿ ನಾಗೇಶ್, ಮೇ 2 ರಂದು ಅಪಹರಣವಾದ ಮೇಲೆ ಅಂದೇ ಯಾಕೆ ದೂರು ಯಾಕೆ ನೀಡಿಲ್ಲ. ಮಹಿಳೆಯು ಎಚ್. ಡಿ ರೇವಣ್ಣ ಕುಟುಂಬಕ್ಕೆ ರಕ್ತ ಸಂಬಂಧಿಯಾಗಬೇಕು. 10 ವರ್ಷದಿಂದ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹೇಳಿ ಕಳುಹಿಸಿದ್ದಕ್ಕೆ ಬಂದಿದ್ದಾಳೆ. ಹೀಗಾದಮೇಲೆ ಕಿಡ್ನಾಪ್ ಅಥವಾ ಒತ್ತೆಯಾಳಾಗಿ ಇಟ್ಟುಕೊಳ್ಳು ಉದ್ದೇಶ ಎಲ್ಲಿಂದ ಬರತ್ತದೆ.
ಆದರೆ ದೂರುದಾರನಾಗ ಆಕೆಯ ಮಗ ತಾಯಿ ಮನೆಗೆ ಬಂದಿಲ್ಲ ಎಂಬುದನ್ನ ಎಫ್ಐಆರ್ನಲ್ಲಿ ಉಲ್ಲೇಖಿಸಿದ್ದಾನೆ. ಅಂದರೆ ಮಹಿಳೆ ಮನೆಗೆ ಬಂದಿರದಿದ್ದಕ್ಕೆ ಆಕೆಯನ್ನ ಯಾರೋ ಅಪಹರಣ ಮಾಡಿದ್ದಾರೆ ಎಂಬುದು ದೂರುದಾರನ ಊಹೆಯಾಗಿದೆ. ಟಿವಿಯಲ್ಲಿ ವಿಡಿಯೋ ಬಂದಿದೆ ಅಂದುಕೊಂಡು ದೂರು ನೀಡಲಾಗಿದೆ. ಚುನಾವಣಗೆ ಮುನ್ನ ಮನೆಗೆ ಕರೆದಿದ್ದಾರೆ. ಬನ್ನಿ ಅಂದ ಮಾತ್ರಕ್ಕೆ ಅಪಹರಣ ಹೇಗೆ ಆಗುತ್ತದೆ? ಅಲ್ಲದೆ ಇದು ಅಪಹರಣವಾದರೆ ಆತನಿಗೆ ಕರೆ ಮಾಡಿ ಏನಾದ್ರೂ ಡಿಮ್ಯಾಂಡ್ ಮಾಡಬೇಕಿತ್ತಲ್ವಾ? ಏಕೆ ಮಾಡಿಲ್ಲ ಎಂದರು.
ಕಿಡ್ನಾಪ್ ಪ್ರಕರಣದಲ್ಲಿ ರೇವಣ್ಣರನ್ನ ಬಂಧಿಸಿದ ದಿನವೇ ಮಹಿಳೆ ಹುಣಸೂರು ಠಾಣೆ ಲಿಮಿಟ್ನಲ್ಲಿ ಪತ್ತೆಯಾಗಿದ್ದಾಳೆ. ಸಂತ್ರಸ್ತೆ ಪೊಲೀಸರ ಮುಂದೆ ಪ್ರಜ್ವಲ್ ಮೇಲೆ ಮಾತ್ರ ಆರೋಪ ಮಾಡಿದ್ದಾಳೆಯೇ ಹೊರತು, ರೇವಣ್ಣನ ಮೇಲೆ ಯಾವುದೇ ಆರೋಪ ಮಾಡಿಲ್ಲ. ಸಿಆರ್ಪಿಸಿ ಹೇಳಿಕೆಯಲ್ಲಿ 161 ರೇವಣ್ಣ ಮೇಲೆ ಯಾವುದೇ ಆರೋಪ ಮಾಡಿಲ್ಲ, ಕೇವಲ ಪ್ರಜ್ವಲ್ ಮೇಲೆ ರೇಪ್ ಆರೋಪ ಮಾಡಿದ್ದಾಳೆ.
ಸಂತ್ರಸ್ತೆ ವಿಡಿಯೋ ಬಿಡುಗಡೆ ಬಗ್ಗೆ ಪ್ರಸ್ತಾಪ
ನಿನ್ನೆಯಿಂದ ಸಂತ್ರಸ್ತೆ ವಿಡಿಯೋ ವೈರಲ್ ಆಗಿದೆ, ಅದರಲ್ಲಿ ತನ್ನನ್ನು ಯಾರೂ ಕಿಡ್ನಾಪ್ ಮಾಡಿಲ್ಲ ಎಂದು ಸಂತ್ರಸ್ತೆ ಹೇಳಿದ್ದಾಳೆ. ಕೋರ್ಟ್ ಅನುಮತಿಸಿದರೆ ವಿಡಿಯೋ ಕೋರ್ಟ್ ಗೆ ಸಲ್ಲಿಸುತ್ತೇನೆ. ಸಂತ್ರಸ್ತೆ ತನ್ನ ಸಂಬಂಧಿಕರ ಮನೆಯಲ್ಲಿ ಇದ್ದೆ ಅಂತಾ ಹೇಳಿಕೆ ನೀಡಿದ್ದಾರೆ. ಹಾಗಾದ್ರೆ ಕಿಡ್ನಾಪ್ ಹಾಗಿದ್ದೆಲ್ಲಿ, ಇನ್ನೂ ಆಕೆಯನನ್ನ ಕರೆದುಕೊಂಡು ಹೋಗಿ ಸ್ಥಳ ಮಹಜರು ಏಕೆ ಮಾಡಿಲ್ಲ. ಎಸ್ಐಟಿ ಯಾವ ತನಿಖೆ ಮಾಡುತ್ತಿದೆ. ಎಲ್ಲಿ ಸಾಕ್ಷ್ಯ ನಾಶ ಆಗಿದೆ. ಆಕೆಯ ಹೇಳಿಕೆಯನ್ನ ನಾವು ಗಮನಿಸಬೇಕು. ವಿಡಿಯೋ ದಲ್ಲಿ ನನ್ನ ಯಾರು ಕಿಡ್ನಾಪ್ ಮಾಡಿಲ್ಲ ಅಂತ ಹೇಳಿದ್ದಾರೆ. ಬೆದರಿಕೆ ಹಾಕಿಲ್ಲ, ನನ್ನ ಯಾರು ಬಲವಂತದಿಂದ ಕಿಡ್ನಾಪ್ ಮಾಡಿಲ್ಲ. ನಾನು ಅದಷ್ಟು ಬೇಗ ಬರ್ತಿನಿ ಅಂತ ಆಕೆ ಆಕೆಯ ಮಗನಿಗೂ ಹೇಳಿದ್ದೆ ಎಂದು ನಾಗೇಶ್ ಕೋರ್ಟ್ಗೆ ಮಹಿಳೆ ವಿಡಿಯೋ ಬಗ್ಗೆ ತಿಳಿಸಿದ್ದಾರೆ.


