ಬೆಂಗಳೂರು: ನಮ್ಮ ಮೆಟ್ರೋ ನಿಯಗಳಿಗೆ ಪ್ರಯಾಣಿಕರು ಕಂಗಾಲಾಗಿ ಹೋಗಿದ್ದಾರೆ. ತುಂಬಾ ರಶ್ ಇದೆ ಎಂದು ಮುಂದಿನ ಮೆಟ್ರೋ ಹತ್ತೋಣ ಅಂತ 20 ನಿಮಿಷಕ್ಕಿಂತ ಹೆಚ್ಚು ಕಾಲ ನಿಲ್ದಾಣದಲ್ಲಿ ಕಾಯುತ್ತಾ ಕುಳಿತರೆ ದಂಡ ಗ್ಯಾರಂಟಿ.
ಇದೀಗಾ 5 ನಿಮಿಷ ಹೆಚ್ಚಿಗೆ ಮೆಟ್ರೋ ಸ್ಟೇಷಸ್ನಲ್ಲಿ ಇದ್ದಿದ್ದಕ್ಕೆ ಪ್ರಯಾಣಿಕರೊಬ್ಬರು ದಂಡ ಕಟ್ಟಿರುವಂತಹ ಘಟನೆ ನಡೆದಿದೆ. ಹೀಗಾಗಿ ಬಿಎಂಆರ್ಸಿಎಲ್ನ ಈ ರೂಲ್ಸ್ನಿಂದ ಪ್ರಯಾಣಿಕರು ದಂಗಾಗಿದ್ದಾರೆ.
ಮೊಬೈಲ್ನಲ್ಲಿ ಚಾರ್ಜ್ ಇಲ್ಲದ ಕಾರಣ ಮೆಟ್ರೋ ಸ್ಟೇಷನ್ನಲ್ಲಿ ಪ್ರಯಾಣಿಕರೊಬ್ಬರು ಚಾರ್ಜ್ ಹಾಕಿಕೊಂಡಿದ್ದಾರೆ. 5 ನಿಮಿಷ ಚಾರ್ಜ್ ಬಳಿಕ ಪ್ರಯಾಣಕ್ಕೆ ಮುಂದಾದಾಗ ದಂಡ ಕಟ್ಟುವಂತೆ ಮೆಟ್ರೋ ಸಿಬ್ಬಂದಿಗಳಿಂದ ಕಿರಿಕ್ ಮಾಡಲಾಗಿದೆ. 5 ನಿಮಿಷ ಹೆಚ್ಚಿಗೆ ಇದ್ದೀಯಾ ದಂಡ ಕಟ್ಟು ಎಂದಿದ್ದಾರೆ.
ಮಳೆ ಇದೆ, ಚಾರ್ಜ್ ಇರಲಿಲ್ಲ ಹೀಗಾಗಿ ಲೇಟ್ ಆಯ್ತು ಅಂದರೂ ಮೆಟ್ರೋ ಸಿಬ್ಬಂದಿಗಳು ಮಾತ್ರ ಡೋಂಟ್ ಕೇರ್ ಎಂದಿದ್ದಾರೆ. ಸ್ಟೇಷನ್ನಲ್ಲಿ ಕೇವಲ 20 ನಿಮಿಷವಷ್ಟೇ ಇರಲು ಅನುಮತಿ. ಕೇವಲ 1 ನಿಮಿಷ ಹೆಚ್ಚಾದರೂ ದಂಡ ಪಾವತಿ ಮಾಡಲೇಬೇಕು ಎಂದು ಹೇಳಿದ್ದಾರೆ.


