ಬೆಂಗಳೂರು : ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಒಂದರ ಮೇಲೊಂದು ಎಫ್ಐಆರ್ ದಾಖಲಾಗುತ್ತಿವೆ. ಅದರಲ್ಲೂ ಮೂರನೇ ಎಫ್ಐಆರ್ ದಾಖಲಾಗಿರುವ ಸೆಕ್ಷನ್ ಪ್ರಜ್ವಲ್ ರೇವಣ್ಣಗೆ ಕಾನೂನು ಕಂಟಕ ಎದುರಾಗಿದೆ.
ಪ್ರಜ್ವಲ್ ರೇವಣ್ಣ ವಿರುದ್ಧ ಮೂರನೇ ಎಫ್ಐಆರ್ನಲ್ಲಿ ಐಪಿಸಿ 376(2)(N), 376(2)(K), 354(A), 354(B), 354(C) ಹಾಗೂ 506 ಅಡಿಯಲ್ಲಿ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಎಫ್ಐಆರ್ ನಲ್ಲಿ ಒಂದಕ್ಕಿಂತ ಒಂದು ಕಠಿಣ ಸೆಕ್ಷನ್ ಗಳನ್ನು ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಜ್ವಲ್ಗೆ ದಿನದಿಂದ ದಿನಕ್ಕೆ ಉರುಳು ಬಿಗಿಯಾಗುತ್ತಿದೆ.
ಹಾಗಾದ್ರೆ, ಪ್ರಜ್ವಲ್ ವಿರುದ್ದದ ಮೂರನೇ ಎಫ್ಐಆರ್ನಲ್ಲಿ ದಾಖಲಾಗಿರುವ ಸೆಕ್ಷನ್ಗಳು ಏನೇನು ಹೇಳುತ್ತೆ ಎನ್ನುವುದನ್ನು ನೋಡುವುದಾದರೆ, 376(2)(N)- ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ, 376(2)(K)- 354(A) – ಲೈಂಗಿಕ ಅನುಕೂಲಕ್ಕಾಗಿ ಬೇಡಿಕೆ, 354(B)-ಬಟ್ಟೆ ಹಿಡಿದು ಎಳೆದಾಡಿದ ಆರೋಪ, 354(C) ಖಾಸಗಿ ಚಿತ್ರಗಳನ್ನ ಸೆರೆ ಹಿಡಿದು ವೀಕ್ಷಣೆ ಮಾಡುವುದು, ಆಕೆಯ ಒಪ್ಪಿಗೆ ಇಲ್ಲದೆ ಪ್ರಸಾರ ಮಾಡುವುದು, 506- ಬೆದರಿಕೆ ಹಾಕುವುದು. ಹೀಗೆ ಎಸ್ಐಟಿ ಮೂರನೇ ಎಫ್ಐಆರ್ ನಲ್ಲಿ ಕಠಿಣ ಸೆಕ್ಷನ್ ಗಳನ್ನ ಹಾಕಿದೆ.


