BBMP
Loading ...

ಕೊರೊನಾ ಲಸಿಕೆ ಬಂದಾಗಿನಿಂದ ಅದರ ಅಡ್ಡಪರಿಣಾಮದ ಬಗ್ಗೆ ಜನರಿಗೆ ಆತಂಕವಿತ್ತು. ಇನ್ನು ಕೊರೊನಾ ಬಳಿಕ ಹೃದಯಾಘಾತದ ಸಮಸ್ಯೆ ಹೆಚ್ಚಾಗುತ್ತಿರುವುದರಿಂದ ಕೊರೊನಾ ಲಸಿಕೆಯಿಂದ ಉಂಟಾಗುತ್ತಿರಬಹುದೇ ಎಂಬ ಅನುಮಾನವಿತ್ತು. ಅದರಲ್ಲೂ ಪುನೀತ್ ರಾಜ್‌ಕುಮಾರ್‌ ಹೃದಯಾಘಾತದಿಂದ ತೀರಿಕೊಂಡಾಗ ಕೊರೊನಾ ಲಸಿಕೆಗೂ ಇವರಿಗೆ ಹೃದಯಾಘಾತಕ್ಕೂ ಏನಾದರೂ ಸಂಬಂಧವಿದೆಯೇ ಎಂಬ ಅನುಮಾನ ಜನರಿಗೆ ಉಂಟಾಗಿತ್ತು.

ಆದರೆ ವೈದ್ಯರುಗಳು ಕೊರೊನಾ ಲಸಿಕೆಗೂ, ಹೃದಯಾಘಾತಕ್ಕೂ ಸಂಬಂಧವಿಲ್ಲ ಎಂದ ಮೇಲೆ ಸುಮ್ಮನಾಗಿದ್ದರು. ಮತ್ತೆ ಪುನೀತ್‌ ಸಾವಿನ ಬಗ್ಗೆ ಪ್ರಶ್ನೆ ಹುಟ್ಟಿಕೊಂಡಿದೆ. ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ ಕೆಲವರಿಗೆ ಅಡ್ಡ ಪರಿಣಾಮ ಉಂಟಾಗಿದೆ ಎಂದ ಮೇಲೆ ಮತ್ತೆ ಜನರಲ್ಲಿ ಸಂಶಯ ಮೂಡಿದೆ. ಪುನೀತ್‌ ರಾಜ್‌ಕುಮಾರ್‌ ಸಾವಿಗೆ ಈ ಕೊರೊನಾ ಲಸಿಕೆ ಕಾರಣವಾಗಿರಬಹುದೇ ಎಂಬ ಪ್ರಶ್ನೆ ಮತ್ತೆ ಮೂಡುತ್ತಿದೆ. ಏಕೆಂದರೆ ಕೊರೊನಾ ಲಸಿಕೆ ಪಡೆದ ಕೆಲವೇ ದಿನಗಳಲ್ಲಿ ಅಷ್ಟೊಂದು ಕಟ್ಟು ಮಸ್ತಾಗಿದ್ದ, ಆರೋಗ್ಯದ ಬಗ್ಗೆ ಅಷ್ಟೊಂದು ಕಾಳಜಿ ವಹಿಸಿದ್ದ ವ್ಯಕ್ತಿ ಸಾವನ್ನಪ್ಪಿದ್ದರು.

ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ ಕೊರೊನಾ ಬಳಿಕ ಜನರಿಗೆ ಹೃದಯಾಘಾತ ಕಾಣಿಸಿಕೊಂಡಂತೆ ಈ ಮೊದಲು ಇರಲಿಲ್ಲ. ಮೊದಲೆಲ್ಲಾ ಹೃದಯಾಘಾತ 45 ವರ್ಷ ಮೇಲ್ಪಟ್ಟವರಲ್ಲಿ ಕಂಡು ಬರುತ್ತಿತ್ತು, ಆದರೆ ಇತ್ತೀಚಿನ 2-3 ವರ್ಷಗಳಲ್ಲಿ ಯುವಕರಲ್ಲಿ, ಹದಿಹರೆಯದ ಪ್ರಾಯದವರಲ್ಲಿ ಹೃದಯಾಘಾತ ಸಮಸ್ಯೆ ಕಂಡು ಬರುತ್ತಿದೆ, ಆ ಮಕ್ಕಳಿಗೇನು ಹೃದಯ ಸಂಬಂಧಿ ಕಾಯಿಲೆ ಇದ್ದಿದ್ದು ಇಲ್ಲ ಎಂದ ಎಷ್ಟೋ ಪೋಷಕರು ಹೇಳಿದ್ದಾರೆ. ಅಷ್ಟೋ ಆರೋಗ್ಯವಾಗಿದ್ದ ಯುವಕ-ಯುವತಿಯರು ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪುತ್ತಿದ್ದಾರೆ. ಇದಕ್ಕೆಲ್ಲಾ ಕೊರೊನಾ ಲಸಿಕೆ ಕಾರಣವಿರಬಹುದೇ ಎಂಬ ಸಂಶಯ ಜನರನ್ನು ಕಾಡುತ್ತಲೇ ಇದೆ.

ಆಸ್ಟ್ರೆಜೆನಿಕಾ ಕಂಪನಿ ಕೋವಿಶೀಲ್ಡ್ ವ್ಯಾಕ್ಸ್‌ಜೆವೆರಿಯಾ ಮುಂತಾದ ಬ್ರ್ಯಾಂಡ್‌ನ ಅಡಿಯಲ್ಲಿ ಲಸಿಕೆಯನ್ನು ನೀಡಿದೆ. ಭಾರತದಲ್ಲಿ ಕೋವಿಶೀಲ್ಡ್, ಕೊವಾಕ್ಸಿನ್ ಲಸಿಕೆ ನೀಡಲಾಗಿತ್ತು. ಕೋಟ್ಯಾಂತರ ಭಾರತೀಯರು ಕೋವಿಶೀಲ್ಡ್ ಪಡೆದಿದ್ದಾರೆ.

ಕೊರೊನಾ ಲಸಿಕೆಯಿಂದ ಅಡ್ಡಪರಿಣಾಮ
ಕೊರೊನಾ ಲಸಿಕೆ ಪಡೆದಾಗTTS (TTS – Thrombosis with Thrombocytopenia Syndrome) ಅಪಾಯದ ಸಾಧ್ಯತೆ ಇದೆ. ಇದೊಂದು ಗಂಭೀರ ಸಮಸ್ಯೆಯಾಗಿದೆ. ಈ ಬಗೆಯ ಅಡ್ಡಪರಿಣಾಮ ಉಂಟಾದರೆ ರಕ್ತಹೆಪ್ಪುಗಟ್ಟುವುದು, ಪ್ಲೇಟ್‌ಲೆಟ್‌ಗಳ ಸಂಖ್ಯೆ ಕಡಿಮೆಯಾಗುವುದು.

ಕೊರೊನಾ ಲಸಿಕೆ ಪಡೆದವರು ಈಗ ಭಯ ಪಡಬೇಕೆ?
ಕೊರೊನಾ ಲಸಿಕೆಯಿಂದ ಅಡ್ಡಪರಿಣಾಮ ಉಂಟಾಗುವುದಾದರೆ ಕೆಲವೇ ದಿನಗಳಲ್ಲಿ ಅಥವಾ ತಿಂಗಳ ಒಳಗೆ ಗೊತ್ತಾಗುವುದು, ಆದರೆ ಲಸಿಕೆ ಪಡೆದು ವರ್ಷಗಳೇ ಕಳೆದಿದ್ದರೆ ಆತಂಕ ಪಡಬೇಡಿ. ಚಿಕ್ಕ ಪುಟ್ಟ ಅಡ್ಡಪರಿಣಾಮಗಳ ಬಗ್ಗೆ ಆತಂಕ ಬೇಡ. ಲಸಿಕೆ ಚುಚ್ಚಿದ ಭಾಗದಲ್ಲಿ ನೋವು, ಜ್ವರ ಬರುವುದು, ವಾಂತಿ ಬಂದಂತೆ ಅನಿಸುವುದು, ಈ ರೀತಿಯ ಸಣ್ಣ ಪುಟ್ಟ ಅಡ್ಡಪರಿಣಾಮಗಳು ಬರಬಹುದು ಹಾಗಾಗಿ ಆತಂಕ ಪಡಬೇಕಾಗಿಲ್ಲ.

ಗಂಭೀರ ಅಡ್ಡಪರಿಣಾಮ ಬೀರುವುದು ಬಲು ಅಪರೂಪ
ಕೋವಿಶೀಲ್ಡ್‌ ಲಸಿಕೆ ಪಡೆದ ಎಲ್ಲರಿಗೂ ಸಮಸ್ಯೆ ಬರುತ್ತೆ ಅಂತಲ್ಲ, ಈ ಲಸಿಕೆ ಪಡೆದ ಕೋಟಿಯಲ್ಲಿ ಒಬ್ಬರಿಗೆ ಅಡ್ಡಪರಿಣಾಮವಾದರೂ ಆಗಬಹುದು, ಹಾಗಾಗಿ ಲಸಿಕೆ ಪಡೆದವರು ಎಲ್ಲರೂ ಆತಂಕ ಪಡಬೇಕಾಗಿಲ್ಲ. ಕೊರೊನಾ ಲಸಿಕೆ ಪಡೆದು ತುಂಬಾ ಸಮಯವಾಗಿದ್ದರೆ ಈ ಆತಂಕ ಪಡುವ ಅವಶ್ಯಕತೆಯಿಲ್ಲ.

ವಿಶ್ವ ಆರೋಗ್ಯ ಸಂಸ್ಥೆ ಏನು ಹೇಳುತ್ತದೆ?
ಎಲ್ಲಾ ಔಷಧಿಗಳಂತೆ ಈ ಕೊರೊನಾ ಲಸಿಕೆಯೂ ಕೆಲವರಿಗೆ ಅಡ್ಡಪರಿಣಾಮ ಬೀರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಇದೆ. ಯಾವುದೇ ಔಷಧಿಯಾಗಿರಲಿ ಕೆಲವೊಂದು ಅಡ್ಡಪರಿಣಾಮ ಬೀರುವುದು, ಅದರಂತೆ ಈ ಕೊರೊನಾ ಲಸಿಕೆ ಕೂಡ, ಆದ್ದರಿಂದ ಕೋವಿಶೀಲ್ಡ್ ಲಸಿಕೆ ಪಡೆದ ಮೇಲೆ ಅನಗ್ಯತ ಭಯ ಪಡಬೇಡಿ.

ಶ್ರೀ ಸಿದ್ಧಲಿಂಗೇಶ್ವರ ಅನಾಥಾಲಯದ ಪ್ರವೇಶಕ್ಕೆ ಮೇ 15ರವರೆಗೆ ಅರ್ಜಿ ವಿತರಣೆ: ಆನ್​ಲೈನಲ್ಲಿ ಅರ್ಜಿಗೆ ಅವಕಾಶವಿಲ್ಲ

Leave a Reply

Your email address will not be published. Required fields are marked *