BBMP
Loading ...

Electrcity

ಮಂಡ್ಯ: ಮದ್ದೂರು ತಾಲೂಕಿನ ಆಬಲವಾಡಿ ಗ್ರಾಮದಲ್ಲಿ 11 ಕೆವಿ ಮಾರ್ಗದಲ್ಲಿ ದುರಸ್ತಿ ಮಾಡುವ ಸಂದರ್ಭದಲ್ಲಿ ವಿದ್ಯುತ್ ಶಾಕ್​ನಿಂದ ಕಾರ್ಮಿಕನೊಬ್ಬ ಸಾವಿಗೀಡಾಗಿದ್ದಾನೆ. ಈ ಘಟನೆ ಸೋಮವಾರ ನಡೆದಿದೆ. ಹಾವೇರಿ ಜಿಲ್ಲೆ, ಶಿಗ್ಗಾವಿ ಗ್ರಾಮದ ಅಶೋಕ್ ಎಂಬುವರ ಪುತ್ರ ಬಸವರಾಜ್ ಎಲಿಗಾರ್ (23) ಮೃತ ಕಾರ್ಮಿಕನಾಗಿದ್ದಾನೆ.

11 ಕೆವಿ ಮಾರ್ಗದ ವಿದ್ಯುತ್ ತಂತಿಗಳನ್ನು ದರಸ್ತಿ ಮಾಡುವ ಸಂದರ್ಭದಲ್ಲಿ ಸೆಸ್ಕ್ ಅಧಿಕಾರಿಗಳ ಬೇಜವಾಬ್ದಾರಿಯಿಂದ ವಿದ್ಯತ್ ಸಂಪರ್ಕ ಕಡಿತ ಮಾಡದ ಕಾರಣ, ವಿದ್ಯುತ್ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಾರ್ಮಿಕ ‌ವಿದ್ಯುತ್ ಕಂಬದ ಮೇಲೆ ಹತ್ತಿ ಕೆಲಸ ಮಾಡು ಸಂದರ್ಭದಲ್ಲಿ ವಿದ್ಯತ್ ಅವಘಡದ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡು ಸಾಯುವ ಮುನ್ನ ಕಾರ್ಮಿಕನ ಅನುಭವಿಸುತ್ತಿದ್ದ ರೋಧನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರಿಹಾರಕ್ಕೆ ಆಗ್ರಹ: ವಿದ್ಯುತ್ ಅವಘಡದಿಂದ ಮೃತಪಟ್ಟ ಕಾರ್ಮಿಕ ಬಸವರಾಜು ಅವರಿ ಕುಟುಂಬಕ್ಕೆ ಸೆಸ್ಕ್ ಇಲಾಖೆ ವತಿಯಿಂದ ಖಾಯಂ ಹುದ್ದೆ ನೀಡುವ ಜತೆಗೆ ಸೂಕ್ತ ಪರಿಹಾರ ನೀಡಬೇಕು ಮತ್ತು ಘಟನೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸೆಸ್ಕ್ ಇಲಾಖೆಯ ವಿರುದ್ದ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಗ್ರಾಪಂ‌ ಮಾಜಿ ಅಧ್ಯಕ್ಷ ಆಬಲವಾಡಿ ಆರ್.ಸುರೇಶ್ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *