BBMP
Loading ...

Loka Raid

Greater Bengaluru News9 : ಕೆಎಎಸ್‌ ಅಧಿಕಾರಿ ಬಿ. ಮಲ್ಲಿಕಾರ್ಜುನ ಅವರ ಅಕ್ರಮ ಸಂಪತ್ತಿನ ಕೋಟೆಗೆ ಬುಧವಾರ ಲಗ್ಗೆ ಇಟ್ಟಿರುವ ಬೆಂಗಳೂರು ಘಟಕದ ಲೋಕಾಯುಕ್ತ ಪೊಲೀಸ್‌ ಅಧಿಕಾರಿಗಳು, ಬರೋಬ್ಬರಿ ನೂರು ಎಕರೆ ಜಮೀನು ಸಂಪಾದಿಸಿರುವುದನ್ನು ಬಯಲಿಗೆ ಎಳೆದಿದ್ದಾರೆ. ಜತೆಗೆ, 2.53 ಕೋಟಿ ರೂ. ನಗದು ಜಪ್ತಿ ಮಾಡಿದ್ದಾರೆ.

ಆದಾಯ ಮೀರಿ ಆಸ್ತಿ ಸಂಪಾದನೆ ಆರೋಪದ ಮೇರೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ವಿಶೇಷ ಭೂ ಸ್ವಾಧೀನಾಧಿಕಾರಿ ಬಿ. ಮಲ್ಲಿಕಾರ್ಜುನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತ ಅಧಿಕಾರಿಗಳು, ಏಕಕಾಲಕ್ಕೆ ಮಲ್ಲಿರ್ಜುನ ಹಾಗೂ ಅವರ ಸಂಬಂಧಿಕರ ಮನೆಗಳಲ್ಲಿ ದಾಳಿ ನಡೆಸಿದ್ದರು.

ಬೆಂಗಳೂರು, ಬಾಗೇಪಲ್ಲಿ, ಮಾಲೂರು, ಚಿಂತಾಮಣಿ, ಚಿಕ್ಕಬಳ್ಳಾಪುರ ಸೇರಿದಂತೆ 11 ಸ್ಥಳಗಳಲ್ಲಿಇಡೀ ದಿನ ದಾಳಿ ಕಾರ್ಯಾಚರಣೆ ನಡೆಸಿದ್ದ ಅಧಿಕಾರಿಗಳು, ಕೋಟಿಗಟ್ಟಲೆ ನಗದು, ಚಿನ್ನಾಭರಣ, ಐಷಾರಾಮಿ ವಾಹನಗಳನ್ನು ಪತ್ತೆಹಚ್ಚಿದ್ದಾರೆ. ತಮ್ಮ ಸಂಬಂಧಿಕರು ಹಾಗೂ ಆಪ್ತರ ಹೆಸರಿನಲ್ಲಿಸಂಪಾದನೆ ಮಾಡಿರುವ 100 ಎಕರೆ ಐದು ಗುಂಟೆ ಜಮೀನಿಗೆ ಸಂಬಂಧಿಸಿದ ದಾಖಲೆ ವಶಪಡಿಸಿಕೊಂಡಿದ್ದಾರೆ.

ಬಾಗೇಪಲ್ಲಿ ತಾಲೂಕಿನಲ್ಲಿ ಮಲ್ಲಿಕಾರ್ಜುನ್‌ ಸುಮಾರು 30 ಎಕರೆ ಜಮೀನು ಹೊಂದಿದ್ದಾರೆ. 25 ಎಕರೆಯಲ್ಲಿ ಫಾಮ…ರ್‍ಹೌಸ್‌ ನಿರ್ಮಿಸಿದ್ದು ಮಾವು, ಪಪ್ಪಾಯ ಸೇರಿದಂತೆ ಹಲವು ವಾಣಿಜ್ಯ ಬೆಳೆ ಬೆಳೆಯುತ್ತಿದ್ದಾರೆ. ಉಳಿದ ಜಮೀನು ಬೇರೆ ಬೇರೆ ತಾಲೂಕುಗಳಲ್ಲಿದೆ ಎಂದು ಮೂಲಗಳು ತಿಳಿಸಿವೆ.100 ಎಕರೆ ಐದು ಗುಂಟೆಗೆ ದಾಖಲೆಗಳು ಸಿಕ್ಕಿವೆ. ಈ ಜಮೀನಿಗೆ ಸರಕಾರಿ ಮೌಲ್ಯದ ಬೆಲೆಯನ್ನೇ ಲೆಕ್ಕ ಮಾಡಲಾಗಿದೆ. ಮಾರುಕಟ್ಟೆ ದರವು ಮೂರು ಪಟ್ಟು ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.

ಸಂಬಳವನ್ನೇ ಡ್ರಾ ಮಾಡಿಲ್ಲ
ಬ್ಯಾಟರಾಯನಪುರದಲ್ಲಿನ ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ಮಲ್ಲಿಕಾರ್ಜುನ್‌ ವಾಸಿಸುತ್ತಿದ್ದರು. ಎರಡು ವಾಸದ ಮನೆಗಳು ಇವೆ. ಅವರ ಮನೆ ಹಾಗೂ ಸಂಬಂಧಿಕರ ಬಳಿ 2.53 ಕೋಟಿ ರೂ.ನಗದು ಪತ್ತೆಯಾಗಿದೆ. 15 ಲಕ್ಷ ರೂ. ಮೌಲ್ಯದ ವಾಹನಗಳು, 3.10 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಸಿಕ್ಕಿದೆ. ಜತೆಗೆ, 1 ಕೋಟಿ ರೂ. ಬ್ಯಾಂಕ್‌ ಬ್ಯಾಲೆನ್ಸ್‌ ಪತ್ತೆಯಾಗಿದೆ. ಹಲವು ವರ್ಷಗಳಿಂದ ಮಲ್ಲಿಕಾರ್ಜುನ ಅವರು ತಮ್ಮ ಸಂಬಳವನ್ನೇ ಡ್ರಾ ಮಾಡಿಲ್ಲ. ಒಟ್ಟಾರೆ 4,04,50,535 ರೂ. ಮೌಲ್ಯದ ಚರಾಸ್ತಿ ಸಿಕ್ಕಿದೆ. ಒಟ್ಟಾರೆ 12,95,27,535 ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.

Leave a Reply

Your email address will not be published. Required fields are marked *