BBMP
Loading ...

Nagarabhavi

Greater Bengaluru News9: ಗ್ರೇಟರ್ ಬೆಂಗಳೂರು ಪ್ರಾಧಿಕಾರವು (ಜಿಬಿಎ) ಹಮ್ಮಿಕೊಂಡಿರುವ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನಕ್ಕೆ ಬೆಸ್ಕಾಂ ಕೂಡ ಸಾಥ್ ನೀಡಿದ್ದು, ನಗರದ ಎಲ್ಲ ಉಪ ವಿಭಾಗಗಳ ವ್ಯಾಪ್ತಿಯ ಪಾದಚಾರಿ ಮಾರ್ಗಗಳಲ್ಲಿನ ನಿಷ್ಕ್ರಿಯ, ಅನುಪಯುಕ್ತ ಹಾಗೂ ಜನರ ಓಡಾಟಕ್ಕೆ ತೊಡಕಾಗಿರುವ ವಿದ್ಯುತ್ ಮೂಲಸೌಕರ್ಯಗಳನ್ನು ಸ್ಥಳಾಂತರಿಸುವ ಕಾರ್ಯವನ್ನು ಚುರುಕುಗೊಳಿಸಿದೆ.

ಈ ಸ್ವಚ್ಛತಾ ಅಭಿಯಾನದ ಭಾಗವಾಗಿ ನಾಗರಭಾವಿ ಪ್ರದೇಶದ ಎನ್-೮ (N8) ಉಪ ವಿಭಾಗದ ಅಧಿಕಾರಿಗಳು ಪಾದಚಾರಿ ಮಾರ್ಗಗಳಲ್ಲಿ ಬಿದ್ದಿದ್ದ ಅಥವಾ ಬಳಕೆಯಲ್ಲಿಲ್ಲದ ಹಳೆ ವಿದ್ಯುತ್ ಕಂಬಗಳನ್ನು ಹಾಗೂ ಟ್ರಾನ್ಸ್‌ಫಾರ್ಮರ್‌ಗಳ ಸುತ್ತಮುತ್ತ ಬೆಳೆದಿದ್ದ ಕಳೆ ಗಿಡಗಳನ್ನು ತೆರವುಗೊಳಿಸುವ ಮೂಲಕ ಸಾರ್ವಜನಿಕರಿಗೆ ಸುಲಭವಾಗಿ ಓಡಾಡಲು ಅನುಕೂಲ ಕಲ್ಪಿಸಿದ್ದಾರೆ.

ಬೆಸ್ಕಾಂ ಕೈಗೊಂಡಿರುವ ಈ ಸ್ವಚ್ಛತಾ ಕಾರ್ಯದಲ್ಲಿ ಮುಖ್ಯ ಎಂಜಿನಿಯರ್ ಕಾಶಿ ರಾಮ್‌ಪವರ್, ಆಡಳಿತ ವಿಭಾಗದ ಮಹಾಪ್ರಬಂಧಕ ದಯಾನಂದ್, ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಿ. ಮಲ್ಲಿಕಾರ್ಜುನ, ಸಹಾಯಕ ಎಂಜಿನಿಯರ್‌ಗಳಾದ ಮೋಹನ್ ಕುಮಾರ್, ಶಶಿಕುಮಾರ್ ಮತ್ತು ರೂಪಾ ಸೇರಿದಂತೆ ಎಲ್ಲಾ ಕಿರಿಯ ಎಂಜಿನಿಯರ್‌ಗಳು ಹಾಗೂ ಪವರ್‌ಮನ್‌ಗಳು ಸಕ್ರಿಯವಾಗಿ ಪಾಲ್ಗೊಂಡು ಶ್ರಮಿಸಿದ್ದಾರೆ.

ನಗರದ ಐದು ಬೆಸ್ಕಾಂ ವೃತ್ತಗಳ ಎಲ್ಲ ವಿಭಾಗಗಳಲ್ಲಿ ಆ.8 ಮತ್ತು 9ರಂದು ವಿಶೇಷ ಅಭಿಯಾನ ಕೈಗೊಳ್ಳಲಾಗಿದೆ. ಬೆಸ್ಕಾಂ ನಿಗಮ ಕಚೇರಿಯ ಹಿರಿಯ ಅಧಿಕಾರಿಗಳನ್ನು ಎರಡು ದಿನಗಳ ವಿಶೇಷ ಅಭಿಯಾನದ ಮೇಲ್ವಿಚಾರಣೆಗೆ ನಿಯೋಜಿಸಲಾಗಿದೆ. ಆ.7ರ ವರೆಗೆ 223 ವಿದ್ಯುತ್ ಕಂಬಗಳು, 8 ಟಿಸಿಗಳು, 7 ಆರ್ ಎಂಯುಗಳನ್ನು ಸ್ಥಳಾಂತರಿಸಲಾಗಿದೆ. 694 ಡಿಟಿಸಿ ಯಾರ್ಡ್, 107 ಆರ್‌ಎಂಯು, 110 ಸ್ಟನ್ ಪೋಲ್‌ಗಳ ಬಳಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *