BBMP
Loading ...

Real Estate

Greater Bengaluru News9 : ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಸಂಕಷ್ಟಕ್ಕೆ ಸಿಲುಕಿರುವ ಬಿಲ್ಡರ್‌ಗಳಿಗೆ ಕೇಂದ್ರ ಸರಕಾರ ಸ್ವಲ್ಪ ಮಟ್ಟಿನ ರಿಲೀಫ್‌ ನೀಡಿದೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು (ಎಂಒಎಚ್‌-ಯುಎ) ರಿಯಲ್‌ ಎಸ್ಟೇಟ್‌ ಯೋಜನೆಗಳ ನೋಂದಣಿ ಮತ್ತು ಪೂರ್ಣಗೊಳಿಸುವಿಕೆಯ ಸಮಯವನ್ನು ನಾಲ್ಕು ತಿಂಗಳ ಕಾಲ ವಿಸ್ತರಣೆ ಮಾಡುವಂತೆ ಎಲ್ಲಾ ರಾಜ್ಯಗಳ ರಿಯಲ್‌ ಎಸ್ಟೇಟ್‌ ಪ್ರಾಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಹಾಗಾಗಿ ಕರ್ನಾಟಕ ರಿಯಲ್ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರ (ಕೆ-ರೇರಾ) ಆ ಕುರಿತು ಪ್ರತ್ಯೇಕ ಆದೇಶವನ್ನು ಹೊರಡಿಸಬೇಕಿದೆ.

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕಾರ್ಮಿಕರು, ಟೈಲ್ಸ್‌ ಸೇರಿದಂತೆ ಇತರೆ ಕಟ್ಟಡ ನಿರ್ಮಾಣ ಸಾಮಗ್ರಿಗಳ ಕೊರತೆ, ಕಚ್ಚಾ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಇನ್ನಿತರೆ ಕಾರಣಗಳಿಂದ ಜಾಗತಿಕ ಪೂರೈಕೆ ಸರಪಣಿಗಳಿಗೆ ಅಡ್ಡಿಯುಂಟಾಗಿದೆ. ಈ ಎಲ್ಲ ಕಾರಣಗಳಿಂದಾಗಿ ರಿಯಲ್‌ ಎಸ್ಟೇಟ್‌ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಹಣಕಾಸು ಸಚಿವಾಲಯವು 2026ರ ಏಪ್ರಿಲ್ 29 ರಂದು ತನ್ನ ಕಚೇರಿ ಜ್ಞಾಪಕ ಪತ್ರದ ಮೂಲಕ, ಫೋರ್ಸ್‌ ಮಜೂರ್‌ ಷರತ್ತನ್ನು ಅನ್ವಯಿಸುವ ಉದ್ದೇಶಕ್ಕಾಗಿ ಚಾಲ್ತಿಯಲ್ಲಿರುವ ಮಧ್ಯಪ್ರಾಚ್ಯ ಪರಿಸ್ಥಿತಿಯನ್ನು ‘ಯುದ್ಧ’ ಎಂದು ಪರಿಗಣಿಸಿದೆ.

4 ತಿಂಗಳ ಕಾಲ ವಿಸ್ತರಣೆ
ರಿಯಲ್‌ ಎಸ್ಟೇಟ್‌ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯಿದೆ 2016ರ (ರೇರಾ) ಸೆಕ್ಷನ್‌ 6ರಡಿ ಯುದ್ಧ ಸೇರಿದಂತೆ ಫೋರ್ಸ್‌ ಮಜೂರ್‌ ಘಟನೆಗಳ ಕಾರಣದಿಂದಾಗಿ ಯೋಜನೆಯ ನೋಂದಣಿಯನ್ನು ವಿಸ್ತರಿಸಬಹುದು. 2026ರ ಫೆ. 28ರಂದು ಅಥವಾ ನಂತರ ಮೂಲ, ಪರಿಷ್ಕೃತ ಅಥವಾ ವಿಸ್ತೃತ ಪೂರ್ಣಗೊಳಿಸುವ ದಿನಾಂಕ ಹೊಂದಿರುವ ನೋಂದಾಯಿತ ರಿಯಲ್‌ ಎಸ್ಟೇಟ್‌ ಯೋಜನೆಗಳ ನೋಂದಣಿ ಮತ್ತು ಕಾಮಗಾರಿ ಪೂರ್ಣಗೊಳಿಸುವ ಸಮಯವನ್ನು 4 ತಿಂಗಳ ಕಾಲ ವಿಸ್ತರಣೆ ಮಾಡುವಂತೆ ಎಲ್ಲ ರೇರಾಗಳಿಗೆ ಸೂಚಿಸಿದೆ.

Leave a Reply

Your email address will not be published. Required fields are marked *