Greater Bengaluru News9 : ದಿನದಿಂದ ದಿನಕ್ಕೆ ಕಾವೇರಿ ಹೋರಾಟದ ಕಿಚ್ಚು ಜೋರಾಗಿದ್ದು, ಕರ್ನಾಟಕ ಬಂದ್ಗೆ (Karnataka Bandh) ಕನ್ನಡ ಪರ ಸಂಘಟನೆಗಳು ಕರೆ ನೀಡಿದೆ. ಹಲವು ಸಂಘಟನೆಗಳು ನಡೆಸಿದ ಸಭೆಯಲ್ಲಿ ಕರ್ನಾಟಕ ಬಂದ್ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ದಿನಾಂಕ ಫಿಕ್ಸ್ ಮಾಡಲಾಗಿದೆ. ಆಗಸ್ಟ್ 13 ರಂದು ಕರ್ನಾಟಕ ಬಂದ್ಗೆ ವಾಟಾಳ್ ನಾಗರಾಜ್ ಕರೆ ನೀಡಿದ್ದಾರೆ.
ಇಂದು ನಡೆಸಿದ ಸಭೆಯಲ್ಲಿ ಕರವೇ ಪ್ರವೀಣ್ ಶೆಟ್ಟಿ, ಶಿವರಾಮೇಗೌಡ, ಸಾರಾ ಗೋವಿಂದು, ಕೆಆರ್ ಕುಮಾರ್, ರೈತ ಪರ ಸಂಘಟನೆಗಳು ಭಾಗಿಯಾಗಿದ್ರು. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಹೋರಾಟಗಾರರು ಆಗಸ್ಟ್ 13ರಂದು ಕರ್ನಾಟಕ ಬಂದ್ ಮಾಡುವುದಾಗಿ ಘೋಷಿಸಿದ್ದು, ಈ ವೇಳೆ ಕೈ ಕೈ ಹಿಡಿದು ಒಗ್ಗಟ್ಟು ಪ್ರದರ್ಶಿಸಿದ ಕನ್ನಡ ಪರ ಸಂಘಟನೆಗಳು ಒಗ್ಗಟ್ಟು ಪ್ರದರ್ಶಿಸಿದೆ.
ಕಣ್ಮುಚ್ಕೊಂಡು ತೀರ್ಪು ಕೊಡೋಕೆ CWMA ಬೇಕಾ ಕನ್ನಡಿಗರೇನು ಕೇಂದ್ರದ ಗುಲಾಮರ? ಭಾರತದ ಭೂಪಟದಲ್ಲಿ ಕರ್ನಾಟಕ ಇಲ್ವಾ? ಕರ್ನಾಟಕದ ಬಗ್ಗೆ ಇಷ್ಟೊಂದು ತಾತ್ಸರ ಏಕೆ? ಎಂದು ಸಾರಾ ಗೋವಿಂದು ಆಕ್ರೋಶ ಹೊರಹಾಕಿದ್ರು. ಇದೇ ವೇಳೆ ಮಾತಾಡಿದ ಕರವೇ ಪ್ರವೀಣ್ ಶೆಟ್ಟಿ ಅವ್ರು, ಕನ್ನಡದ ಮಕ್ಕಳಿಗೆ, ಕರ್ನಾಟಕಕ್ಕೆ ಮರಣ ಶಾಸಕ ವಿಧಿಸಲಾಗಿದೆ. ನಮ್ಮನ್ನು ಆಳುವ ದೊರೆಗಳು ಮರಣ ಶಾಸನ ಬರೆದಿದ್ದಾರೆ ಎಂದು ಕಿಡಿಕಾರಿದ್ರು.
ಇಂಥಾ ಒಂದ ಸಂದರ್ಭ ನಮಗೆ ಬರಬಾರದಿತ್ತು, ನಿಜವಾಗಲು ತಮಿಳುನಾಡು ಜೊತೆಗೆ ಯುದ್ಧ ಮಾಡ್ಬೇಕು ಅಂತ ನಮಗಿಲ್ಲ. ನಾವೆಲ್ಲಾ ಮನುಷ್ಯರು, ಒಬ್ಬೊರಿಗೊಬ್ಬರು ಜೊತೆಗೆ ಬದುಕಬೇಕು. ಆದರೆ ತಮಿಳುನಾಡಿನವರು ಮೊದಲಿಂದಲೂ ತೀವ್ರವಾದ ತೊಂದರೆ ಕೊಟ್ಟಿದ್ದಾರೆ. 1967ರಲ್ಲಿ ಕರುಣಾನಿಧಿಯವರು ನಿಜಲಿಂಗಪ್ಪನವರ ಜೊತೆಯಲ್ಲಿ ಮಾತುಕತೆ ಮಾಡಿದ್ರು. ಪ್ರೀತಿಯಿಂದ ಅಭಿಮಾನದಿಂದ ತೀರ್ಮಾನ ತಗೋತಿದ್ರು ಎಂದು ವಾಟಾಳ್ ಹೇಳಿದ್ದಾರೆ.
ಕಾವೇರಿಗೆ ನಿರ್ವಹಣಾ ಸಮಿತಿ ಮಾಡ್ಬೇಕು ಅಂತ ಹೇಳಿ ಮಾಡಿದ್ರು. ಆದ್ರೆ ಈಗ ಕೆಆರ್ಎಸ್ನಲ್ಲಿ ನೀರಿಲ್ಲ. ನಮ್ಮ ಮುಖ್ಯಮಂತ್ರಿ ಹೇಳಿದ್ದಾರೆ, ನಮಗೆ ಕುಡಿಯೋಕೆ ನೀರು ಇದ್ರೆ ಸಾಕು ಅಂತ, ನಮ್ನವರೇ ಹೀಗೆ ಹೇಳಿದ್ನೇಲೆ ನೀರು ಇಲ್ಲ ಅನ್ನೋದು ಖಾತ್ರಿ ಎಂದು ವಾಟಾಳ್ ಹೇಳಿದ್ರು.
ಒಂದು ದಿನಕ್ಕೆ 3,500 ಕ್ಯೂಸೆಕ್ ನೀರು ಬಿಡೋಕೆ ಹೇಳ್ತಿದ್ದಾರೆ, ಹೀಗಾದ್ರೆ KRS ಸಂಪೂರ್ಣ ಮೈದಾನ ಆಗುತ್ತೆ. ಆ ಜಾಗದಲ್ಲಿ ಇಂಟರ್ ನ್ಯಾಷನಲ್ ಸ್ಟೇಡಿಯಂ ಮಾಡಲಿ, ನಾವೆಲ್ಲಾ ಸೇರಿ ಕ್ರಿಕೆಟ್ ಆಡೋಣ ಎಂದು ವಾಟಾಳ್ ಕಿಡಿಕಾರಿದ್ದಾರೆ.


