Greater Bengaluru News9 : ಸ್ಯಾಂಡಲ್‌ವುಡ್‌ನ ಜನಪ್ರಿಯ ಹಾಸ್ಯನಟ ಚಿಕ್ಕಣ್ಣ ಸದ್ಯದಲ್ಲೇ ಬ್ರಹ್ಮಚಾರಿ ಜೀವನಕ್ಕೆ ಗುಡ್‌ಬೈ ಹೇಳಿ ಗೃಹಸ್ಥಾಶ್ರಮಕ್ಕೆ ಕಾಲಿಡಲಿದ್ದಾರೆ. ಮೈಸೂರು ಮೂಲದವರಾದ ಚಿಕ್ಕಣ್ಣ, ಶೀಘ್ರದಲ್ಲೇ ಮಂಡ್ಯ ಜಿಲ್ಲೆಯ ಅಳಿಯನಾಗುತ್ತಿದ್ದಾರೆ!
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಪಾವನಾ ಎಂಬುವರ ಜೊತೆ ಚಿಕ್ಕಣ್ಣ ಅವರ ಮದುವೆ ನಿಶ್ಚಯವಾಗಿದ್ದು, ಹಸೆಮಣೆ ಏರಲು ಮುಹೂರ್ತ ಕೂಡ ಫಿಕ್ಸ್ ಆಗಿದೆ.
ಆಗಸ್ಟ್ 29, 30ರಂದು ಅದ್ಧೂರಿ ವಿವಾಹ
ಬಹಳ ಕಾಯುತ್ತಿದ್ದ ಈ ಶುಭಗಳಿಗೆ ಕೊನೆಗೂ ಬಂದೊದಗಿದೆ. ಆಗಸ್ಟ್ 29 ಮತ್ತು 30ರಂದು ನಟ ಚಿಕ್ಕಣ್ಣ ಹಾಗೂ ಪಾವನಾ ಅವರ ಕಲ್ಯಾಣ ಮಹೋತ್ಸವ ನೆರವೇರಲಿದೆ.
ಸಮಾರಂಭದ ಸ್ಥಳ: ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್.
ವಿಶೇಷ ಆಹ್ವಾನ: ಈಗಾಗಲೇ ಮದುವೆಯ ಶುಭಕಾರ್ಯಕ್ಕಾಗಿ ಚಿಕ್ಕಣ್ಣ ಅವರು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಅಧಿಕೃತ ಲಗ್ನ ಪತ್ರಿಕೆ ನೀಡಿ ಆಶೀರ್ವಾದ ಪಡೆದಿದ್ದಾರೆ.
ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸ್ಆ್ಯಪ್ ಗ್ರೂಪ್ಗೆ ಜಾಯಿನ್ ಆಗಿ: ಬಿಬಿಎಂಪಿ ನ್ಯೂಸ್9
ಗಾಸಿಪ್‌ಗಳಿಗೆ ಬಿದ್ದ ತೆರೆ!
ಚಿಕ್ಕಣ್ಣ ಅವರ ಮದುವೆ ವಿಷಯದ ಕುರಿತು ಕಳೆದ ಕೆಲವು ವರ್ಷಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವದಂತಿಗಳು ಹರಿದಾಡುತ್ತಿದ್ದವು. ಜನಪ್ರಿಯ ಆ್ಯಂಕರ್ ಅನುಶ್ರೀ ಸೇರಿದಂತೆ ಹಲವರ ಹೆಸರುಗಳ ಜೊತೆ ಚಿಕ್ಕಣ್ಣ ಅವರ ಹೆಸರು ತಳುಕು ಹಾಕಿಕೊಂಡಿತ್ತು. ಆದರೆ, ಆ ಎಲ್ಲಾ ಗಾಸಿಪ್‌ಗಳಿಗೆ ಈಗ ತೆರೆ ಬಿದ್ದಿದ್ದು, ಕೊನೆಗೂ ಮಂಡ್ಯದ ಹುಡುಗಿ ಪಾವನಾ ಕೈಹಿಡಿಯಲು ಚಿಕ್ಕಣ್ಣ ಸಜ್ಜಾಗಿದ್ದಾರೆ.
ಸಿನಿಮಾ ರಂಗದ ಸ್ನೇಹಿತರು, ಗಣ್ಯರು ಹಾಗೂ ಅಪಾರ ಅಭಿಮಾನಿಗಳು ಈ ನೆಚ್ಚಿನ ನಟನ ಹೊಸ ಜೀವನದ ಪಯಣಕ್ಕೆ ಮುಂಗಡ ಶುಭ ಹಾರೈಸುತ್ತಿದ್ದಾರೆ.


