BBMP
Loading ...

DK Shivakumar

Greater Bengaluru News9 : ರಾಜ್ಯ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ಸಂಭವನೀಯ ಸಚಿವರ ಪಟ್ಟಿಗೆ ಇಂದು (ಬುಧವಾರ) ಅಂತಿಮ ಮುದ್ರೆ ಬೀಳುವ ಸಾಧ್ಯತೆ ಇದೆ.

ಮಂಗಳವಾರ ರಾತ್ರಿ ನವದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ನಿವಾಸದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಸಂಭವನೀಯ ಸಚಿವರ ಹೆಸರುಗಳ ಕುರಿತು ಚರ್ಚೆ ನಡೆದಿದ್ದು, ಕೆಲವು ಸ್ಥಾನಗಳ ಕುರಿತು ಇನ್ನೂ ಗೊಂದಲ ಮುಂದುವರಿದಿದೆ.

ಮಂಗಳವಾರದ ಸಭೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗೈರಾಗಿದ್ದ ಹಿನ್ನೆಲೆಯಲ್ಲಿ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲಾಗಲಿಲ್ಲ. ಈ ಕಾರಣದಿಂದ ಇಂದು ಸಂಜೆ 4.30ರಿಂದ 5.30ರ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಮತ್ತೊಂದು ಮಹತ್ವದ ಸಭೆ ನಡೆಯಲಿದೆ.

ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ಪ್ರಮುಖ ನಾಯಕರು ಭಾಗವಹಿಸಲಿದ್ದು, ಬಾಕಿ ಉಳಿದಿರುವ ನಾಲ್ಕೈದು ಸಚಿವ ಸ್ಥಾನಗಳ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಸಭೆ ಮುಗಿದ ಬಳಿಕ ರಾಜ್ಯ ನಾಯಕರು ಸಂಜೆ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ವಾಪಸಾಗಲಿದ್ದು, ಸಚಿವ ಸಂಪುಟ ವಿಸ್ತರಣೆ ಕುರಿತ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆ ಇದೆ.

ಗುರುವಾರ ಪ್ರಮಾಣವಚನ ಸಾಧ್ಯತೆ
ಇಂದಿನ ಸಭೆಯಲ್ಲಿ ಎಲ್ಲ ಗೊಂದಲಗಳಿಗೆ ತೆರೆಬಿದ್ದರೆ, ಗುರುವಾರ ಬೆಳಗ್ಗೆ ಸಚಿವರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆ ಇದೆ. ಬಳಿಕ ಗುರುವಾರ ಸಂಜೆ ಲೋಕಭವನದಲ್ಲಿ ಎರಡನೇ ಹಂತದ ಸಚಿವರ ಪ್ರಮಾಣವಚನ ಸಮಾರಂಭ ನಡೆಯುವ ಸಾಧ್ಯತೆಗಳಿವೆ.

ಮಂಗಳವಾರ ನಡೆದ ಸಭೆಯಲ್ಲಿ ಯಾರು ಭಾಗವಹಿಸಿದ್ದರು?
ಕೆ.ಸಿ. ವೇಣುಗೋಪಾಲ್ ನಿವಾಸದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಕೆಪಿಸಿಸಿ ಅಧ್ಯಕ್ಷರೊಂದಿಗೆ ರಾಜ್ಯದ ಪ್ರಮುಖ ನಾಯಕರು ಭಾಗವಹಿಸಿ ಸುಮಾರು ಒಂದು ಗಂಟೆ ಕಾಲ ಚರ್ಚೆ ನಡೆಸಿದರು. ಈ ವೇಳೆ ಸಂಭವನೀಯ ಸಚಿವರ ಹೆಸರುಗಳು ಹಾಗೂ ಪ್ರಾದೇಶಿಕ ಮತ್ತು ಜಾತಿ ಸಮತೋಲನ ಕುರಿತು ಸಮಾಲೋಚನೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಚಿವ ಸ್ಥಾನದ ರೇಸ್‌ನಲ್ಲಿ ಇರುವವರ ಪಟ್ಟಿ
ಸಚಿವ ಸ್ಥಾನಕ್ಕೆ ಈ ಕೆಳಗಿನವರ ಹೆಸರುಗಳು ಚರ್ಚೆಯಲ್ಲಿವೆ:

  • ಲಕ್ಷ್ಮಣ ಸವದಿ
  • ಪುಟ್ಟರಂಗಶೆಟ್ಟಿ
  • ಸಲೀಂ ಅಹ್ಮದ್
  • ಎಂ. ಕೃಷ್ಣಪ್ಪ
  • ಚೆಲುವರಾಯಸ್ವಾಮಿ
  • ಎಸ್.ಎಸ್. ಮಲ್ಲಿಕಾರ್ಜುನ
  • ರಘುಮೂರ್ತಿ
  • ರುದ್ರಪ್ಪ ಲಮಾಣಿ
  • ಮಧು ಬಂಗಾರಪ್ಪ
  • ಅಜಯ್ ಸಿಂಗ್
  • ಅಪಾಜಿ ನಾಡಗೌಡ / ಯಶವಂತರಾಯಗೌಡ ಪಾಟೀಲ
  • ಬಸವರಾಜ ರಾಯರೆಡ್ಡಿ / ಶಿವರಾಜ ತಂಗಡಗಿ
  • ಶ್ರೀನಿವಾಸ ಮಾನೆ / ಸಂತೋಷ ಲಾಡ್
  • ಜಮೀರ್ ಅಹ್ಮದ್ / ತನ್ವೀರ್ ಸೇಠ್ / ರಿಜ್ವಾನ್ ಅರ್ಷದ್
    ಆದರೆ, ಅಂತಿಮ ಪಟ್ಟಿಗೆ ಯಾರಿಗೆ ಅವಕಾಶ ಸಿಗಲಿದೆ ಎಂಬುದು ರಾಹುಲ್ ಗಾಂಧಿ ನೇತೃತ್ವದ ಸಭೆಯ ಬಳಿಕವೇ ಸ್ಪಷ್ಟವಾಗಲಿದೆ.

Leave a Reply

Your email address will not be published. Required fields are marked *