BBMP
Loading ...

Lokayukta

Greater Bengaluru News9 : ಕಲ್ಬುರ್ಗಿ ಜಿಲ್ಲಾ ನ್ಯಾಯಾಲಯದಲ್ಲಿ ಎಪಿಪಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 5ನೇ JMFC ಕೋರ್ಟ್ ಎಪಿಪಿ ಸಂತೋಷ್ ಕುಮಾರ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದು 10,000 ಲಂಚ ಸ್ವೀಕರಿಸುತ್ತಿದ್ದಾಗ ಎಪಿಪಿ ಸಂತೋಷ್ ಕುಮಾರ್ ಬಲೆಗೆ ಬಿದ್ದಿದ್ದಾರೆ. ಸಂತೋಷ್ ಕುಮಾರ್ ಲೋಖಂಡೆಯನ್ನ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳು ಬಲೆಗೆ ಕೆಡವಿದ್ದಾರೆ.

ಪ್ರಕರಣ ಒಂದರಲ್ಲಿ ನ್ಯಾಯಾಲಯಕ್ಕೆ ರಾಜಿ ಅರ್ಜಿ ಸಲ್ಲಿಸಲು ಹೈದರಾಬಾದ್ ಮೂಲಕ ದೂರುದಾರ ರಾಹುಲ್ ಅವರಿಂದ ಲಂಚ ಸ್ವೀಕರಿಸುತ್ತಿದ್ದರು. 10 ಸಾವಿರ ನಗದು, 9 ಸೀರೆ 4 ಶರ್ಟ್ 4 ಲಂಡನ್ ಜೀನ್ಸ್ ಪ್ಯಾಂಟ್ ಒಂದು ಜೊತೆ ಮಹಿಳೆಯರ ಶೂ ನಾಲ್ಕು ಕೊಟ್ರೆ ಹಾಗೂ 6 ಜೊತೆ ಮಹಿಳೆಯರ ಚಪ್ಪಲಿಗೆ ಬೇಡಿಕೆ ಇಟ್ಟಿದ್ದರು.

ಕೋರ್ಟ್ ಆವರಣದಲ್ಲಿ 10,000 ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲಕ್ಕೆ ಬಿದ್ದಿದ್ದಾರೆ ಎಪಿಪಿ ಸಂತೋಷ್ ಕುಮಾರ್ ನನ್ನು ಲೋಕಾಯುಕ್ತ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಲೋಕಾಯುಕ್ತ ಇನ್ಸ್ಪೆಕ್ಟರ್ ಅರುಣ ನೇತ್ರತ್ವದಲ್ಲಿ ಒಂದು ಕಾರ್ಯಾಚರಣೆ ನಡೆದಿದೆ.

Leave a Reply

Your email address will not be published. Required fields are marked *