BBMP
Loading ...

GBA

Greater Bengaluru News9 : ಗ್ರೇಟರ್ ಬೆಂಗಳೂರು ಪ್ರಾಧಿಕಾರ(GBA)ದ ಐದು ನಗರ ಪಾಲಿಕೆಗಳ ಸಾರ್ವತ್ರಿಕ ಚುನಾವಣೆ -2026, ಬೆಂಗಳೂರು ಪೂರ್ವ ನಗರ ಪಾಲಿಕೆಯ ವಾರ್ಡ್ ಸಂಖ್ಯೆ 28ರಿಂದ 50ರವರೆಗೆ (ಒಟ್ಟು 23 ವಾರ್ಡ್ ಗಳು) ಹಾಗೂ ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವಾರ್ಡ್ ಸಂಖ್ಯೆ 31 (ಒಂದು ವಾರ್ಡ್) ಗಳ ಹಾಗೂ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವಾರ್ಡ್ ಸಂಖ್ಯೆ 57, 58 ಮತ್ತು 59 ರ(3 ವಾರ್ಡ್ ಗಳು) ಮತದಾರರ ಪಟ್ಟಿಗಳಿಗೆ ಸಂಬಂಧಿಸಿದಂತೆ ಪ್ರಮುಖ ರಾಜಕೀಯ ಪಕ್ಷ ಹಾಗೂ ಸಾರ್ವಜನಿಕರಿಂದ ಆಕ್ಷೇಪಗಳು ಸ್ವೀಕೃತವಾಗಿವೆ. ಈ ಹಿನ್ನೆಲೆಯಲ್ಲಿ ಆಕ್ಷೇಪ ವ್ಯಕ್ತವಾಗಿರುವ 27 ವಾರ್ಡ್ ಗಳ ಮತದಾರರ ಪಟ್ಟಿಯನ್ನು ಪರಿಷ್ಕರಿಸಲು ಆಯೋಗವು ತೀರ್ಮಾನಿಸಿದೆ.

ಅಲ್ಲದೇ ಈ 27 ವಾರ್ಡ್ ಗಳಿಗೆ ಸಂಬಂಧಿಸಿ ಎಪ್ರಿಲ್ 18ರಂದು ಪ್ರಕಟಿಸಿರುವ ಅಂತಿಮ ಮತದಾರರ ಪಟ್ಟಿಯನ್ನು ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

ಭಾರತ ಸಂವಿಧಾನದ ಆರ್ಟಿಕಲ್ 243-ZA ಹಾಗೂ ಗ್ರೇಟರ್ ಬೆಂಗಳೂರು (ಆಡಳಿತ) ಅಧಿನಿಯಮ, 2025 ಪ್ರಕರಣ 35 ಮತ್ತು ಗ್ರೇಟರ್ ಬೆಂಗಳೂರು ಆಡಳಿತ(ಮತದಾರರ ನೋಂದಣಿ) ನಿಯಮಗಳು 2025ರ ನಿಯಮ 23(2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸದರಿ ವಾರ್ಡ್ ಗಳ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯವನ್ನು ಜೂನ್ 26ರಿಂದ ಕೈಗೊಳ್ಳಲು ಆದೇಶಿಸಿದೆ.

ಜೂ.26ರಿಂದ ಬಿಎಲ್ ಒಗಳಿಂದ ಮನೆ ಮನೆ ಸಮೀಕ್ಷೆ, ಜುಲೈ 9ಕ್ಕೆ ಮತದಾರರ ಕರಡು ಪಟ್ಟಿ ಪ್ರಕಟ, ಜು.10ರಿಂದ 26ರ ವರೆಗೆ ಆಕ್ಷೇಪ ಸಲ್ಲಿಸಲು ಅವಕಾಶ ಇರಲಿದೆ. ಜುಲೈ 31ರಂದು ಮತದಾರರ ಅಂತಿಮ ಪಟ್ಟಿ ಪ್ರಕಟಿಸಲಾಗುವುದು ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *