BBMP
Loading ...

Greater Bengaluru News9: ಬೆಂಗಳೂರಿನಲ್ಲಿ ಕನ್ನಡಿಗರ ಧ್ವನಿಯಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರ ಆಶ್ರಯಕ್ಕಾಗಿ ಸ್ಥಾಪನೆಗೊಂಡ ‘ವಿದ್ಯಾಪೀಠ ಗೃಹನಿರ್ಮಾಣ ಸಹಕಾರ ಸಂಘ’ ಇಂದು ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಅಧಿಕೃತವಾಗಿ ಉದ್ಘಾಟನೆಗೊಂಡಿತು.

ಸಮಾಜ ಸೇವಕ ಗವಿಪುರಂ ಪ್ರಕಾಶ್ ಅವರ ನೇತೃತ್ವದಲ್ಲಿ ಆರಂಭವಾಗಿರುವ ಈ ಸಂಘವು, ಬಡವರಿಗೆ ಹಾಗೂ ಸಮಾಜದ ಹಿತದೃಷ್ಟಿಯಿಂದ ಶ್ರಮಿಸುವ ಪತ್ರಕರ್ತರಿಗೆ ಸ್ವಂತ ಸೂರಿನ ವ್ಯವಸ್ಥೆ ಕಲ್ಪಿಸುವ ದೂರದೃಷ್ಟಿಯನ್ನು ಹೊಂದಿದೆ.

ಸಂಸ್ಥೆಯ ಅಧ್ಯಕ್ಷರಾಗಿ ಗವಿಪುರಂ ಪ್ರಕಾಶ್, ಉಪಾಧ್ಯಕ್ಷರಾಗಿ ಹನುಮಂತನಗರದ ನಾಗರಾಜ್ ಹಾಗೂ ನಿರ್ದೇಶಕರಾಗಿ ಆನಂದ್, ಕೃಷ್ಣಮೂರ್ತಿ ಸೇರಿದಂತೆ ಹತ್ತು ಮಂದಿ ನೇಮಕಗೊಂಡಿದ್ದಾರೆ.

ರಾಜಕೀಯವಾಗಿ ಎಲ್ಲಾ ಪಕ್ಷಗಳ ಮುಖಂಡರೊಂದಿಗೆ ಉತ್ತಮ ಒಡನಾಟ ಹೊಂದಿರುವ ಪ್ರಕಾಶ್ ಅವರು, ಅರ್ಹರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ವಸತಿ ಸೌಲಭ್ಯ ಸಿಗಲಿ ಎಂಬುದು ಈ ಸಂಘದ ಮೂಲ ಉದ್ದೇಶವಾಗಿದೆ.

Leave a Reply

Your email address will not be published. Required fields are marked *