BBMP
Loading ...

ಗಾಂಧಿನಗರ: ಸಮಾಜದ ಏಳಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಖ್ಯಾತ ಸಮಾಜ ಸೇವಕ ಶ್ರೀ ಕೆ. ಜಿ. ಕೃಷ್ಣ ಅವರ ಜನಪರ ಸೇವೆಯನ್ನು ಗುರುತಿಸಿ, ಪ್ರತಿಷ್ಠಿತ ಗಾಂಧಿನಗರ ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ.

​ಹೆಸರಾಂತ ಕೊಡುಗೈ ದಾನಿ, ಬಡವರ ಬಂಧು ಎಂದೇ ಹೆಸರಾಗಿರುವ ಶ್ರೀಯುತ ಡಾ. ಕೆ.ಜಿ. ಕೃಷ್ಣ ಅವರು ನಿನ್ನೆಯಷ್ಟೇ ಜನ್ಮದಿನ ಆಚರಿಸಿಕೊಂಡಿದ್ದಾರೆ. ಸಣ್ಣ ಸಹಾಯ ಮಾಡಿದರೂ ದೊಡ್ಡದಾಗಿ ಪ್ರಚಾರ ಮಾಡುವ ಈ ಕಾಲದಲ್ಲಿ, ಪ್ರಚಾರದ ಬಯಕೆಯೇ ಇಲ್ಲದೇ ನೊಂದವರ ಬಾಳಿಗೆ ಬೆಳಕಾಗುತ್ತಿರುತ್ತಿರುವ ಕೃಷ್ಣ ಅವರು ಓರ್ವ ಸಾರ್ಥಕ ಮನುಷ್ಯ ಎಂದರೆ ತಪ್ಪಾಗಲಾರದರು. ತಮಗೆ ಸಿಕ್ಕ ಗೌರವ ಡಾಕ್ಟರೇಟ್​ ಅನ್ನು ಕೂಡ ಪ್ರಚಾರಕ್ಕೆ ಬಳಸಿಕೊಳ್ಳದ ಸರಳ ಜೀವಿ ಎಂದು ಹೇಳಿದರೆ ಅತಿಶಯೋಕ್ತಿ ಏನೆಲ್ಲ.

ಇತ್ತೀಚೆಗೆ ನಡೆದ ವಿಶ್ವವಿದ್ಯಾಲಯದ ‘ಘಟಿಕೋತ್ಸವ 2025’ ಕಾರ್ಯಕ್ರಮದಲ್ಲಿ, ವಿಶ್ವವಿದ್ಯಾಲಯದ ಕುಲಪತಿಗಳು, ಮ್ಯಾನೇಜ್‌ಮೆಂಟ್ ಬೋರ್ಡ್ ಮತ್ತು ಅಕಾಡೆಮಿಕ್ ಕೌನ್ಸಿಲ್ ಸದಸ್ಯರ ಸಮ್ಮುಖದಲ್ಲಿ ಉನ್ನತ ಗೌರವವನ್ನು ಅಧಿಕೃತವಾಗಿ ಕೃಷ್ಣ ಅವರಿಗೆ ಹಸ್ತಾಂತರಿಸಲಾಯಿತು.

ಮುಖ್ಯಾಂಶಗಳು:
ಪದವಿ: ಡಾಕ್ಟರ್ ಆಫ್ ಸೋಶಿಯಲ್ ಸರ್ವಿಸ್ (Doctor of Social Service – Honoris Causa).

ಗೌರವಿಸಿದ ಸಂಸ್ಥೆ: ಗಾಂಧಿನಗರ ವಿಶ್ವವಿದ್ಯಾಲಯ.

ವಿಶೇಷತೆ: ಚಿನ್ನದ ಲೇಪಿತ ಬೆಳ್ಳಿಯ ಸ್ಮರಣಿಕೆಯ ಫಲಕದೊಂದಿಗೆ ಈ ಪದವಿಯನ್ನು ನೀಡಿ ಗೌರವಿಸಲಾಗಿದೆ.

ಸೇವೆಯೇ ಪರಮ ಧರ್ಮ:
ಕಳೆದ ಹಲವು ವರ್ಷಗಳಿಂದ ಕೆ. ಜಿ. ಕೃಷ್ಣ ಅವರು ವಿವಿಧ ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು, ಬಡವರ ಮತ್ತು ಅಸಹಾಯಕರ ಪರವಾಗಿ ಧ್ವನಿಯಾಗಿದ್ದಾರೆ. ಅವರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ವಿಶ್ವವಿದ್ಯಾಲಯವು ಈ ‘ಹಾನರಿಸ್ ಕೌಸಾ’ ಗೌರವವನ್ನು ನೀಡಿದೆ. ಈ ಸಂದರ್ಭದಲ್ಲಿ ಕೆ. ಜಿ. ಕೃಷ್ಣ ಅವರಿಗೆ ಅವರ ಅಭಿಮಾನಿಗಳು, ಹಿತೈಷಿಗಳು ಹಾಗೂ ಸಮಾಜದ ಗಣ್ಯರು ಅಭಿನಂದನೆಗಳ ಮಹಾಪೂರವನ್ನೇ ಹರಿಸಿದರು.

ಅಂದಹಾಗೆ, ಗಾಂಧಿನಗರ ವಿಶ್ವವಿದ್ಯಾಲಯವು ತನ್ನ ಮೊದಲನೇ ಘಟಿಕೋತ್ಸವ ಸಮಾರಂಭವನ್ನು 2025ರ ನವೆಂಬರ್ 15ರಂದು ಅತ್ಯಂತ ಸಂಭ್ರಮದಿಂದ ಆಯೋಜಿಸಿದೆ. “ಭವಿಷ್ಯಕ್ಕಾಗಿ ನಾವೆಲ್ಲರೂ ಒಂದು ಶಕ್ತಿ” ಎಂಬ ಅರ್ಥಪೂರ್ಣ ಧ್ಯೇಯವಾಕ್ಯದೊಂದಿಗೆ ನಡೆದ ಈ ಕಾರ್ಯಕ್ರಮವು ವಿಶ್ವವಿದ್ಯಾಲಯದ ಆವರಣದಲ್ಲಿ ಜರುಗಿತು. ಈ ಸಮಾರಂಭಕ್ಕೆ ಭಾರತ ಸರ್ಕಾರದ ಕೇಂದ್ರ ಸಚಿವರಾದ ಶ್ರೀ ಹೆಚ್. ಡಿ. ಕುಮಾರಸ್ವಾಮಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದರು. ಗುಜರಾತ್ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಸಂಜಯ್ ಗೌಡ ಅವರು ಗೌರವಾನ್ವಿತ ಅತಿಥಿಗಳಾಗಿ ಹಾಗೂ ಸ್ಯಾಮ್ಸಂಗ್ ಎಲೆಕ್ಟ್ರೋ-ಮೆಕ್ಯಾನಿಕ್ಸ್‌ನ ದಿನೇಶ್ ರಾಮೇಗೌಡ ಮತ್ತು ಡಸಾಲ್ಟ್ ಸಿಸ್ಟಮ್ಸ್ ಇಂಡಿಯಾದ ದೀಪಕ್ ಎನ್. ಜಿ. ಅವರು ವಿಶೇಷ ಅತಿಥಿಗಳಾಗಿ ಭಾಗವಹಿಸಿದರು.

Leave a Reply

Your email address will not be published. Required fields are marked *