Greater Bengaluru News9 : ಕಲ್ಪವೃಕ್ಷ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಬಿಡುಗಡೆಗೆ ಸಿದ್ಧವಾಗಿರುವ, ಬಹುನಿರೀಕ್ಷಿತ ‘ಬ್ಯೂಟಿ’ ಸಿನಿಮಾದ ಎರಡನೇ ವಿಡಿಯೋ ಸಾಂಗ್ “ಪ್ರಿಯ ಗಂಗೆ ಪ್ರಿಯ ರಂಜನಿ” ಇಂದು ಅದ್ಧೂರಿಯಾಗಿ ಧ್ವನಿಸುರುಳಿ ರೂಪದಲ್ಲಿ ಬಿಡುಗಡೆಯಾಗಿದೆ.
ಪಿ. ಮುರಳಿ ಕೃಷ್ಣ ಅವರ ಅರ್ಪಣೆಯಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ತನುಜಾ ಮುರಳಿ ಕೃಷ್ಣ ಅವರು ಬಂಡವಾಳ ಹೂಡಿದ್ದಾರೆ. ಸ್ಯಾಂಡಲ್ವುಡ್ನ ಖ್ಯಾತ ಸಂಗೀತ ನಿರ್ದೇಶಕ ಮತ್ತು ಸಾಹಿತಿ ವಿ. ಮನೋಹರ್ ಅವರ ಸಾಹಿತ್ಯ ಮತ್ತು ಮಧುರ ಸಂಗೀತ ಈ ಹಾಡಿಗಿದ್ದು, ಕೇಳುಗರ ಮನ ಗೆಲ್ಲುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ.

ತಾಂತ್ರಿಕ ವರ್ಗದ ಬಲ:
ಈ ಚಿತ್ರವನ್ನು ರಾಜಾ ರವಿಕುಮಾರ್ ಅವರು ನಿರ್ದೇಶಿಸಿದ್ದು, ಪ್ರತಿಯೊಂದು ದೃಶ್ಯವನ್ನು ಅಚ್ಚುಕಟ್ಟಾಗಿ ತೆರೆಯ ಮೇಲೆ ತಂದಿದ್ದಾರೆ. ವಿದ್ಯುತ್ ಗುತ್ತಿಗೆದಾರರಾದ ರಾಗ್ವೀರ್ ಸುರಾಗ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಜವಾಬ್ದಾರಿ ನಿಭಾಯಿಸಿದ್ದು, ಚಿತ್ರದ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ.
- ಛಾಯಾಗ್ರಹಣ: ವೀರೇಶ್
- ನೃತ್ಯ ನಿರ್ದೇಶನ: ಮಹೇಶ್ ರಾಜ್
- ಸಹ ನಿರ್ದೇಶನ: ಸಿದ್ದಾರ್ಥ್ ಕಾರತಾಗಿ
- ತಾರಾಗಣ: ರವಿಕಾಂತ್ ಮತ್ತು ಮಹಾಲಕ್ಷ್ಮಿ (ಮುಖ್ಯ ಭೂಮಿಕೆಯಲ್ಲಿ)

ಹಾಡಿನ ವಿಶೇಷತೆ:
”ಪ್ರಿಯ ಗಂಗೆ ಪ್ರಿಯ ರಂಜನಿ” ಹಾಡು ವಿಶಿಷ್ಟವಾದ ರಾಗ ಸಂಯೋಜನೆಯಿಂದ ಕೂಡಿದ್ದು, ನಾಯಕ ರವಿಕಾಂತ್ ಮತ್ತು ನಾಯಕಿ ಮಹಾಲಕ್ಷ್ಮಿ ಅವರ ನಡುವಿನ ಕೆಮಿಸ್ಟ್ರಿ ಹಾಗೂ ಮಹೇಶ್ ರಾಜ್ ಅವರ ನೃತ್ಯ ನಿರ್ದೇಶನ ಹಾಡಿನ ಅಂದವನ್ನು ಹೆಚ್ಚಿಸಿದೆ. ವೀರೇಶ್ ಅವರ ಕ್ಯಾಮೆರಾ ಕೈಚಳಕದಲ್ಲಿ ಹಾಡು ಅತ್ಯಂತ ವರ್ಣರಂಜಿತವಾಗಿ ಮೂಡಿಬಂದಿದೆ.
ಸಿನಿಮಾ ತಂಡವು ಸದ್ಯದಲ್ಲೇ ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸಲಿದ್ದು, ಈ ಎರಡನೇ ಹಾಡು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಕಲ್ಪವೃಕ್ಷ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಪಿ ಮುರಳಿ ಕೃಷ್ಣ ಅರ್ಪಿಸುತ್ತಿರುವ ತನುಜ ಮುರಳಿ ಕೃಷ್ಣ ರವರ ನಿರ್ಮಾಣ ದ ” ಬ್ಯೂಟಿ ” ಸಿನಿಮಾ ಗೆ ನಿರ್ದೇಶನ ಮಾಡುತ್ತಿರುವುದು 31 days ಸಿನಿಮಾ ನಿರ್ದೇಶಿಸಿದ ರಾಜ ರವಿಕುಮಾರ್ ಈ ಸಿನಿಮಾ ಗೆ ವಿ. ಮನೋಹರ್ ಸಂಗೀತ ನೀಡುತ್ತಿದ್ದು 5 ಹಾಡುಗಳನ್ನು ಅದ್ಬುತವಾಗಿ ಮಾಡಿದ್ದೂ ಹಾಡುಗಳು ಟ್ರೆಂಡಿಂಗ್ ಗೆ ಬರಲಿವೆ ಎಂದು ಚಿತ್ರತಂಡ ಹೇಳುತ್ತಿದ್ದಾರೆ ಇನ್ನು ಈ ಸಿನಿಮಾ ದ ಎಲ್ಲ ಹಾಡುಗಳನ್ನು ಕನ್ನಡದ ಗಾಯಕರೇ ಹಾಡಿರುವುದು ವಿಶೇಷ “ಬ್ಯೂಟಿ ” ಸಿನಿಮಾ ದ ಚಿತ್ರೀಕರಣ ವನ್ನು ಕೊಲ್ಲೂರು, ಮೂಡಗಲ್, ಕುಮುಟಾ, ಬೆಂಗಳೂರು, ಮೇಲುಕೋಟೆ ಯಲ್ಲಿ ಚಿತ್ರೀಕರಣ ಮಾಡಲಾಗಿದೆ.
ಈ ಸಿನಿಮಾ ಗೆ ನಾಯಕ ರವಿಕಾಂತ್, ನಾಯಕಿಯಾಗಿ ಮಹಾಲಕ್ಷ್ಮಿ ನಟಿಸುತ್ತಿದ್ದು . ವೇಣಿ. ವಿ. ಮನೋಹರ್, ಚಿಲ್ಲರ್ ಮಂಜ, ಆನೇಕಲ್ ಮುನಿಯಪ್ಪ, ಅನ್ನಪೂರ್ಣ, ಅಂಜನಾ, ಮಂಜಯ್ಯ, ಚಕ್ರವರ್ತಿ ದಾವಣಗೆರೆ, ಮನ ಮೋಹನ್, ಶಿವಮೊಗ್ಗ ರಾಮಣ್ಣ, ವೈಭವ್ ನಾಗರಾಜ್, ಪ್ರಸಿದ್ಧ ಕನ್ನಡಿಗ, ಮಣಿ, ಪಾಂಡು, ಬೇಬಿ ಆಯುಷ್ಕಾ ಶೆಟ್ಟಿ, ಮಾಸ್ಟರ್ ಆರ್ಯ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ
ಈ ಸಿನಿಮಾ ಗೆ
ಛಾಯಾಗ್ರಾಹಣ ವಿರೇಶ್ ಕುಮಾರ್,
ಸಂಕಲನ ಮಧು ತುಂಬಕೆರೆ,
ಮಹೇಶ್ ರಾಜ್ ನೃತ್ಯ ನಿರ್ದೇಶನ,
ಸಾಹಸ ಬಂಡೆ ಚಂದ್ರು,
ನಿರ್ಮಾಣ ನಿರ್ವಹಣೆ ಹೇಮಂತ್ ಕುಮಾರ್,
ಕಾರ್ಯಕಾರಿ ನಿರ್ಮಾಪಕ ರಾಗ್ವಿರ್ ಸುರಾಗ,
ನಿರ್ದೇಶನ ತಂಡ ಸಿದ್ದಾರ್ಥ್ ಕಾರತಗಿ, ಸುಧರ್ಶನ್, ಚೈತನ್ಯ,
ಸ್ಥಿರ ಚಿತ್ರಣ ಜಗನ್ನಾಥ್,
ವರ್ಣಲಂಕಾರ ನಾಗೇಶ್,
ವಸ್ತ್ರಲಂಕಾರ ಕುಮಾರ್,
ಕೇಶಲಂಕಾರ ತಾರಾದೇವಿ,
ವಿನ್ಯಾಸ ಗಾಡ್,
ಸೆನ್ಸಾರ್ ಪೃಥ್ವಿರಾಜ್
ಪ್ರಚಾರ ಶ್ರೀಧರ್ ಮಾಡುತ್ತಿದ್ದಾರೆ
ಈ ಸಿನಿಮಾದ ವಿಡಿಯೋ ಬಿಡುಗಡೆಯನ್ನು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಬಾಬು ನೇತೃತ್ವದಲ್ಲಿ ಬಿಡುಗಡೆ ಮಾಡಲಾಯಿತು. ಹೋರಾಟ ಸಮಿತಿ ಚೆರ್ಮನ್ ವೈ ಎಚ್ ಆನಂದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


