ಬೆಂಗಳೂರಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಹಾಗೂ ಸರಳ ಸಜ್ಜನಿಕೆಯ ರಾಜಕಾರಣಿ ಎಂದೇ ಗುರುತಿಸಿಕೊಂಡಿರುವ ಪ್ರಿಯಕೃಷ್ಣ ಅವರು ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಯುವ ನಾಯಕತ್ವ ಮತ್ತು ಅಭಿವೃದ್ಧಿ ಪರ ಚಿಂತನೆಗೆ ಹೆಸರಾಗಿರುವ ಅವರಿಗೆ ಶ್ರೀ ಗುರುಗುಂಡ ಬ್ರಹ್ಮೇಶ್ವರ ಮಠದ (ಸ್ಪಟಿಕಪುರಿ ಮಹಾಸಂಸ್ಥಾನ) ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ನಂಜಾವಧೂತ ಮಹಾಸ್ವಾಮೀಜಿ, ಕ್ಷೇತ್ರದ ಜನತೆ ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಅಲ್ಲದೆ, ಬಿಬಿಎಂಪಿ ನ್ಯೂಸ್9 ಸಂಪದಾಕರು ಹಾಗೂ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಹೋರಾಟ ಸಮಿತಿಯ ಚೇರ್ಮನ್ ವೈ.ಎಚ್. ಆನಂದ್ ಶುಭಕೋರಿದ್ದಾರೆ.
ಯುವ ನಾಯಕತ್ವದ ಭರವಸೆ
ಪ್ರಿಯಕೃಷ್ಣ ಅವರು ರಾಜಕೀಯವನ್ನು ಕೇವಲ ಅಧಿಕಾರವಾಗಿ ನೋಡದೆ, ಅದನ್ನೊಂದು ಜನಸೇವೆಯ ಮಾಧ್ಯಮವನ್ನಾಗಿ ಮಾಡಿಕೊಂಡವರು. ಹಿರಿಯ ನಾಯಕ ಎಂ. ಕೃಷ್ಣಪ್ಪ ಅವರ ಮಾರ್ಗದರ್ಶನದಲ್ಲಿ ಬೆಳೆದು ಬಂದ ಇವರು, ಅತ್ಯಂತ ಕಿರಿಯ ವಯಸ್ಸಿನಲ್ಲೇ ಶಾಸಕರಾಗಿ ಆಯ್ಕೆಯಾಗಿ ಸೈ ಎನಿಸಿಕೊಂಡವರು. ಕ್ಷೇತ್ರದ ಪ್ರತಿಯೊಬ್ಬ ನಾಗರಿಕನ ಕಷ್ಟ-ಸುಖಗಳಿಗೆ ಸ್ಪಂದಿಸುವ ಅವರ ಗುಣ, ಯುವ ಪೀಳಿಗೆಗೆ ಮಾದರಿಯಾಗಿದೆ.
ಅಭಿವೃದ್ಧಿಯ ಹರಿಕಾರ
ಗೋವಿಂದರಾಜನಗರದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಿಯಕೃಷ್ಣ ಅವರ ಕೊಡುಗೆ ಅಪಾರ. ರಸ್ತೆಗಳ ಸುಧಾರಣೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಉದ್ಯಾನವನಗಳ ನವೀಕರಣ ಹಾಗೂ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವಲ್ಲಿ ಅವರು ಸದಾ ಮುಂಚೂಣಿಯಲ್ಲಿದ್ದಾರೆ. ಕ್ಷೇತ್ರದ ಮೂಲಭೂತ ಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವ ಮೂಲಕ “ಮಾದರಿ ಗೋವಿಂದರಾಜನಗರ” ನಿರ್ಮಾಣದ ಕನಸನ್ನು ಅವರು ನನಸು ಮಾಡುತ್ತಿದ್ದಾರೆ.
ಸರಳತೆ ಮತ್ತು ಜನಪರ ಕಾಳಜಿ
ಅಬ್ಬರವಿಲ್ಲದ ವ್ಯಕ್ತಿತ್ವ ಹಾಗೂ ಎಲ್ಲರನ್ನೂ ಸಮಾನವಾಗಿ ಕಾಣುವ ಅವರ ಸರಳತೆ ಎಲ್ಲರ ಗಮನ ಸೆಳೆಯುತ್ತದೆ. ಬಡವರ ಕಷ್ಟಕ್ಕೆ ಮರುಗುವ ಹಾಗೂ ತಕ್ಷಣವೇ ನೆರವಿಗೆ ಧಾವಿಸುವ ಅವರ ಗುಣದಿಂದಾಗಿ ಅವರು ಜನಸಾಮಾನ್ಯರ “ನೆಚ್ಚಿನ ಅಣ್ಣ”ನಾಗಿ ಗುರುತಿಸಿಕೊಂಡಿದ್ದಾರೆ. ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರವಲ್ಲದೆ, ನಿರಂತರವಾಗಿ ಕ್ಷೇತ್ರದ ಜನರೊಂದಿಗೆ ಸಂಪರ್ಕದಲ್ಲಿರುವುದು ಇವರ ವಿಶೇಷತೆಯಾಗಿದೆ.
ಶುಭ ಹಾರೈಕೆಗಳ ಮಹಾಪೂರ
ಇಂದು ಅವರ ಜನ್ಮದಿನದ ಅಂಗವಾಗಿ ಕ್ಷೇತ್ರದಲ್ಲಿ ವಿವಿಧ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರಕ್ತದಾನ ಶಿಬಿರ, ಬಡವರಿಗೆ ಅನ್ನದಾನ ಹಾಗೂ ಶಾಲಾ ಮಕ್ಕಳಿಗೆ ಕಿಟ್ ವಿತರಣೆಯಂತಹ ಅರ್ಥಪೂರ್ಣ ಕಾರ್ಯಕ್ರಮಗಳ ಮೂಲಕ ಅಭಿಮಾನಿಗಳು ತಮ್ಮ ನಾಯಕನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಪ್ರಿಯಕೃಷ್ಣ ಅವರು ನೂರಾರು ಕಾಲ ಸುಖ-ಸಂತೋಷದಿಂದ ಬಾಳಿ, ಇನ್ನೂ ಹೆಚ್ಚಿನ ಜನಸೇವೆ ಮಾಡುವ ಶಕ್ತಿ ಅವರಿಗೆ ಸಿಗಲಿ ಎಂದು ಆಶಿಸೋಣ.



