Greater Bengaluru News9 : ವರನಟ ಡಾಕ್ಟರ್ ರಾಜ್‌ಕುಮಾರ್ ಸಮಾಧಿ ಸ್ಥಳದ ಬಗ್ಗೆ ಸರ್ಕಾರ ಮೀಸಲಿಟ್ಟಿದ್ದ 2 ಎಕರೆ ಪ್ರದೇಶದ ಬಗ್ಗೆ ಪ್ರಶ್ನೆ ಎತ್ತಿದ್ದ ನಟ ಚೇತನ್ ಅಹಿಂಸಾ ವಿರುದ್ಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಡಾಕ್ಟರ್ ರಾಜ್‌ಕುಮಾರ್ ಸೇನೆ ದೂರು ನೀಡಿದೆ.
ಡಾ. ರಾಜ್‌ಕುಮಾರ್ ಹುಟ್ಟಿದ ದಿನದಂದು ಅವರ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿನಾ? 21ನೇ ಶತಮಾನದಲ್ಲಿ ಪ್ರಮುಖ ಹೋರಾಟವೇ ಭೂಮಿಯಾಗಿದೆ. ಸರ್ಕಾರವೂ ಅದನ್ನ ಗಮನದಲ್ಲಿಟ್ಟುಕೊಂಡು ಸಾರ್ವಜನಿಕರ ಉಪಯೋಗಕ್ಕೆ ಹಂಚಬೇಕು. ಮತಗಳ ಲಾಭದ ಉದ್ದೇಶದಿಂದ ಹಂಚಬಾರದು ಎಂದು ಸೋಶಿಯಲ್ ಮೀಡಿಯಾದಲ್ಲಿ ನಟ ಚೇತನ್ ಅಹಿಂಸಾ ಪೋಸ್ಟ್ ಮಾಡಿದ್ದರು
ನಟ ಚೇತನ್ ನಡೆಯ ವಿರುದ್ಧ ಕೇರಳದ ರಾಜ್‌ಕುಮಾರ್ ಅಭಿಮಾನಿಗಳು ರಾಜಕುಮಾರ್ ಸೇನೆಯಿಂದ ಬಸವೇಶ್ವರನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಟ ಚೇತನ್ ಅಹಿಂಸಾ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ದೂರು ನೀಡಿದ್ದಾರೆ. ರಾಜ್‌ಕುಮಾರ್ ಅಭಿಮಾನಿಗಳಿಗೆ ಅವಮಾನ ಮಾಡಿದ್ದಾರೆ. ನಮಗೆ ನೋವಾಗಿದ್ದು, ನಟನಿಂದ ಸಾರ್ವಜನಿಕವಾಗಿ ಕ್ಷಮೆ ಕೇಳಿಸುವಂತೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಚೇತನ್, ನಾನು ಆಕ್ಷೇಪ ಎತ್ತಿದ್ದು ರಾಜ್ ಕುಮಾರ್ ಅವರಿಗೆ ಸಂಬಂಧಿಸಿದ್ದಲ್ಲ. ನಾನು ಅಮೇರಿಕಾದಲ್ಲಿ ಇದ್ದಾಗಲೂ ಅವರ ಸಿನೆಮಾ ನೋಡಿದ್ದೇನೆ. ಚಿತ್ರರಂಗಕ್ಕೆ ಅವರು ಕೊಟ್ಟ ಕೊಡುಗೆ, ಚಿತ್ರಗಳನ್ನ ನಾನು ನೋಡಿದ್ದೇನೆ, ಆದರೆ ಅವರು ಕಾಲಾನಂತರ ಅವರ ಹೆಸರಲ್ಲಿ ಸರ್ಕಾರ ಲ್ಯಾಂಡ್ ಕೊಟ್ಟ ಬಗ್ಗೆ. ಮತಗಳು ಪಡೆಯುವ ಬಗ್ಗೆ ಸರ್ಕಾರ ಲ್ಯಾಂಡ್ ಕೊಟ್ಟಿದೆ. ಅದರ ಬಗ್ಗೆ ನನ್ನ ಪ್ರಶ್ನೆಯಷ್ಟೆ. ಚಿತ್ರರಂಗದಲ್ಲಿ ಸಾಕಷ್ಟು ಮಂದಿ ಕೊಡುಗೆ ಕೊಟ್ಟಿದ್ದಾರೆ ಎಂದಿದ್ದಾರೆ.
ಪುಟ್ಟಣ್ಣ ಕಣಗಾಲ್, ನಂಜುಂಡಸ್ವಾಮಿ, ಸರೋಜದೇವಿ, ವಿಷ್ಣುವರ್ಧನ್, ನಿರ್ಮಾಪಕರು, ಸಾಕಷ್ಟು ಮಂದಿ ಇದ್ದಾರೆ. ಅವರಿಗೆ ಯಾರಿಗೂ ಜಾಗ ಕೊಟ್ಟಿಲ್ಲ. ಕುವೆಂಪು ಅವರದು ಕುಪ್ಪಳ್ಳಿಯಲ್ಲಿ ಮಾಡಲಾಗಿದೆ. ಇವರದು ಗಾಜನೂರಿನಲ್ಲಿ ಮಾಡಬಹುದಿತ್ತು ಎಂದಿದ್ದಾರೆ.


