BBMP
Loading ...

BMTC

Greater Bengaluru News9 : ಬೆಂಗಳೂರಲ್ಲಿ ಕಿಲ್ಲರ್ ‘BMTC’ ಗೆ ಮತ್ತೊಂದು ಬಲಿಯಾಗಿದ್ದು, ಬೈಕ್ ಸವಾರನೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಉತ್ತರ ಹೆಸರಘಟ್ಟದ ಬೆನಕ ಚೌಟ್ರಿ ಬಳಿ ನಡೆದಿದೆ. ಮೃತ ಬೈಕ್ ಸವಾರನನ್ನು ಕಾಮಾಕ್ಷಿಪಾಳ್ಯ ನಿವಾಸಿ ವೃದ್ಧ ನಾಗರಾಜ್ (60) ಎಂದು ತಿಳಿದುಬಂದಿದೆ.

BMTC ಬಸ್ ನೆಲಮಂಗಲದಿಂದ ಹೆಸರಘಟ್ಟ ಮಾರ್ಗವಾಗಿ ಯಲಹಂಕಕ್ಕೆ ತೆರಳುತ್ತಿತ್ತು. ಈ ವೇಳೆ ಎದುರಿಗೆ ಬಂದ ಬೈಕ್ ಗೆ ಡಿಕ್ಕಿ ಹೊಡೆದಿದೆ. ಬಸ್ ಡಿಕ್ಕಿ ರಾಭಸಕ್ಕೆ ಗಂಭೀರ ಗಾಯಗೊಂಡು ನಾಗರಾಜ್ ಬಿದ್ದಿದ್ದಾರೆ. ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದರೆ.

ಸ್ಥಳಕ್ಕೆ ಸೋಲದೇವನಹಳ್ಳಿ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೂ, ಬಸ್ ಸಮೇತ ಚಾಲಕ ನರಸಿಂಹಮೂರ್ತಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Leave a Reply

Your email address will not be published. Required fields are marked *