Greater Bengaluru News9 : ಕಾಂಗ್ರೆಸ್ ಶಾಸಕ N. A. Harris ಅವರಿಗೆ ಬೆಳ್ಳಂಬೆಳಗ್ಗೆ ಜಾರಿ ನಿರ್ದೇಶನಾಲಯ (ED) ಶಾಕ್ ನೀಡಿದ್ದು, ಅವರ ಮನೆ ಸೇರಿ ಒಟ್ಟು 17 ಸ್ಥಳಗಳಲ್ಲಿ ದಾಳಿ ನಡೆಸಿದೆ.
ಹ್ಯಾರಿಸ್ ಅವರು ಬಿಡಿಎ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಪುತ್ರ Mohammed Nalapad ಕೂಡ ಕಾಂಗ್ರೆಸ್‌ನ ಯುವ ಮುಖಂಡರಾಗಿದ್ದು, ಅವರ ನಿವಾಸದಲ್ಲಿಯೂ ಅಧಿಕಾರಿಗಳು ಶೋಧ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಈ ದಾಳಿ ಬಿಟ್‌ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದ್ದು, ಹ್ಯಾಕರ್ Srikrishna Ramesh (ಶ್ರೀಕಿ) ಜೊತೆಗೆ ಆರ್ಥಿಕ ಸಂಪರ್ಕ ಹೊಂದಿರುವ ಆರೋಪದ ಹಿನ್ನೆಲೆ ನಡೆದಿದೆ ಎಂದು ತಿಳಿದುಬಂದಿದೆ. ವಿಶೇಷವಾಗಿ, ನಲಪಾಡ್ ಮತ್ತು ಶ್ರೀಕಿ ನಡುವೆ ಸುಮಾರು ಆರು ವರ್ಷಗಳ ಕಾಲ ಆರ್ಥಿಕ ವ್ಯವಹಾರ ನಡೆದಿದ್ದು, ಇಬ್ಬರೂ ಸೇರಿ ಸುಮಾರು 4.5 ಕೋಟಿ ರೂಪಾಯಿ ವಹಿವಾಟು ನಡೆಸಿದ್ದಾರೆ ಎನ್ನಲಾಗುತ್ತಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ತನಿಖೆಯನ್ನು ತೀವ್ರಗೊಳಿಸಿದ್ದು, ಇನ್ನಷ್ಟು ಮಾಹಿತಿ ಹೊರಬರುವ ಸಾಧ್ಯತೆ ಇದೆ.


