BBMP
Loading ...

Vinay Kulkarni

Greater Bengaluru News9 : ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಯೋಗೀಶ್ ಗೌಡ (Yogish Gowda Case) ಕೊಲೆ ಪ್ರಕರಣ ಸಂಬಂಧ ಭಾರೀ ಚರ್ಚೆ ನಡೆದಿದೆ. ಈ ಸಂಬಂಧ ಸಿಬಿಐ ಅಧಿಕಾರಿಗಳ (CBI Officers) ತನಿಖೆ ವೇಳೆ ಹಲವು ಪ್ರಮುಖ ವಿಷಯಗಳು ಬೆಳಕಿಗೆ ಬಂದಿದ್ದು, ಕೋರ್ಟ್ ತೀರ್ಪಿನಲ್ಲಿ (Court Verdict) ಕೆಲವು ಸ್ಪೋಟಕ ವಿಚಾರಗಳು ಕೂಡ ಬಯಲಾಗಿದೆ. ತೀರ್ಪಿನಲ್ಲಿ ಕರ್ನಾಟಕ ಪೊಲೀಸ್ ತಲೆತಗ್ಗಿಸುವ ಅಂಶಗಳು ಕೂಡ ಬಗ್ಗೆ ಉಲ್ಲೇಖವಾಗಿದೆ.

ಕರ್ನಾಟಕ ರಾಜ್ಯ ಪೊಲೀಸ್ ದೇಶದಲ್ಲೇ ಅತ್ಯಂತ ಸಮರ್ಥ ಮತ್ತು ದಕ್ಷ ಇಲಾಖೆ ಎಂದು ಗುರುತಿಸಲ್ಪಟ್ಟಿದೆ. ಆದ್ರೆ ಕೆಲವು ಅಧಿಕಾರಿಗಳ ಕೃತ್ಯಗಳಿಂದ ಸಂಕಷ್ಟಕ್ಕೆ ಗುರಿಯಾಗ್ತಿರೋದು ಬೇಸರದ ಸಂಗತಿಯಾಗಿದೆ. ಯೋಗೀಶ್​ ಗೌಡ ಕೇಸ್​​ನಲ್ಲೇ ಪೊಲೀಸರು ಸುಳ್ಳು ಸಾಕ್ಷ್ಯ ನೀಡಿದ್ದಷ್ಟೇ ಅಲ್ಲದೇ ಪ್ರಕರಣದ ದಾರಿ ತಪ್ಪಿಸೋ ಕೆಲಸ ಮಾಡಿದ್ದಾರೆ ಖಾಕಿ ತೊಟ್ಟ ಅಧಿಕಾರಿಗಳು.

ನ್ಯಾಯಾಲಯದ ಮುಂದೆ ಪೊಲೀಸ್​ ಅಧಿಕಾರಿ್ಳೇ ಸುಳ್ಳು ಸಾಕ್ಷ್ಯ ನೀಡಿದ್ದೇವೆಂದು ಅತ್ಯಂತ ನಿರ್ಲಕ್ಷ್ಯದಿಂದ ಮತ್ತು ಹಗುರವಾಗಿ ಹೇಳಿಕೆ ನೀಡಿದ್ದಾರೆ. ಕರ್ನಾಟಕ ಪೊಲೀಸ್ ಇಲಾಖೆಯು ತನ್ನ ಶೌರ್ಯ, ಧೈರ್ಯ ಮತ್ತು ಕರ್ತವ್ಯದ ಕಡೆಗಿನ ಅಚಲ ನಿಷ್ಠೆಗೆ ಹೆಸರಾಗಿದೆ. ಆದ್ರೆ ಕೆಲವು ಅಧಿಕಾರಿಗಳು ನ್ಯಾಯಾಲಯದ ಮುಂದೆ ಸುಳ್ಳು ಸಾಕ್ಷ್ಯ ನೀಡಿರುವುದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

ಕೋರ್ಟ್​​ ತೀರ್ಪಿನಲ್ಲಿ ಈ ವಿಚಾರ ಬಯಲಾಗಿದೆ. ಈ ಪೊಲೀಸ್ ಅಧಿಕಾರಿಗಳ ನಡೆಯನ್ನು ಸಹಿಸಲು ಸಾಧ್ಯವಿಲ್ಲ. ಇದನ್ನ ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. ನಂಬಿಕೆಯನ್ನು ಕುಂದಿಸುವ ಇಂತಹ ಸುಳ್ಳು ಸಾಕ್ಷ್ಯ ನೀಡುವ ಘೋರ ತಪ್ಪುಗಳನ್ನು ತಡೆಯಬೇಕಾಗಿದೆ. ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಕೋರ್ಟ್ ತೀರ್ಪಿನಲ್ಲಿ ಉಲ್ಲೇಖ ಮಾಡಲಾಗಿದೆ.

ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್​ ಶಾಸಕ ವಿನಯ್ ಕುಲಕರ್ಣಿ ಅಪರಾಧಿಯಾಗಿ ಜೈಲು ಸೇರಿದ್ದಾರೆ. ಕೋರ್ಟ್ ತೀರ್ಪಿನಲ್ಲಿ ಕೊಲೆ ಸಂಚು ಬಯಲಾಗಿದ್ದು, ಎ1 ಆಗಿರೋ ಬಸವರಾಜ್ ಮುತ್ತಗಿ ಮಾಫಿ ಜೊತೆಗೆ ವಿನಯ್​ ಕುಲಕರ್ಣಿಯ ಲಿಂಕ್ ಬಗ್ಗೆ ಸ್ಫೋಟಕ ಮಾಹಿತಿಗಳು ಬಯಲಾಗಿದೆ.

ಎ1 ಬಸವರಾಜ್ ಮುತ್ತಗಿ ಮಾಫಿ ಜೊತೆ ಸಂಪರ್ಕದಲ್ಲಿ ಇರಲು ವಿನಯ್ ಕುಲಕರ್ಣಿ ತನ್ನ ಪತ್ನಿ ಹೆಸರಲ್ಲಿ ಸಿಮ್ ಖರೀದಿಸಿದ ವಿಚಾರ ತನಿಖೆಯಲ್ಲಿ ಬಯಲಾಗಿದೆ. ಪತ್ನಿ ಹೆಸರಿನಲ್ಲಿ ಸಿಮ್ ಖರೀದಿ ಮಾಡಿರುವ ವಿನಯ್​ ಕುಲಕರ್ಣಿ, 94 ಬಾರಿ ಮುತ್ತಗಿ ಜೊತೆಗೆ ಮಾತಾಡಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *