BBMP
Loading ...

GBA

Greater Bengaluru News9 : ನಗರದ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಪ್ರಾಪರ್ಟಿ ಟ್ಯಾಕ್ಸ್ ಪಾವತಿಯಲ್ಲಿ ಹೊಸ ಸಮಸ್ಯೆ ಎದುರಾಗಿದೆ. ಜಿಬಿಎ ತೆಗೆದುಕೊಂಡಿರುವ ಇತ್ತೀಚಿನ ನಿರ್ಧಾರದಂತೆ, ಆನ್‌ಲೈನ್ ಮೂಲಕ ಟ್ಯಾಕ್ಸ್ ಕಟ್ಟಲು ಕಸದ ವಿಲೇವಾರಿ ಕುರಿತ ವಿವರಗಳನ್ನು ಕಡ್ಡಾಯವಾಗಿ ನಮೂದಿಸಬೇಕಾಗಿದೆ.

ಮನೆಯಲ್ಲಿ ಉತ್ಪತ್ತಿಯಾಗುವ ಹಸಿ ಮತ್ತು ಒಣ ಕಸದ ಪ್ರಮಾಣವನ್ನು ಪ್ರತ್ಯೇಕವಾಗಿ ದಾಖಲಿಸದಿದ್ದರೆ ಟ್ಯಾಕ್ಸ್ ಪಾವತಿ ಸಾಧ್ಯವಿಲ್ಲ. ಈ ನಿಯಮದಿಂದ ಅನೇಕರು ಆನ್‌ಲೈನ್ ಮೂಲಕ ತೆರಿಗೆ ಕಟ್ಟಲು ಪರದಾಡುತ್ತಿದ್ದಾರೆ.

ವಿಶೇಷವಾಗಿ ಅಪಾರ್ಟ್ಮೆಂಟ್‌ಗಳಲ್ಲಿ ದಿನಕ್ಕೆ 100 ಕಿಲೋಗ್ರಾಂಕ್ಕೂ ಹೆಚ್ಚು ಕಸ ಉತ್ಪತ್ತಿಯಾಗುತ್ತದೆ. ಈ ಮಿತಿಯನ್ನು ಮೀರಿದರೆ ಜಿಬಿಎ ವತಿಯಿಂದ ಕಸದ ನಿರ್ವಹಣೆ ಸಾಧ್ಯವಿಲ್ಲ ಎಂಬ ಅಂಶ ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ.

ಈ ಹಿನ್ನೆಲೆ ಅನೇಕ ಅಪಾರ್ಟ್ಮೆಂಟ್‌ಗಳು ಖಾಸಗಿ ಸಂಸ್ಥೆಗಳ ಮೂಲಕ ಕಸದ ವಿಲೇವಾರಿ ಮಾಡಿಸುತ್ತಿವೆ. ಆದರೆ ಈಗ ಪ್ರತಿಯೊಬ್ಬ ಫ್ಲ್ಯಾಟ್ ನಿವಾಸಿಯೂ ತಮ್ಮದೇ ಕಸದ ಪ್ರಮಾಣವನ್ನು ಪ್ರತ್ಯೇಕವಾಗಿ ಆನ್‌ಲೈನ್‌ನಲ್ಲಿ ನಮೂದಿಸಬೇಕಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ನಿವಾಸಿಗಳ ಪ್ರಕಾರ, ಅಂದಾಜು ಲೆಕ್ಕ ನೀಡಿ ದಾಖಲಿಸಿದರೂ ಪಾವತಿ ಸಾಧ್ಯವಾಗುತ್ತಿಲ್ಲ. 100 ಕಿಲೋಗ್ರಾಂಕ್ಕಿಂತ ಹೆಚ್ಚು ಕಸದ ಪ್ರಮಾಣವನ್ನು ದಾಖಲಿಸಲು ಸಿಸ್ಟಂ ಸೂಚಿಸುತ್ತಿದೆ ಎಂದು ಅವರು ದೂರಿದ್ದಾರೆ. ಹಿಂದೆ ಇಂತಹ ನಿಯಮ ಇರಲಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಬೆಂಗಳೂರು ಅಪಾರ್ಟ್ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಸತೀಶ್ ಮಲ್ಯ ತಕ್ಷಣ ಸಮಸ್ಯೆ ಪರಿಹರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *