BBMP
Loading ...

DKS

Greater Bengaluru News9 : ವಿದ್ಯುತ್ ಗುತ್ತಿಗೆದಾರರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಯಾದ ‘ಒಸಿ’ (OC – Occupancy Certificate) ನಿಯಮವನ್ನು ರದ್ದುಗೊಳಿಸುವಂತೆ ಮಾರ್ಚ್ 11 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಪ್ರತಿಭಟನೆ ನಡೆಸಿತ್ತು. ಇದರ ಪರಿಣಾಮ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರು ನಿನ್ನೆ ಸದನದಲ್ಲಿ ಬಿಗ್​ ರಿಲೀಫ್​ ನೀಡಿದ್ದಾರೆ.

ಮಾರ್ಚ್ 11, 2026 ರಂದು ಬೆಳಗ್ಗೆ 10 ಗಂಟೆಗೆ ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿ, ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲಾಯಿತು. ಈ ಸಮಯದಲ್ಲಿ ವಿರೋಧ ಪಕ್ಷಗಳ ನಾಯಕರು ನುಡಿದಂತೆ ಹಾಗೂ ಈ ಹಿಂದೆ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿಗಳು ಭರವಸೆ ನೀಡಿದಂತೆ, ರಾಜ್ಯದ ವಿದ್ಯುತ್ ಗ್ರಾಹಕರ ಪರವಾಗಿ ಪ್ರಸ್ತುತ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಶಾಶ್ವತ ವಿದ್ಯುತ್ ಸಂಪರ್ಕಕ್ಕೆ ಬಾಕಿ ಇರುವ ಕಟ್ಟಡಗಳಿಗೆ ಸ್ವಾದಿನಿನುಭವ ಪತ್ರಕ್ಕೆ ಒಂದು ಬಾರಿಯ ವಿನಾಯಿತಿ / ದಂಡ ವಿಧಿಸಿ ವಿದ್ಯುತ್ ಸಂಪರ್ಕ ನೀಡುವಂತೆ ಆಡಳಿತ , ವಿಪಕ್ಷಗಳು ಚರ್ಚೆ ನಡೆಸಿದ್ದಾರೆ.

ಶಾಸಕರ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, “ನಗರದಲ್ಲಿ ಸಾವಿರಾರು ಜನ ಒಸಿ ಇಲ್ಲದ ಕಾರಣ ವಿದ್ಯುತ್ ಇಲ್ಲದೆ ಕತ್ತಲಲ್ಲಿ ಬದುಕುತ್ತಿದ್ದಾರೆ. ಬಿಲ್ಡರ್ ತಪ್ಪು ಮಾಡಿರಬಹುದು, ಆದರೆ ಹಣ ಕೊಟ್ಟು ಮನೆ ಕೊಂಡುಕೊಂಡ ಸಾಮಾನ್ಯ ಜನರ ತಪ್ಪೇನಿದೆ? ಮಾನವೀಯ ದೃಷ್ಟಿಯಿಂದ ಅವರಿಗೆ ವಿದ್ಯುತ್ ನೀಡುವುದು ನಮ್ಮ ಜವಾಬ್ದಾರಿ,” ಎಂದು ಪ್ರತಿಪಾದಿಸಿದರು.

ನಿಯಮ ಉಲ್ಲಂಘಿಸುವ ಬಿಲ್ಡರ್‌ಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ಆದರೆ, ಅಲ್ಲಿ ವಾಸಿಸುವ ನಿವಾಸಿಗಳಿಗೆ ತೊಂದರೆ ನೀಡುವುದಿಲ್ಲ. ವಿದ್ಯುತ್ ಸಂಪರ್ಕ ನೀಡಿದ ನಂತರವೂ ಅಕ್ರಮಗಳಿದ್ದರೆ ಬಿಬಿಎಂಪಿ ಮೂಲಕ ಕ್ರಮ ಜರುಗಿಸಲಾಗುವುದು ಎಂದು ಅವರು ವಿವರಿಸಿದರು.

ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಈಗಾಗಲೇ ಘೋಷಿಸಿದಂತೆ, ಒಸಿ ಇಲ್ಲದ ಕಟ್ಟಡಗಳಿಗೆ ವಾಣಿಜ್ಯ ದರದ ಬದಲು ಗೃಹ ಬಳಕೆ ದರದಲ್ಲೇ ವಿದ್ಯುತ್ ನೀಡುವ ತೀರ್ಮಾನಕ್ಕೆ ಡಿ.ಕೆ. ಶಿವಕುಮಾರ್ ಅವರು ಬೆಂಬಲ ವ್ಯಕ್ತಪಡಿಸಿದರು. ಅಂತಿಮವಾಗಿ, ಈ ನಿರ್ಧಾರವು ಲಕ್ಷಾಂತರ ಬೆಂಗಳೂರಿಗರಿಗೆ ಆರ್ಥಿಕ ಮತ್ತು ಮೂಲಭೂತ ಸೌಕರ್ಯದ ದೃಷ್ಟಿಯಿಂದ ಅನುಕೂಲಕರವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

Leave a Reply

Your email address will not be published. Required fields are marked *