Greater Bengaluru news9: ಜಿಬಿಎ ವ್ಯಾಪ್ತಿಯಲ್ಲಿರುವ ಐದು ನಗರ ಪಾಲಿಕೆಗಳ ಬಜೆಟ್ ಮಾ.26 ಹಾಗೂ 27 ರಂದು ಮಂಡನೆಯಾಗಲಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾದ ನಂತರದ ಮೊದಲ ಬಜೆಟ್ ಮಂಡನೆಗೆ ಮುಹೂರ್ತ ನಿಗದಿಯಾಗಿದೆ ಎಂದು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಪ್ರಕಟಿಸಿದ್ದಾರೆ.
ಇದೇ ಮಾರ್ಚ್ 26 ಗುರುವಾರ ಹಾಗೂ ಮಾರ್ಚ್ 27 ಶುಕ್ರವಾರ ಎರಡು ದಿನಗಳ ಕಾಲ ಬಜೆಟ್ ಮಂಡನೆ ನಡೆಯಲಿದೆ.ಮೊದಲ ದಿನವಾದ ಗುರುವಾರ (ಮಾ.26) ಎರಡು ನಗರ ಪಾಲಿಕೆಗಳ ಬಜೆಟ್ ಮಂಡನೆ ನಡೆಯಲಿದ್ದು, ಎರಡನೇ ದಿನವಾದ ಶುಕ್ರವಾರ (ಮಾ.27) ಉಳಿದ ಮೂರು ನಗರ ಪಾಲಿಕೆಗಳ ಬಜೆಟ್ ಮಂಡನೆ ನಡೆಯಲಿದೆ.
ಪ್ರತಿ ನಗರ ಪಾಲಿಕೆಯೂ ತಮ್ಮ ತಮ್ಮ ವಲಯ ಮಟ್ಟದಲ್ಲಿ ಬಜೆಟ್ ಮಂಡನೆಗೆ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಈಗಾಗಲೇ ಆಡಳಿತಾಧಿಕಾರಿಗಳ ಅನುಮೋದನೆ ಕೂಡ ದೊರೆತಿದೆ.ಆಯಾ ವಲಯದ ಹಣಕಾಸು ವಿಭಾಗದ ಮುಖ್ಯಸ್ಥರು ಬಜೆಟ್ ಮಂಡಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.


