Greater Bengaluru News9 : ಮಧ್ಯಪ್ರಾಚ್ಯದ ಯುದ್ಧದ ಎಫೆಕ್ಟ್‌ನಿಂದ ಬೆಂಗಳೂರಿನ ಬಹುತೇಕ ಹೋಟೆಲ್‌ಗಳು ತತ್ತರಿಸಿ ಹೋಗಿದೆ. ಕಮರ್ಷಿಯಲ್ ಸಿಲಿಂಡರ್ ಅಭಾವ ಹಿನ್ನೆಲೆ ಮಾಂಸಹಾರಿ ಹೋಟೆಲ್‌ಗಳೂ ಸಂಕಷ್ಟಕ್ಕೆ ಸಿಲುಕಿವೆ. ಅದರಂತೆ ಮೆಜೆಸ್ಟಿಕ್‌ನ ಪ್ರಸಿದ್ಧ ಚಿಕನ್ ಕೌಂಟಿ ಫ್ಯಾಮಿಲಿ ರೆಸ್ಟೋರೆಂಟ್ ಬಂದ್ ಆಗಿದೆ. ಗ್ಯಾಸ್ ಅಭಾವದಿಂದ ಸಮಸ್ಯೆ ಎದುರಾಗಿದ್ದು ಹೋಟೆಲ್ ಬಂದ್ ಮಾಡಲಾಗಿದೆ.
ಇನ್ನೂ ನಿನ್ನೆಯಷ್ಟೇ ಕೇಂದ್ರ ಸರ್ಕಾರದಿಂದ ಕಮರ್ಷಿಯಲ್ ಗ್ಯಾಸ್ ನೀಡುವ ಭರವಸೆ ಸಿಕ್ಕಿದ್ದು, ಮುಂದಿನ ವಾರ ಹೋಟೆಲ್‌ಗಳು ಓಪನ್ ಆಗಲಿದ್ಯಾ ಎಂಬ ಪ್ರಶ್ನೆ ಉದ್ಬವಿಸಿದೆ.
ಭಾನುವಾರದ ಬಾಡೂಟಕ್ಕೂ ವಾರ್‌ನ ಬಿಸಿ ತಟ್ಟಿದೆ. ಬೆಂಗಳೂರಿನ ಪ್ರತಿಷ್ಟಿತ ಎಂಪೈರ್ ಹೊಟೇಲ್‌ನಲ್ಲಿ ಶೇಕಡ 60 ರಷ್ಟು ಮೆನುಗೆ ಕತ್ತರಿ ಹಾಕಲಾಗಿದೆ. ಸಿಲಿಂಡರ್ ಹೆಚ್ಚು ಬಳಕೆಯಾಗುವ ಐಟಂಗಳನ್ನ ಮೆನುವಿನಿಂದ ತೆಗೆಯಲಾಗಿದೆ. ಅದರಂತೆ ಮಟನ್, ಗ್ರಿಲ್ ಚಿಕನ್, ಶವರ್ಮಾ ಇರುವುದಿಲ್ಲ. ಸಿಲಿಂಡರ್ ಸಮಸ್ಯೆ ಬಗೆಹರಿಯುವವರಿಗೂ ಈ ಐಟಂಗಳು ಸಿಗುವುದಿಲ್ಲ ಎಂದು ಹೊಟೇಲ್‌ನ ಹೊರಭಾಗದಲ್ಲಿ ಬೋರ್ಡ್ ಹಾಕಲಾಗಿದೆ. ಅಲ್ಲದೇ, ನಗರದ ಎಲ್ಲಾ ಎಂಪೈರ್ ಹೋಟೆಲ್‌ಗಳಲ್ಲೂ ಇದೇ ಪರಿಸ್ಥಿತಿ ಮುಂದುವರಿದಿದೆ.
ಇಷ್ಟು ದಿನ ಹೋಟೆಲ್‌ಗಳಲ್ಲಿ ಸಣ್ಣ-ಪುಟ್ಟ ಐಟಂಗೆ ಬ್ರೇಕ್ ಬೀಳುತ್ತಿತ್ತು. ಸಿಲಿಂಡರ್ ಸಮಸ್ಯೆ ಮುಂದುವರಿದಂತೆ, ಹಲವು ತಿಂಡಿ-ತಿನಿಸುಗಳನ್ನ ಕಡಿತ ಮಾಡಲಾಗಿದೆ. ನಗರದ ಪ್ರಿಯದರ್ಶಿನಿ ಹೋಟೆಲ್‌ನಲ್ಲಿ ಸೌತ್ ಇಂಡಿಯನ್ ಮೀಲ್ಸ್ ಹಾಗೂ ನಾರ್ಥ್ ಇಂಡಿಯನ್ ಮೀಲ್ಸ್ ಕೂಡ ಇರುವುದಿಲ್ಲ. ಜೊತೆಗೆ ಚೈನೀಸ್ ಐಟಂ ಹಾಗೂ ನಾರ್ಥ್ ಇಂಡಿಯನ್ ಕರೀಸ್ ಕೂಡ ಇರುವುದಿಲ್ಲ. ನಿಗದಿತ ಸಮಯಕ್ಕೆ ಬಂದ್ರೆ ದೋಸೆ ಸಿಗಲಿದೆ. ಇನ್ನು ಗ್ಯಾಸ್ ಇಲ್ಲದ ಹಿನ್ನೆಲೆ ಅನ್ನ-ಸಾಂಬಾರ್ ಮಾತ್ರವೇ ಸಿಗಲಿದೆ. ನಾಳೆಯಿಂದ ಗ್ಯಾಸ್ ಸಿಕ್ಕಿದ್ರೆ, ಪರಿಸ್ಥಿತಿ ನೋಡಿಕೊಂಡು ಮೆನ್ಯು ಬದಲಾವಣೆ ಮಾಡ್ತೀವಿ ಅಂತಿದ್ದಾರೆ ಹೋಟೆಲ್‌ನ ಮಾಲೀಕರು.


