BBMP
Loading ...

New Project

Greater Bengaluru news9: ರಾಜ್ಯಾಧ್ಯoತ ಸ್ವಾಭಿಮಾನಿ ಪತ್ರಕರ್ತರ ರಕ್ಷಣೆಯೊಂದಿಗೆ ಅವರ ಕುಟುಂಬದವರ ಅರೋಗ್ಯ – ಶಿಕ್ಷಣ – ವಸತಿ ಹಿತದೃಷ್ಟಿಯಿಂದ ಸ್ಥಾಪಿತಗೊಂಡಿರುವ “ಕಾರ್ಯನಿರತ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ”ದ ಬೆಂಗಳೂರು ನಗರ ಜಿಲ್ಲಾ ಘಟಕದ “ಜಿಲ್ಲಾ ಕಾರ್ಯಧ್ಯಕ್ಷ”ರನ್ನಾಗಿ ಬಿಬಿಎಂಪಿ ನ್ಯೂಸ್ ಪತ್ರಿಕೆ ಹಾಗೂ ಗ್ರೇಟರ್ ಬೆಂಗಳೂರು ನ್ಯೂಸ್ 9 ಸಂಪಾದಕರಾದ ವೈ.ಹೆಚ್. ಆನಂದ್ ಅವರನ್ನು ಮಾಡಲಾಗಿದೆ.

ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾದ ಎಂ.ಪದ್ಮನಾಭ ಅವರ ಅನುಮೋದನೆಯೊಂದಿಗೆ ರಾಜ್ಯಾಧ್ಯಕ್ಷರಾದ ಡಿ.ಕೆ.ಮಹೇಂದ್ರ ಕುಮಾರ್ ಅವರ ಆದೇಶದ ಮೇರೆಗೆ ರಾಜ್ಯ ಉಪಾಧ್ಯಕ್ಷರು ಹಾಗೂ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿಗಳಾದ ಕನ್ನಡದ ಕಂದ ಬಿ.ಕೆ.ಮುರಳಿಕೃಷ್ಣ ಅವರು ನೇಮಕ ಮಾಡಿರುತ್ತಾರೆ.

ವೈ. ಹೆಚ್.ಆನಂದ್ ಅವರು ಮುಂದಿನ ಅದೇಶದವರೆಗೂ ಪತ್ರಕರ್ತರ ರಕ್ಷಣೆ ಮತ್ತು ಮೂಲಭೂತ ಸೌಕರ್ಯಗಳ ವಿಚಾರವಾಗಿ ಪತ್ರಕರ್ತರ ಧ್ವನಿಯಾಗಿ ಹಾಗೂ ಸಂಘಟನೆಯ ಏಳ್ಗೆಗಾಗಿ ಶ್ರಮಿಸಬೇಕೆಂದು ತಿಳಿಸಲಾಗಿದೆ.

Leave a Reply

Your email address will not be published. Required fields are marked *