BBMP
Loading ...

Vidhanasoudha

Greater Bengaluru News9 : ಬೆಂಗಳೂರಿನ 4 ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿ ಬಿಪಿಎಲ್‌ ಕಾರ್ಡ್‌ ಹೊಂದಿದವರಿಗೆ ಉಚಿತ ಅಥವಾ ಕಡಿತ ಶುಲ್ಕದ ಚಿಕಿತ್ಸೆಯನ್ನು ಪಡೆಯಲು ಆರೋಗ್ಯ ಇಲಾಖೆ ಅವಕಾಶ ಕಲ್ಪಿಸಿದೆ.

ರೆಫೆರಲ್ ಲೆಟರ್‌ ವಿನಾಯಿತಿ
ಆಯುಷ್ಮಾನ್‌ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ, ಸರ್ಕಾರಿ ಆಸ್ಪತ್ರೆಗಳಿಂದ ದೊರೆಯುವ ರೆಫೆರಲ್ ಲೆಟರ್‌ ಅಗತ್ಯವಿದ್ದ ದ್ವಿತೀಯ ಹಂತದ (2A) ಚಿಕಿತ್ಸೆಗೆ ವಿನಾಯಿತಿ ನೀಡಲಾಗಿದೆ.

ವಿನಾಯಿತಿ ಪಡೆದ ಆಸ್ಪತ್ರೆಗಳು

  • ಎಂಎಸ್‌ ರಾಮಯ್ಯ ವೈದ್ಯಕೀಯ ಕಾಲೇಜು (ರಾಮಯ್ಯ ಆಸ್ಪತ್ರೆ)
  • ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆ (KIMS ಆಸ್ಪತ್ರೆ)
  • ಅಂಬೇಡ್ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ
  • ಸೆಂಟ್‌ಜಾನ್ಸ್‌ ವೈದ್ಯಕೀಯ ಕಾಲೇಜು (ಹೊಸೂರು ರಸ್ತೆ)

ಆದೇಶದ ಪ್ರಮುಖ ಅಂಶಗಳು

  • ಒಳರೋಗಿ ಸೇವೆಗಳಿಗೆ ₹5 ಲಕ್ಷ ವರೆಗೆ ಉಚಿತ ಚಿಕಿತ್ಸೆ.
  • ಹೊರರೋಗಿ ಸೇವೆಗಳಿಗೆ (OPD) ತಮ್ಮ ಶುಲ್ಕದೊಂದಿಗೆ ಸೇವೆ.

ಬಿಪಿಎಲ್ ಕಾರ್ಡ್ ಅಥವಾ ಆಧಾರ್‌ ಲಿಂಕ್ ರೇಷನ್‌ ಕಾರ್ಡ್‌ ಹೊಂದಿದವರು ಸಂಪೂರ್ಣ ಉಚಿತ ಸೇವೆ ಪಡೆಯುತ್ತಾರೆ.

ಎಪಿಎಲ್‌ ರೇಷನ್ ಕಾರ್ಡ್‌ ಹೊಂದಿದ್ದರೆ 30% ರಿಯಾಯಿತಿ ಮಾತ್ರ ಸಿಗಲಿದೆ
ಜಿಬಿಎ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆ ಹಾಸಿಗೆ ಕೊರತೆ ಇರುವುದರಿಂದ ಬಿಪಿಎಲ್ ಕುಟುಂಬಗಳು ಚಿಕಿತ್ಸೆಗೆ ತಡವಾಗಿ ಪ್ರವೇಶ ಪಡೆಯುತ್ತಿದ್ದರು. ಈ ಆದೇಶದಿಂದ, ಈ ಸಮಸ್ಯೆಯನ್ನು ಕಡಿಮೆ ಮಾಡಲಾಗುತ್ತಿದೆ ಮತ್ತು ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿ ರೆಫೆರಲ್ ಲೆಟರ್‌ ಅಗತ್ಯವಿಲ್ಲದೆ ಚಿಕಿತ್ಸೆ ಪಡೆಯಲು ಅವಕಾಶ ಸಿಗುತ್ತದೆ.

Leave a Reply

Your email address will not be published. Required fields are marked *