BBMP
Loading ...

lpg-gas-cylinder-lpg-gas-price

Greater Bengaluru News9 : ಎಲ್​ಪಿಜಿ ಗ್ಯಾಸ್​ ಸಿಲಿಂಡರ್​ಗಳ ವಿತರಣೆಗೆ ಸಂಬಂಧಿಸಿದಂತೆ ಜನರಲ್ಲಿರುವ ಗೊಂದಲಗಳ ನಿವಾರಣೆಗೆಂದೇ ಸಹಾಯವಾಣಿಯನ್ನು ( Helpline Number ) ತೆರೆದಿರುವುದಾಗಿ ಬೆಂಗಳೂರಿನ ಅನೌಪಚಾರಿಕ ಪಡಿತರ ಪ್ರದೇಶದ ಅಪರ ನಿರ್ದೇಶಕರಾದ ಪಾತರಾಜು ಅವರು ತಿಳಿಸಿದ್ದಾರೆ.

ಇರಾನ್​, ಇಸ್ರೇಲ್​ ಮತ್ತು ಅಮೆರಿಕ ನಡೆಸುತ್ತಿರುವ ಯುದ್ಧವು ಭಾರತದ ಅಡುಗೆ ಮನೆಗಳ ಮೇಲೆ ಪ್ರಭಾವ ಬೀರಿದೆ. ತಮ್ಮ ಮೇಲೆ ಇಸ್ರೇಲ್​ ಮತ್ತು ಅಮೆರಿಕ ಜಂಟಿಯಾಗಿ ನಡೆಸುತ್ತಿರುವ ದಾಳಿಗೆ ಪ್ರತೀಕಾರವಾಗಿ ಇರಾನ್​, ಹಾರ್ಮುಜ್​ ಜಲಸಂಧಿಯನ್ನು ಬ್ಲಾಕ್​ ಮಾಡಿದೆ. ಇದೇ ಜಲಸಂಧಿಯಿಂದ ಜಾಗತಿಕವಾಗಿ ಇಂಧನ ಪೂರೈಕೆಯಾಗುತ್ತಿದೆ. ಅಂದರೆ, ತೈಲ ತುಂಬಿದ ಹಡುಗುಗಳು ಇದೇ ಜಲಸಂಧಿಯನ್ನು ಹಾದು ಹೋಗುತ್ತವೆ. ಇದೀಗ ಬ್ಲಾಕ್​ ಮಾಡಿರುವ ಕಾರಣ ತೈಲ ಸರಬರಾಜುವಿನಲ್ಲಿ ವ್ಯತ್ಯಯ ಉಂಟಾಗಿದ್ದು, ಭಾರತದ ಮೇಲೆ ಪರಿಣಾಮ ಬೀರುತ್ತಿದೆ.

ಸದ್ಯ ಭಾರತದಲ್ಲಿ ತೈಲ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಸರ್ಕಾರ ಹೇಳಿದೆ. ಆದರೆ, ಯುದ್ಧವನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಕಾಳಸಂತೆಯಲ್ಲಿ ಅತಿ ಹೆಚ್ಚಿನ ಬೆಲೆಗೆ ಸಿಲಿಂಡರ್​ಗಳ ಮಾರಾಟಕ್ಕಿಳಿದಿದ್ದಾರೆ. ಒಟ್ಟಾರೆ, ಎಲ್​ಪಿಜಿ ವಿತರಣೆಯಲ್ಲಿ ಕೃತಕ ಅಭಾವವನ್ನು ಸೃಷ್ಟಿ ಮಾಡಿದ್ದಾರೆ. ಎಲ್​ಪಿಜಿ ಸಿಲಿಂಡರ್​ ಸಿಗುವುದಿಲ್ಲ ಎಂಬ ಭೀತಿಯನ್ನು ಜನರಲ್ಲಿ ಹರಡುತ್ತಿದ್ದಾರೆ.

ಕೋಟ್ಯಂತರ ಮಂದಿಗೆ ಆಸರೆಯಾಗಿರುವ ಬೆಂಗಳೂರಿನಲ್ಲೂ ಎಲ್​ಪಿಜಿ ಆತಂಕ ಶುರುವಾಗಿದ್ದು, ಜನರು ಚಿಂತೆಗೀಡಾಗಿದ್ದಾರೆ. ಆದರೆ, ಇನ್ನು ಮುಂದೆ ಆ ಚಿಂತೆ ಮಾಡಬೇಕಾಗಿಲ್ಲ. ಏಕೆಂದರೆ, ಅದರ ನಿವಾರಣೆಗೆಂದೇ ಸಂಬಂಧಪಟ್ಟ ಇಲಾಖೆ ಸಹಾಯವಾಣಿಯನ್ನು ತೆರೆದಿದೆ.

ಹೌದು, ಬೆಂಗಳೂರು ಅನೌಪಚಾರಿಕ ಪಡಿತರ ಪ್ರದೇಶ ವ್ಯಾಪ್ತಿಗೆ ಸಂಬಂಧಿಸಿದಂತೆ ಸಹಾಯವಾಣಿಯನ್ನು ತೆರೆಯಲಾಗಿದೆ. ಗ್ರಾಹಕರು ಮತ್ತು ಸಾರ್ವಜನಿಕರು ಎಲ್​ಪಿಜಿ ಗ್ಯಾಸ್ ಸಿಲಿಂಡರ್​ಗಳ ವಿತರಣೆಗೆ ಸಂಬಂಧಪಟ್ಟಂತೆ ಯಾವುದೇ ದೂರುಗಳಿದ್ದರೂ 080 22264966 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದು ಅನೌಪಚಾರಿಕ ಪಡಿತರ ಪ್ರದೇಶದ ಅಪರ ನಿರ್ದೇಶಕರಾದ ಪಾತರಾಜು ತಿಳಿಸಿದ್ದಾರೆ.

Leave a Reply

Your email address will not be published. Required fields are marked *