BBMP
Loading ...

DKS

Greater Bengaluru News9 : ಸಿಎಂ ಕುರ್ಚಿ ಗುದ್ದಾಟದ ನಡುವೆ ಸಿಎಂ ಸಿದ್ದರಾಮಯ್ಯ ಅವರು ದಾಖಲೆಯ ಬಜೆಟ್‌ ಮಂಡನೆ ಮಾಡಿದ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್‌ ಅವರು ನವದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆಂಬ ಸುದ್ದಿ ಇದೀಗ ಹರಿದಾಡುತ್ತಿದೆ. ಡಿಸಿಎಂ ಹೈಕಮಾಂಡ್‌ ಭೇಟಿ ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲವನ್ನು ಮೂಡಿಸಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆ ಕಲಬುರಗಿಯಿಂದ ದೆಹಲಿಗೆ ಜೊತೆಯಾಗಿ ಪ್ರಯಾಣಿಸಲಿದ್ದಾರೆ. ಡಿಸಿಎಂ ಈ ಭೇಟಿ ನೀರಾವಳಿ ಇಲಾಖೆ ಸಂಬಂಧ ಪಟ್ಟದ್ದು ಎನ್ನಲಾಗಿದೆ. ಆದರೆ ಸಿದ್ದರಾಮಯ್ಯ ಅವರ ಬಜೆಟ್‌ ಬೆನ್ನಲ್ಲೇ ಡಿಕೆಶಿ ನವದೆಹಲಿಗೆ ಪ್ರಯಾಣ ಬೆಳೆಸಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಡಿಸಿಎಂ ಈ ಭೇಟಿ ಹಿಂದಿದೆ ಬೇರೆ ಉದ್ದೇಶ ಎನ್ನಲಾಗಿದ.

ಡಿಕೆ ಶಿವಕುಮಾರ್‌ ಅವರು ಸಿಎಂ ಕುರ್ಚಿಗಾಗಿ ಭೇಡಿಕೆಯಿಟ್ಟ ದಿನದಿಂದಲೂ ಸಿದ್ದರಾಮಯ್ಯನವರು ಈ ಬಾರಿಯ ಬಜೆಟ್‌ ಅನ್ನು ನಾನೇ ಮಂಡಿಸುವುದಾಗಿ ಹೇಳುತ್ತಲೇ ಬಂದಿದ್ದರು. ಅದರಂತೆ ಇದೀಗ ಯಶಸ್ವಿಯಾಗಿ ದಾಖಲೆಯ ೧೭ನೇ ಬಜೆಟ್‌ ಅನ್ನು ಮಂಡಿಸಿದ್ದಾರೆ.

Leave a Reply

Your email address will not be published. Required fields are marked *