BBMP
Loading ...

State budget

Greater Bengaluru News9: ಸಿಎಂ ಸಿದ್ದರಾಮಯ್ಯ ಅವರು ಇವತ್ತು 2026, 27ನೇ ಸಾಲಿನ ವಾರ್ಷಿಕ ಬಜೆಟ್ ಮಂಡಿಸಿದರು. ಬಜೆಟ್​ನ ಪ್ರಮುಖ 30 ಹೈಲೈಟ್ಸ್​ ಇಲ್ಲಿ ನೀಡಲಾಗಿದೆ.

ಸಿದ್ದು ಮಾಸ್ಟರ್​ ಸ್ಟ್ರೋಕ್​

  • ದೇಶದ ಜಿಡಿಪಿ 7.4ರಷ್ಟಿದೆ, ಕರ್ನಾಟಕದಲ್ಲೇ 8.1ರಷ್ಟು ಜಿಡಿಪಿ ದಾಖಲು
  • ಗೃಹ ಲಕ್ಷ್ಮಿ ಯೋಜನೆಗೆ 28,608 ಕೋಟಿ ರೂಪಾಯಿ ಮೀಸಲು
  • 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣದ ಬಳಕೆ ನಿಷೇಧ
  • ಶಾಲಾ, ಕಾಲೇಜುಗಳಲ್ಲಿ ಖಾಲಿ ಇರುವ 15 ಸಾವಿರ ಬೋಧಕ ಹುದ್ದೆಗಳ ಭರ್ತಿ
  • ಪದವಿ, ಇಂಜಿನಿಯರಿಂಗ್ ಕಾಲೇಜುಗಳಲ್ಲಿ 2 ಸಾವಿರ ಬೋಧಕ ಹುದ್ದೆಗಳ ಭರ್ತಿ
  • ಶೈಕ್ಷಣಿಕ & ಸಾಮಾಜಿಕ ದೌರ್ಜನ್ಯ ತಡೆಗೆ ರೋಹಿತ್ ವೇಮುಲ ಕಾಯ್ದೆ ಜಾರಿ
  • 18 ವರ್ಷದ ಒಳಗಿನ ಮಕ್ಕಳ ಡಯಾಬಿಟಿಸ್ ಚಿಕಿತ್ಸೆಗೆ ಉಚಿತ ಇನ್ಸುಲಿನ್
  • ಆರೋಗ್ಯ ಇಲಾಖೆಯಯಲ್ಲಿ ಖಾಲಿ ಇರುವ 2500 ಹುದ್ದೆಗಳ ಭರ್ತಿ
  • ಕಾರವಾರ, ಯಾದಗಿರಿಯಲ್ಲಿ 100 ಕೋಟಿ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
  • ವಿಕ್ಟೋರಿಯಾ ಆಸ್ಪತ್ರೆಗೆ ಶಾಂತವೇರಿ ಗೋಪಾಲಗೌಡ ಆಸ್ಪತ್ರೆ ಅಂತ ಮರುನಾಮಕರಣ
  • ಐಟಿಐ ಕೋರ್ಸ್ ಮಾಡೋರಿಗೆ ಪದವಿ ಪೂರ್ವ ಪ್ರಮಾಣ ಪತ್ರ ವಿತರಣೆ
  • ಬೆಂಗಳೂರಲ್ಲಿ 158 ಕಿ.ಮೀ. ಉದ್ದದ ರಸ್ತೆಗಳ ವೈಟ್ ಟಾಪಿಂಗ್
  • ಈ ವರ್ಷ 41 ಕಿ.ಮೀ. ಮೆಟ್ರೋ ಮಾರ್ಗ ಪೂರ್ಣಕ್ಕೆ ಯೋಜನೆ
  • ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜನೆಕ್ಕೆ 1250 ಚಾರ್ಜಿಂಗ್ ಪಾಯಿಂಟ್
  • ಬೆಳಗಾವಿಯಲ್ಲಿ 1 ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪಾರ್ಕ್ ಅಭಿವೃದ್ಧಿ
  • ಪತ್ರಿ ಕೆಜಿ ರೇಷ್ಮೆ ಗೂಡಿಗೆ ಇರುವ ₹10 ಸಾಗಾಣಿಕಾ ವೆಚ್ಚ ₹20ಕ್ಕೆ ಹೆಚ್ಚಳ
  • ರಾಮನಗರ, ಶಿಡ್ಲಘಟ್ಟ, ಹಾವೇರಿ, ತಾಂಡವಪುರ, ಕಲಬುರಗಿಯಲ್ಲಿ ಸಿಲ್ಕ್​ ಪಾರ್ಕ್​ಗಳ ಸ್ಥಾಪನೆ
  • ರಾಜ್ಯದಲ್ಲಿ ಪ್ರಪ್ರಥಮವಾಗಿ ಜಾನುವಾರುಗಳಿಗೆ ಸಿ.ಟಿ ಸ್ಕ್ಯಾನಿಂಗ್​ ಕೇಂದ್ರ
  • ಬೆಂಗಳೂರು, ಬೀದರ್​ ವಿವಿಯ ಪಶು ಆಸ್ಪತ್ರೆಗಳಲ್ಲಿ ಸಿ.ಟಿ ಸ್ಕ್ಯಾನಿಂಗ್​ ಕೇಂದ್ರ
  • ಬೆಂಗಳೂರು, ಬೀದರ್​ನಲ್ಲಿ ‘ಶ್ವಾನ ಸಂತಾನ ನಿಯಂತ್ರಣ ಕೇಂದ್ರ’ ಸ್ಥಾಪನೆ
  • ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ, ಚಿಕ್ಕಮಗಳೂರಲ್ಲಿ ಮತ್ಸ್ಯ ದರ್ಶಿನಿ ಸ್ಥಾಪನೆ
  • 38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ₹30000 ಕೋಟಿ ಸಾಲ
  • ಮೈಸೂರು, ಹುಬ್ಬಳ್ಳಿಯಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ
  • ಶ್ರೀ ಮಾತಾ ವೈಷ್ಣೋದೇವಿ ದೇವಾಲಯ ಯಾತ್ರೆ ಕೈಗೊಳ್ಳುವವರಿಗೆ 5000 ಸಹಾಯ
  • ಸಂತ ಶಿಶುನಾಳ ಶರೀಫರ ಹೆಸರಲ್ಲಿ 10 ಹೊಸ ವಸತಿ ಶಾಲೆಗಳು ಸ್ಥಾಪನೆ
  • 25 ಹೊಸ ಅಲ್ಪಸಂಖ್ಯಾತ ಮೆಟ್ರಿಕ್​​ ವಿದ್ಯಾರ್ಥಿ ನಿಲಯ ಸ್ಥಾಪನೆ
  • 50 ಸರ್ಕಾರಿ ಕಾಲೇಜುಗಳಲ್ಲಿ ಆಧುನಿಕ 10 AI ಪ್ರಯೋಗಾಲಯ ಸ್ಥಾಪನೆ
  • ಸಾರಿಗೆ ನೌಕರರ ವೇತನ ಬಾಕಿ ಪಾವತಿಗಾಗಿ 1,271 ಕೋಟಿ ರೂ. ಮೀಸಲು
  • ಕೊರಟಗೆರೆ ತಾ. ವಡೇರಹಳ್ಳಿಯಲ್ಲಿ 12 TMC ಸಾಮರ್ಥ್ಯದ ಡ್ಯಾಂ ನಿರ್ಮಾಣ
  • ಮಹಿಳೆಯರಿಗೆ ಒಂದು ದಿನ ವೇತನ ಸಹಿತ ಋತುಚಕ್ರ ರಜೆಗೆ ಅವಕಾಶ

Leave a Reply

Your email address will not be published. Required fields are marked *