Greater Bengaluru News9 : ವಾಣಿಜ್ಯ ಮತ್ತು ಕೈಗಾರಿಕಾ ವಲಯಕ್ಕೆ Karnataka Electricity Regulatory Commission (KERC) ಶಾಕ್ ನೀಡಿದೆ. 2025–26ನೇ ಆರ್ಥಿಕ ವರ್ಷಕ್ಕೆ ಅನ್ವಯಿಸುವಂತೆ ವಿವಿಧ ವಿಭಾಗಗಳ ವಿದ್ಯುತ್ ದರವನ್ನು ಏರಿಕೆ ಮಾಡಲಾಗಿದೆ. ಈ ನಿರ್ಧಾರಕ್ಕೆ ಕೈಗಾರಿಕೋದ್ಯಮಿಗಳು ಮತ್ತು ವಾಣಿಜ್ಯೋದ್ಯಮಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ದರ ಏರಿಕೆ ಸಂಬಂಧ ಫೆಬ್ರವರಿ 20ರಂದು ಸಾರ್ವಜನಿಕರ ಜೊತೆ ಚರ್ಚೆ ನಡೆಸಲಾಗಿತ್ತು. ಆ ವೇಳೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ದರ ಏರಿಕೆ ಮಾಡುವುದಿಲ್ಲವೆಂದು ಕೆಇಆರ್‌ಸಿ ಭರವಸೆ ನೀಡಿತ್ತು. ಆದರೆ ಇದೀಗ ಆಯೋಗ ಯು-ಟರ್ನ್ ತೆಗೆದುಕೊಂಡಿದ್ದು, ಇದರಿಂದ ವ್ಯಾಪಾರ ವಲಯದಲ್ಲಿ ಅಸಮಾಧಾನ ಹೆಚ್ಚಾಗಿದೆ.
ಯೂನಿಟ್‌ಗೆ ಎಷ್ಟು ಏರಿಕೆ?
- LT-3(A) ವಾಣಿಜ್ಯ ಬಳಕೆ: ರೂ. 7ರಿಂದ ರೂ. 7.10ಕ್ಕೆ ಏರಿಕೆ
- LT-5 ಕೈಗಾರಿಕಾ ಬಳಕೆ: ರೂ. 4.50ರಿಂದ ರೂ. 5.20ಕ್ಕೆ ಏರಿಕೆ
- HT-2(A) ಮೆಟ್ರೋ, ರೈಲ್ವೆ & ಇತರೆ: ರೂ. 6.60ರಿಂದ ರೂ. 6.70ಕ್ಕೆ ಏರಿಕೆ
- HT-2(B) ಕಾಂಪ್ಲೆಕ್ಸ್, ಥಿಯೇಟರ್, ಹೋಟೆಲ್ ಬಳಕೆ: ರೂ. 5.95ರಿಂದ ರೂ. 6.90ಕ್ಕೆ ಏರಿಕೆ
ವಿದ್ಯುತ್ ದರ ಏರಿಕೆಯಿಂದ ಉತ್ಪಾದನಾ ವೆಚ್ಚ ಹೆಚ್ಚಳವಾಗುವ ಸಾಧ್ಯತೆ ಇದ್ದು, ಇದರಿಂದ ಸರಕು ಮತ್ತು ಸೇವೆಗಳ ಬೆಲೆಗಳ ಮೇಲೂ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ. ಕೈಗಾರಿಕಾ ಸಂಘಟನೆಗಳು ಈ ನಿರ್ಧಾರವನ್ನು ಹಿಂಪಡೆಯುವಂತೆ ಸರ್ಕಾರ ಮತ್ತು ಆಯೋಗವನ್ನು ಆಗ್ರಹಿಸಿವೆ.


