BBMP
Loading ...

March 1

Greater Bengaluru News9 : ಪ್ರತಿ ತಿಂಗಳ ಮೊದಲ ದಿನದಂತೆ, ಈ ಮಾರ್ಚ್ 1 ಕೂಡ ಸಾಮಾನ್ಯ ಜನರ ಬದುಕಿನಲ್ಲಿ ಹಲವು ಬದಲಾವಣೆಗಳನ್ನು ತರಲಿದೆ. ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆಯ ಸಾಧ್ಯತೆಯಿಂದ ಹಿಡಿದು, ರೈಲು ಟಿಕೆಟ್ ಬುಕಿಂಗ್ ಮತ್ತು ಮೆಸೇಜಿಂಗ್ ಆಯಪ್‌ಗಳ ಬಳಕೆಯವರೆಗೆ ಹೊಸ ನಿಯಮಗಳು ಜಾರಿಗೆ ಬರಲಿವೆ. ಹಾಗಿದ್ದರೆ, ಮುಂದಿನ ತಿಂಗಳಲ್ಲಿ ಯಾವ ನಿಯಮಗಳಲ್ಲಿ ಬದಲಾವಣೆಗಳಿವೆ ಎಂದು ನೋಡೋಣ ಬನ್ನಿ..

ಎಲ್‌ಪಿಜಿ ಗ್ಯಾಸ್ ಸಿಲಿಂಡರ್
ಸಿಲಿಂಡರ್​ ಬೆಲೆಗಳಲ್ಲಿ ಏರಿಕೆ ಮತ್ತು ಇಳಿಕೆಯನ್ನು ನಾವು ಕಾಣಬಹುದಾಗಿದೆ. ಕೆಲವು ತಿಂಗಳುಗಳಿಂದ ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆಗಳಲ್ಲಿ ಬದಲಾವಣೆಗಳನ್ನು ಕಂಡಿವೆ. ಆದಾಗ್ಯೂ, ಮಾರ್ಚ್​ 1 ರಿಂದ 19 ಕೆಜಿ ವಾಣಿಜ್ಯ ಎಲ್​ಪಿಜಿ ಸಿಲಿಂಡರ್​ ಬೆಲೆಯಲ್ಲಿ ಸುಮಾರು 49 ರೂಗಳಷ್ಟು ಏರಿಕೆಯನ್ನು ನಿರೀಕ್ಷಿಸಲಾಗಿದೆ.

ರೈಲು ಟಿಕೆಟ್ ಬುಕಿಂಗ್
ಮಾರ್ಚ್ 1, 2026 ರಿಂದ ಸಾಮಾನ್ಯ ಮತ್ತು ಪ್ಲಾಟ್‌ಫಾರ್ಮ್ ಟಿಕೆಟ್‌ಗಳನ್ನು ಬುಕ್ ಮಾಡುವ ನಿಯಮಗಳು ಬದಲಾಗಲಿವೆ. ಹಳೆಯ ಭಾರತೀಯ ರೈಲ್ವೆ UTS ಅಪ್ಲಿಕೇಶನ್ ಇದೇ ಮಾರ್ಚ್​ನಿಂದ ಸ್ಥಗಿತಗೊಳ್ಳಲಿದ್ದು, ಹೊಸ RailOne ಅಪ್ಲಿಕೇಶನ್​ ಬದಲಾಗಲಿದೆ. ಸಾಮಾನ್ಯ ಟಿಕೆಟ್‌ಗಳು, ಪ್ಲಾಟ್‌ಫಾರ್ಮ್ ಟಿಕೆಟ್‌ಗಳು ಮತ್ತು ಸ್ಥಳೀಯ ಪ್ರಯಾಣಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಹೊಸ ಅಪ್ಲಿಕೇಶನ್​ನಲ್ಲಿ ಲಭ್ಯವಿರುತ್ತದೆ.

ಸಿಮ್ ಬೈಂಡಿಂಗ್ ಕಾನೂನು
ಡಿಜಿಟಲ್ ವಂಚನೆಯನ್ನು ತಡೆಯಲು ಸರ್ಕಾರ ಮಾರ್ಚ್ 1 ರಿಂದ ಹೊಸ ಸಿಮ್ ಬೈಂಡಿಂಗ್ ಕಾನೂನನ್ನು ಜಾರಿಗೆ ತರುತ್ತಿದೆ. ಈ ಕಾನೂನಿನ ಪ್ರಕಾರ, ವಾಟ್ಸಾಪ್​, ಟೆಲಿಗ್ರಾಮ್​ ಮತ್ತು ಸಿಗ್ನಲ್​ನಂತಹ ಅಪ್ಲಿಕೇಶನ್​ಗಳು ನೇರವಾಗಿ ನಿಮ್ಮ ಮೊಬೈಲ್​ಗೆ ಲಿಂಕ್​ ಆಗುತ್ತವೆ. ನೀವೇನಾದರೂ ಮೊಬೈಲ್​ನಿಂದ ಸಿಮ್​ಗಳನ್ನು ತೆಗೆದುಹಾಕಿದರೆ, ಅಪ್ಲಿಕೇಶನ್​ಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತವೆ.

ಮೆಸೇಜಿಂಗ್ ಆಯಪ್‌ಗಳಿಂದ ಆಟೋ-ಲಾಗೌಟ್
ಹೊಸ ಭದ್ರತಾ ಮಾನದಂಡಗಳ ಪ್ರಕಾರ, ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಬಳಸುವ WhatsApp Web ನಂತಹ ಸೇವೆಗಳು ಪ್ರತಿ 6 ಗಂಟೆಗೊಮ್ಮೆ ಆಟೋಮ್ಯಾಟಿಕ್ ಆಗಿ ಲಾಗೌಟ್ ಆಗಲಿವೆ. ಬಳಕೆದಾರರು ಮತ್ತೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಮರು-ದೃಢೀಕರಣ ಮಾಡಬೇಕಾಗುತ್ತದೆ.

UPI ಪಾವತಿಗಳು
ಮಾರ್ಚ್ 1 ರಿಂದ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿನ ಭದ್ರತೆಯನ್ನು ಮತ್ತಷ್ಟು ಬಲಪಡಿಸಲು UPI ಪಾವತಿಗಳು ಸಜ್ಜಾಗಿವೆ. ದೊಡ್ಡ ಮೊತ್ತದ ಆನ್​ಲೈನ್​ ವರ್ಗಾವಣೆಯನ್ನು ಇನ್ನು ಮುಂದೆ UPI ಪಿನ್ ಬಳಸಿ ಮಾತ್ರ ಮಾಡಲಾಗುವುದಿಲ್ಲ. ಬದಲಿಗೆ ಹೆಚ್ಚಿನ ಮೌಲ್ಯದ ವಹಿವಾಟುಗಳಿಗೆ ಬ್ಯಾಂಕುಗಳು ಹೆಚ್ಚುವರಿ ಬಯೋಮೆಟ್ರಿಕ್ಸ್​ ಕಡ್ಡಾಯಗೊಳಿಸಿದೆ.

ಬ್ಯಾಂಕಿಂಗ್ ನಿಯಮಗಳು
ದೇಶದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕುಗಳು ಮಾರ್ಚ್ 1, 2026 ರಿಂದ ಕನಿಷ್ಠ ಬ್ಯಾಲೆನ್ಸ್ ಅವಶ್ಯಕತೆಗಳಲ್ಲಿ ಬದಲಾವಣೆಗಳನ್ನು ಜಾರಿಗೆ ತರುತ್ತಿವೆ. ಈ ಹಿಂದೆ, ಒಂದೇ ದಿನದಲ್ಲಿ ಬ್ಯಾಂಕ್​ ಖಾತೆಯಲ್ಲಿನ ಬ್ಯಾಲೆನ್ಸ್​ ಕಡಿಮೆಯಾದರೆ, ದಂಡ ವಿಧಿಸಲಾಗುತ್ತಿತ್ತು. ಆದರೆ, ಈಗ ಸರಾಸರಿ ತಿಂಗಳ ಬ್ಯಾಲೆನ್ಸ್​ ಆಧರಿಸಿ ದಂಡ ವಿಧಿಸಲಾಗುತ್ತದೆ. (ಏಜೆನ್ಸೀಸ್​).

Leave a Reply

Your email address will not be published. Required fields are marked *