BBMP
Loading ...

DKS

Greater Bengaluru News9 : ಇಕ್ಬಾಲ್ ಹುಸೇನ್ ಗಣಿಗ ರವಿ, ಶಿವಗಂಗಾನೂ ಬಾಯಿ ಮುಚ್ಚಿಕೊಂಡು‌ ಇರಬೇಕು. ಅವರು ಸುಮ್ಮನಿದ್ದರೆ ನನಗೆ ಒಳ್ಳೆಯದಾಗುತ್ತೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್‌ (D.K Shivakumar) ಹೇಳಿದ್ದಾರೆ.

ಕಾರವಾರದಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಶಾಸಕ ಇಕ್ಬಾಲ್ ಹುಸೇನ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು. ಅವರು ಸುಮ್ಮನಿದ್ದರೆ ನನಗೆ ಒಳ್ಳೆಯದಾಗುತ್ತದೆ ಎಂದಿದ್ದಾರೆ.

ಸಿಎಂ ಬಣದ 15ಕ್ಕೂ ಹೆಚ್ಚು ಶಾಸಕರು ವಿದೇಶಿ ಪ್ರವಾಸ ಹೋಗಿದ್ದು, ಈ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ವಿದೇಶ ಪ್ರವಾಸಕ್ಕೆ ಹೋದವರೆಲ್ಲ ನಮ್ಮವರೇ. ಅವರು ಬಂದ ಮೇಲೆ ಯಾತಕ್ಕಾಗಿ ಹೋಗಿದ್ದೀರಾ ಅಂತ ಕೇಳ್ತೀನಿ ಎಂದರು.

ಲೋಕಾ ವಿಚಾರದಲ್ಲಿ ಮಧ್ಯಪ್ರವೇಶ ಇಲ್ಲ
ಶಾಸಕ‌ ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ ಬಿದ್ದ ವಿಚಾರವಾಗಿ ಸ್ಪಷ್ಟೀಕರಣ ನೀಡಿದ ಅವರು ನಾನು‌ ಲೋಕಾಯುಕ್ತ ವಿಚಾರದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ. ಲೋಕಾಯುಕ್ತ ಸ್ವತಂತ್ರ ಸಂಸ್ಥೆಯಾಗಿದೆ. ನಾವ್ಯಾರು ಈ ಬಗ್ಗೆ ವಿಚಾರ ಮಾಡಲು ಹೋಗಿಲ್ಲ. ಬಿಜೆಪಿಯವರೇ ಈ ಬಗ್ಗೆ ಮಾತನಾಡಬೇಕು ಎಂದರು.

Leave a Reply

Your email address will not be published. Required fields are marked *