Greater Bengaluru News9 : ಮಹಿಳೆಯೊಬ್ಬರ ಚಿನ್ನದ ಸರ ಕಿತ್ತು ಪರಾರಿಯಾಗುತ್ತಿದ್ದ ಆರೋಪಿಯನ್ನು ಕಾನ್ಸ್‌ಟೇಬಲ್ ಒಬ್ಬರು ಸುಮಾರು ಒಂದು ಕಿಲೋಮೀಟರ್‌ವರೆಗೆ ಬೆನ್ನತ್ತಿ ಹಿಡಿದ ಘಟನೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಫೆಬ್ರವರಿ 5ರಂದು ದ್ರಾಕ್ಷಾಯಣಿ ಎಂಬ ಮಹಿಳೆಯ ಸರವನ್ನು ಕಿತ್ತು ಆರೋಪಿಯು ಓಡಿಹೋಗುತ್ತಿದ್ದನು. ಈ ವೇಳೆ ಅಲ್ಲಿದ್ದ ನದರದ ಸಶಸ್ತ್ರ ಮೀಸಲು ಪಡೆಯ ಕಾನ್ಸ್‌ಟೇಬಲ್ ಹಣಮಂತ ಪುಟಾಣಿ ತಕ್ಷಣವೇ ಆರೋಪಿಯನ್ನು ಬೆನ್ನತ್ತಿದ್ದಾರೆ.
ಸುಮಾರು ಒಂದು ಕಿಲೋಮೀಟರ್‌ವರೆಗೆ ಚೇಸ್ ಮಾಡಿದ ಬಳಿಕ ಸೈಯದ್ ಜಾಫರ್ ಎಂಬ ಆರೋಪಿಯನ್ನು ಹಣಮಂತ ಪುಟಾಣಿ ಬಂಧಿಸಿದ್ದಾರೆ.
ಬಂಧಿತನಿಂದ ಸುಮಾರು 6 ಲಕ್ಷ ರೂ. ಮೌಲ್ಯದ 40 ಗ್ರಾಂ ತೂಕದ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಲಾಗುತ್ತಿದೆ.


