BBMP
Loading ...

Seemanth Kumar

Greater Bengaluru News9: ನಗರ ಪೊಲೀಸ್ ಆಯುಕ್ತರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆಯುವ ಮೂಲಕ ವಂಚನೆ ಯತ್ನ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತ Seemanth Kumar Singh ಅವರ ಹೆಸರಿನಲ್ಲಿ ನಕಲಿ ಎಫ್‌ಬಿ ಖಾತೆ ಸೃಷ್ಟಿಸಿ, ಗಣ್ಯ ವ್ಯಕ್ತಿಗಳ ಜೊತೆ ಇರುವ ಫೋಟೋಗಳನ್ನು ಪೋಸ್ಟ್ ಮಾಡಲಾಗಿದೆ. ಹಿಂದಿ ಹೆಸರಿನೊಂದಿಗೆ ಖಾತೆ ರಚಿಸಿರುವ ವಂಚಕರು, ಆಯುಕ್ತರೇ ಪೋಸ್ಟ್ ಮಾಡುತ್ತಿದ್ದಾರೆ ಎಂಬಂತೆ ಜನರನ್ನು ನಂಬಿಸುವ ಯತ್ನ ನಡೆಸಿದ್ದಾರೆ.

ಈ ನಕಲಿ ಖಾತೆಯಿಂದ ತಪ್ಪು ಸಂದೇಶಗಳನ್ನು ಕಳುಹಿಸಿ ಸಾರ್ವಜನಿಕರನ್ನು ದಾರಿ ತಪ್ಪಿಸುವ ಪ್ರಯತ್ನ ನಡೆದಿದೆ. ಕೆಲವು ನಾಗರಿಕರು ಖಾತೆಯನ್ನು ನಿಜವೆಂದು ಭಾವಿಸಿ ಪ್ರತಿಕ್ರಿಯೆ ನೀಡಿರುವುದು ತಿಳಿದುಬಂದಿದೆ. ಮೊದಲು ನಂಬಿಕೆ ಗಳಿಸಿ ಬಳಿಕ ಹಣ ವಂಚಿಸುವ ಉದ್ದೇಶದಿಂದ ಈ ಖಾತೆ ಸೃಷ್ಟಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆ ಕೂಡ Alok Kumar ಹಾಗೂ Bheema Shankar Guled ಅವರ ಹೆಸರಿನಲ್ಲಿ ನಕಲಿ ಸಾಮಾಜಿಕ ಜಾಲತಾಣ ಖಾತೆಗಳು ರಚನೆಯಾಗಿದ್ದವು.

ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಇಂತಹ ನಕಲಿ ಖಾತೆಗಳಿಗೆ ಸಾರ್ವಜನಿಕರು ಮೋಸ ಹೋಗಬಾರದು ಹಾಗೂ ಅನುಮಾನಾಸ್ಪದ ಖಾತೆಗಳ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *